ಬ್ರಿಟನ್ ಸೂಪರ್ ಪವರ್ ಆಗಿದ್ದ ಟೆಕ್ನಾಲಜಿಯಿಂದಲಾ? ಸೂಪರ್ ಪವರ್ ಆದ್ದರಿಂದ ತಂತ್ರಜ್ಞಾನ ಪಡೆಯಿತಾ?: ಪೂರ್ಣೇಂದು ಪ್ರಶ್ನೆ

Purnendu Chatterjee at News9 global summit: ಬ್ರಿಟನ್ ಸೂಪರ್ ಪವರ್ ಆಗಿದ್ದು ತಂತ್ರಜ್ಞಾನದಿಂದಲೋ, ಅಥವಾ ಸೂಪರ್ ಪವರ್ ಆಗಿದ್ದರಿಂದ ತಂತ್ರಜ್ಞಾನ ಹೊಂದಿತೋ ಯೋಚಿಸಿ ಎಂದು ಭಾರತೀಯ ಉದ್ಯಮಿ ಪೂರ್ಣೇಂದು ಚಟರ್ಜಿ ಪ್ರಶ್ನೆ ಕೇಳಿದ್ದಾರೆ. ನ್ಯೂಸ್9 ಗ್ಲೋಬಲ್ ಸಮಿಟ್​ನ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಅವರು ಎಐ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಬ್ರಿಟನ್ ಸೂಪರ್ ಪವರ್ ಆಗಿದ್ದ ಟೆಕ್ನಾಲಜಿಯಿಂದಲಾ? ಸೂಪರ್ ಪವರ್ ಆದ್ದರಿಂದ ತಂತ್ರಜ್ಞಾನ ಪಡೆಯಿತಾ?: ಪೂರ್ಣೇಂದು ಪ್ರಶ್ನೆ
ಪೂರ್ಣೇಂದು ಚಟರ್ಜಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 22, 2024 | 7:59 PM

ನವದೆಹಲಿ, ನವೆಂಬರ್ 22: ಭಾರತವನ್ನು 200 ವರ್ಷ ಬ್ರಿಟಿಷರು ಆಳ್ವಿಕೆ ನಡೆಸಿದರು. ಆಗ ಬ್ರಿಟನ್ ಸೂಪರ್ ಪವರ್ ಆಗಿತ್ತು. ಬ್ರಿಟನ್ ಸೂಪರ್ ಪವರ್ ಆಗಿದ್ದು ತಂತ್ರಜ್ಞಾನ ದಿಂದಲೋ, ಅಥವಾ ಸೂಪರ್ ಪವರ್ ಆಗಿದ್ದರಿಂದ ತಂತ್ರಜ್ಞಾನ ಹೊಂದಿತೋ ಯೋಚಿಸಿ ಎಂದು ಭಾರತೀಯ ಉದ್ಯಮಿ ಪೂರ್ಣೇಂದು ಚಟರ್ಜಿ ಪ್ರಶ್ನೆ ಕೇಳಿದ್ದಾರೆ. ಜರ್ಮನಿಯಲ್ಲಿ ನಡೆಯುತ್ತಿರುವ ನ್ಯೂಸ್9 ಗ್ಲೋಬಲ್ ಸಮಿಟ್​ನ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಈ ಕುತೂಹಲಕಾರಿ ಸಂಗತಿಯನ್ನು ಪ್ರಸ್ತಾಪಿಸಿದರು.

ದಿ ಚಟರ್ಜಿ ಗ್ರೂಪ್ (ಟಿಸಿಜಿ) ಮುಖ್ಯಸ್ಥರಾದ ಪೂರ್ಣೇಂದು ಚಟರ್ಜಿ ಅವರು ಈಗಿನ ಸಂದರ್ಭದಲ್ಲಿ ಜಗತ್ತಿಗೆ ಸಂಚಲ ಮೂಡಿಸುವುದು ಟ್ರಂಪ್ 2.0 ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: 20 ವರ್ಷದ ಹಿಂದೆ ಭಾರತೀಯ ಕಂಪನಿಗಳ ಬಗ್ಗೆ ಜರ್ಮನಿಯಲ್ಲಿ ನಂಬಿಕೆ ಇರಲಿಲ್ಲ, ಇವತ್ತು ಸ್ಥಿತಿ ಬದಲಾಗಿದೆ: ಬಾಬಾ ಕಲ್ಯಾಣಿ

