Cash Transaction: ಈ 5 ವಹಿವಾಟಿನಲ್ಲಿ ನಗದು ಮಿತಿ ಮೀರಿದರೆ ಬಾಗಿಲು ತಟ್ಟುತ್ತದೆ ಐ.ಟಿ. ನೋಟಿಸ್
Cash Transactions Limit: ದೊಡ್ಡ ಮೊತ್ತದ ನಗದು ವಹಿವಾಟನ್ನು ಮಾಡುವ ಮುಂಚೆ ಬಹಳ ಎಚ್ಚರಿಕೆಯಿಂದ ಇರಬೇಕು. ಅದರಲ್ಲೂ ಮುಖ್ಯವಾಗಿ ಈ 5 ವಹಿವಾಟನ್ನು ಮಾಡುವಾಗ ಹುಷಾರಾಗಿ ಇಲ್ಲದಿದ್ದರೆ ಆದಾಯ ತೆರಿಗೆ ಇಲಾಖೆ ನೋಟಿಸ್ ಹುಡುಕಿಕೊಂಡು ಬರುತ್ತದೆ.
ಕಳೆದ ಕೆಲವು ವರ್ಷಗಳಿಂದಲೇ ಆದಾಯ ತೆರಿಗೆ ಇಲಾಖೆ, ಬ್ಯಾಂಕ್ಗಳು, ಮ್ಯೂಚುವಲ್ ಫಂಡ್ ಹೌಸ್ಗಳು, ಬ್ರೋಕರ್ ಪ್ಲಾಟ್ಫಾರ್ಮ್ಗಳು ಮುಂತಾದವು ನಗದು ವ್ಯವಹಾರಗಳಿಗೆ ಉತ್ತೇಜನ ನೀಡುತ್ತಿಲ್ಲ. ಕಠಿಣ ನಿಯಮಗಳನ್ನು ರೂಪಿಸುತ್ತಾ ಸಾರ್ವಜನಿಕರು ನಗದು ವ್ಯವಹಾರ ನಡೆಸದಂತೆ ನೋಡಿಕೊಳ್ಳುತ್ತಿವೆ. ಈಚಿನ ದಿನಗಳಲ್ಲಿ ಒಂದು ವೇಳೆ ನಗದು ವ್ಯವಹಾರ ಅಂತೇನೋ ಮಾಡಬೇಕು ಅಂದರೂ ಅದಕ್ಕೆ ಇಂತಿಷ್ಟು ಅಂತ ಮಿತಿ ಹಾಕಲಾಗಿದೆ. ಆ ಸಂಸ್ಥೆಗಳ ನಿರ್ಬಂಧವನ್ನು ಇಷ್ಟೇ ಇಷ್ಟು ಮೀರಿದರೂ ಆದಾಯ ತೆರಿಗೆ ಇಲಾಖೆಯ ನೋಟಿಸ್ ಹುಡುಕಿಕೊಂಡು ಬಂದೇ ಬಿಡುತ್ತದೆ.
ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ. ದೊಡ್ಡ ಮೊತ್ತದ ನಗದು ವ್ಯವಹಾರಗಳನ್ನು ಪತ್ತೆ ಹಚ್ಚುವುದಕ್ಕೆ ಅಂತಲೇ ಹಲವು ಸಾಧನಗಳಿವೆ. ಉದಾಹರಣೆಗೆ, ಷೇರು ಮಾರುಕಟ್ಟೆಯಲ್ಲಿ ನಗದು ಬಳಸಿ, ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಯಾರಾದರೂ ವ್ಯಕ್ತಿ ಹೂಡಿಕೆ ಮಾಡಿದಲ್ಲಿ ಅದನ್ನು ಬ್ರೋಕರ್ ಬ್ಯಾಲೆನ್ಸ್ಶೀಟ್ನಲ್ಲಿ ಈ ಹೂಡಿಕೆ ಬಗ್ಗೆ ವರದಿ ಮಾಡಬೇಕು. ಆದ್ದರಿಂದ ದೊಡ್ಡ ಮೊತ್ತದ ನಗದು ವಹಿವಾಟುಗಳ ಮಿತಿಯನ್ನು ತಿಳಿದುಕೊಳ್ಳಬೇಕು. ಮತ್ತು ಆ ಪರಿಮಿತಿಯೊಳಗೇ ಬಗದು ವ್ಯವಹಾರ ಮಾಡಬೇಕು. ಆಗ ಆದಾಯ ತೆರಿಗೆ ನೋಟಿಸ್ ಬಾರದಂತೆ ನೋಡಿಕೊಳ್ಳಬಹುದು.
ಟಾಪ್ 5 ನಗದು ವ್ಯವಹಾರಗಳು ಇಲ್ಲಿ ಪ್ರಸ್ತಾವ ಮಾಡಿದ್ದು, ಇವುಗಳಿಗೆ ಆದಾಯ ತೆರಿಗೆ ನೋಟಿಸ್ ಬರುವ ಸಾಧ್ಯತೆ ಹೆಚ್ಚು.