ಅಮೆರಿಕದ ಷೇರು ಮಾರುಕಟ್ಟೆಯಲ್ಲಿರುವ ಗೂಗಲ್, ಫೇಸ್​ಬುಕ್ ಇತ್ಯಾದಿ ಮ್ಯಾಗ್ನಿಫಿಕೆಂಟ್ ಸೆವೆನ್ ಸ್ಟಾಕ್​ಗಳ ಬಗ್ಗೆ ಮಾತನಾಡಿದ ಚಟರ್ಜಿ, ಈ ಏಳು ಕಂಪನಿಗಳ ಮಾರುಕಟ್ಟೆ ಬಂಡವಾಳ 17 ಟ್ರಿಲಿಯನ್ ಡಾಲರ್ ಆಗಿದೆ. ಅಮೆರಿಕದ ಒಟ್ಟಾರೆ ಮಾರುಕಟ್ಟೆ ಬಂಡವಾಳದಲ್ಲಿ ಇವುಗಳ ಪಾಲು ಶೇ. 31ರಷ್ಟಿದೆ ಎನ್ನುವ ಸಂಗತಿಯನ್ನು ಅವರು ಹಂಚಿಕೊಂಡರು.

ಎಐನಿಂದ ಮಾರುಕಟ್ಟೆ ಹೇಗೆ ಸಂಚಲನಗೊಳ್ಳಬಹುದು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ಪೂರ್ಣೇಂದು, ಆರ್ ಅಂಡ್ ಡಿ, ಪ್ರಾಡಕ್ಟ್ ಡಿಸೈನಿಂಗ್ ಇತ್ಯಾದಿ ಬಿಸಿನೆಸ್​ಗಳನ್ನು ಹೆಸರಿಸಿದರು.

ಇದನ್ನೂ ಓದಿ: News9 Global Summit: ಮರುಬಳಕೆ ಇಂಧನ ಕ್ಷೇತ್ರದಲ್ಲಿ ಭಾರತ ವಿಶ್ವನಾಯಕನಾಗಬಲ್ಲುದು: ಬಿ.ಸಿ. ತ್ರಿಪಾಠಿ

ಭಾರತದಲ್ಲಿ ಆರ್ ಅಂಡ್ ಡಿಯಲ್ಲಿ ಹಿಂದುಳಿದಿದೆ. ಇವತ್ತು ಭಾರತದಲ್ಲೇ ಆವಿಷ್ಕಾರವಾದ ಉತ್ಪನ್ನಗಳು ಬಹಳ ಕಡಿಮೆ. ಆಧಾರ್ ಇತ್ಯಾದಿಯನ್ನು ಹೊರತುಪಡಿಸಿದರೆ ನಾವು ಬೇರೆಯವರ ತಂತ್ರಜ್ಞಾನವನ್ನು ಪಡೆದಿದ್ದೇ ಹೆಚ್ಚು. ಆದರೆ, ಭಾರತವು ಇನ್ನೋವೇಶನ್​ನಲ್ಲಿ ಮಿಂಚುವ ಸಾಮರ್ಥ್ಯ ಹೊಂದಿದೆ. ಕ್ವಾಂಟಂ ಕಂಪ್ಯೂಟಿಂಗ್, ಬ್ಯಾಟರಿ ಇತ್ಯಾದಿಯಲ್ಲಿ ಬಹಳ ಬೇಡಿಕೆ ಇದೆ. ಅಮೆರಿಕ, ಜರ್ಮನಿ ಮೊದಲಾದ ದೇಶಗಳಿಗೆ ನುರಿತ ಕೆಲಸಗಾರರ ಅವಶ್ಯಕತೆ ಇದೆ. ಭಾರತವು ಇದನ್ನು ಪೂರೈಸಬಲ್ಲುದು ಎಂದು ಟಿಸಿಜಿ ಛೇರ್ಮನ್ ತಿಳಿಸಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?