1) ಉಳಿತಾಯ ಖಾತೆ/ಚಾಲ್ತಿ ಖಾತೆ ವೈಯಕ್ತಿಕವಾಗಿ ನಗದು ಠೇವಣಿ ಮಿತಿ ಉಳಿತಾಯ ಖಾತೆಗೆ (ಸೇವಿಂಗ್ಸ್ ಬ್ಯಾಂಕ್ ಅಕೌಂಟ್) ಮಿತಿ ರೂ. 1 ಲಕ್ಷ. ಒಂದು ವೇಳೆ ಉಳಿತಾಯ ಖಾತೆದಾರರು 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಡೆಪಾಸಿಟ್ ಮಾಡಿದಲ್ಲಿ ಆಗ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಕಳಿಸಬಹುದು. ಅದೇ ರೀತಿ ಚಾಲ್ತಿ ಖಾತೆಗೆ (ಕರೆಂಟ್ ಅಕೌಂಟ್). 50 ಲಕ್ಷ ರೂಪಾಯಿಯ ಮಿತಿ ಇದೆ. ಈ ಮಿತಿಯನ್ನು ಮೀರಿದಲ್ಲಿ ಆದಾಯ ತೆರಿಗೆ ನೋಟಿಸ್ ಬರಬಹುದು.
2) ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡುವಾಗ 1 ಲಕ್ಷ ರೂಪಾಯಿ ದಾಟಬಾರದು. ಇದರಲ್ಲೇನಾದರೂ ಮಿತಿಯನ್ನು ದಾಟಿದಲ್ಲಿ ಆಗಲೂ ಆದಾಯ ತೆರಿಗೆ ಇಲಾಖೆ ಗಮನಕ್ಕೆ ಬರುತ್ತದೆ.
3) ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ (ಎಫ್ಡಿ) ಬ್ಯಾಂಕ್ಗಳ ಎಫ್ಡಿಯಲ್ಲಿ ನಗದು ಡೆಪಾಸಿಟ್ಗೆ ಅವಕಾಶ ಇದೆ. ಆದರೆ ಅದು 10 ಲಕ್ಷ ರೂಪಾಯಿ ದಾಟುವಂತಿಲ್ಲ. 10 ಲಕ್ಷ ರೂಪಾಯಿಯ ಮಿತಿಯನ್ನು ದಾಟದಿರುವಂತೆ ನೋಡಿಕೊಳ್ಳುವುದು ಉತ್ತಮ.
4)ಮ್ಯೂಚುವಲ್ ಫಂಡ್/ಷೇರು ಮಾರ್ಕೆಟ್/ಬಾಂಡ್/ಡಿಬೆಂಚರ್ ಯಾರು ಮ್ಯೂಚವಲ್ ಫಂಡ್, ಸ್ಟಾಕ್ಗಳು, ಬಾಂಡ್ ಅಥವಾ ಡಿಬೆಂಚರ್ಗಳ ಮೇಲೆ ಹೂಡಿಕೆ ಮಾಡುತ್ತಾರೋ ಅದಕ್ಕೂ 10 ಲಕ್ಷ ರೂಪಾಯಿಯ ಮಿತಿಯನ್ನು ವಿಧಿಸಲಾಗಿದೆ. ಒಂದು ವೇಳೆ ಈ ನಿಯಮವನ್ನು ಮೀರಿದರೆ ಅಂಥ ವ್ಯಕ್ತಿಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್ (ಐಟಿಆರ್) ಪರಿಶೀಲನೆ ಮಾಡುತ್ತದೆ ಆದಾಯ ತೆರಿಗೆ ಇಲಾಖೆ.
5) ರಿಯಲ್ ಎಸ್ಟೇಟ್ ಯಾವುದೇ ಸ್ತಿ ಖರೀದಿ ಅಥವಾ ಮಾರಾಟ ಮಾಡುವಾಗ 30 ಲಕ್ಷ ರೂಪಾಯಿ ಮೇಲ್ಪಟ್ಟು ನಗದು ವಹಿವಾಟನ್ನು ನಡೆಸಿದಲ್ಲಿ ಆಗ ಆದಾಯ ತೆರಿಗೆ ಇಲಾಖೆಯಿಂದ ಪ್ರಶ್ನೆ ಮಾಡಲಾಗುತ್ತದೆ. ಆದ್ದರಿಂದ ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ 30 ಲಕ್ಷ ರೂಪಾಯಿ ಮೇಲ್ಪಟ್ಟ ವಹಿವಾಟನ್ನು ಆದಾಯ ತೆರಿಗೆ ಇಲಾಖೆಯಿಂದ ಉತ್ತೇಜಿಸುವುದಿಲ್ಲ.
ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್ಗಳಿಗೆ ಸುತ್ತೋಲೆ
ಇದನ್ನೂ ಓದಿ: Income Tax Rules: ಏಪ್ರಿಲ್ 1ರಿಂದ ಬದಲಾಗಲಿದೆ ಆದಾಯ ತೆರಿಗೆಯ ಈ 5 ನಿಯಮ
(These 5 cash transaction limit violation can attract Income Tax notice. Here is the details of those transactions)
Published On - 12:49 pm, Fri, 7 May 21