ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಐಎಂಪಿಎಸ್, ಎನ್ಇಎಫ್ಟಿ ಮತ್ತು ಆರ್ಟಿಜಿಎಸ್ ವಹಿವಾಟುಗಳೂ ಸೇರಿ ಆನ್ಲೈನ್ ವ್ಯವಹಾರಗಳ ಕಾರ್ಯ ಚಟುವಟಿಕೆಯನ್ನು ಬದಲಾವಣೆಗೆ ಸಿದ್ಧವಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಮಿಡೆಯೆಟ್ ಪೇಮೆಂಟ್ ಸರ್ವೀಸ್ (ಐಎಂಪಿಎಸ್) ವಹಿವಾಟಿನ ಮಿತಿಯನ್ನು ಹೆಚ್ಚಳ ಮಾಡಿದೆ. ಇದರ ಅಡಿಯಲ್ಲಿ ಎಸ್ಬಿಐ ಖಾತೆದಾರರು 2 ಲಕ್ಷದ ಬಲಿಗೆ 5 ಲಕ್ಷ ರೂಪಾಯಿ ತನಕ ವಹಿವಾಟು ನಡೆಸಬಹುದು, ಎಂದು ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಸೂಚನೆ ಹೊರಡಿಸಿದೆ. ಡಿಜಿಟಲ್ ಆಗಿ ವಹಿವಾಟು ನಡೆಸಿದಲ್ಲಿ 5 ಲಕ್ಷ ರೂಪಾಯಿ ತನಕ ಮಾಡುವ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಶುಲ್ಕ ಇಲ್ಲ, ಅದು ಕೂಡ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಯೋನೋ ಮೂಲಕ.
“ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಉತ್ತೇಜಿಸುವ ಗುರಿಯೊಂದಿಗೆ 5 ಲಕ್ಷ ರೂಪಾಯಿ ತನಕ ಐಎಂಪಿಎಸ್ ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಆ ವಹಿವಾಟನ್ನು ಯೋನೋ ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಿರಬೇಕು. ಒಂದು ವೇಳೆ ಶಾಖೆಯ ಮೂಲಕ ಮಾಡಿದ್ದಲ್ಲಿ ಈಗಿರುವಂತೆಯೇ ಐಎಂಪಿಎಸ್ಗೆ ವಿಧಿಸುತ್ತಿರುವ ಸೇವಾ ಶುಲ್ಕವು ಅನ್ವಯ ಆಗುತ್ತದೆ,” ಎಂದು ಜನವರಿ 4ರಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆದರೆ, 2 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಹೊಸ ಸ್ಲ್ಯಾಬ್ ಸೇರ್ಪಡೆಯಾಗಿದ್ದು, ಇದಕ್ಕೆ ಪ್ರಸ್ತಾವಿತ ಸೇವಾ ಶುಲ್ಕವಾಗಿ ರೂ. 20+ ಜಿಎಸ್ಟಿ ಫೆಬ್ರವರಿ 1, 2022ರಿಂದ ಅನ್ವಯಿಸುತ್ತದೆ. ಎನ್ಇಎಫ್ಟಿ/ಆರ್ಟಿಜಿಎಸ್ ಮೇಲಿನ ಸೇವಾ ಶುಲ್ಕದಂತೆಯೇ ಐಎಂಪಿಎಸ್ ಮೇಲೆ ಸೇವಾ ಶುಲ್ಕ ಇದೆ,” ಎಂದು ಬ್ಯಾಂಕ್ ತಿಳಿಸಿದೆ. ಈ ಹೊಸ ಬದಲಾವಣೆಯು ಈ ವರ್ಷದ ಫೆಬ್ರವರಿ 1ರಿಂದ ಅನ್ವಯ ಆಗುತ್ತದೆ.
ಎಸ್ಬಿಐನಲ್ಲಿ ಐಎಂಪಿಎಸ್, ಎನ್ಇಎಫ್ಟಿ ಮತ್ತು ಆರ್ಟಿಜಿಎಸ್ ವಹಿವಾಟುಗಳಿಗೆ ಹೊಸ ನಿಯಮ
ಐಎಂಪಿಎಸ್ ಶುಲ್ಕ- ಆನ್ಲೈನ್ ವಿಧಾನ
ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಮೂಲಕ ವಹಿವಾಟು ನಡೆಸಿದಲ್ಲಿ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕ ಅಥವಾ ಜಿಎಸ್ಟಿ ಅನ್ವಯಿಸಲ್ಲ. ಅದು 5 ಲಕ್ಷ ರೂಪಾಯಿಯೊಳಗಿನ ಮೊತ್ತಕ್ಕೆ. ಇದರಲ್ಲಿ ಯೋನೋ ಆ್ಯಪ್ ಮೂಲಕದ ವಹಿವಾಟುಗಳು ಒಳಗೊಂಡಿವೆ.
ಐಎಂಪಿಎಸ್ ಶುಲ್ಕಗಳು- ಆಫ್ಲೈನ್ ವಿಧಾನ
1000 ರೂ. ತನಕ: ಯಾವುದೇ ಶುಲ್ಕವಿಲ್ಲ
1000 ರೂ. ಮೇಲ್ಪಟ್ಟು ರೂ. 10 ಸಾವಿರ ತನಕ: ರೂ. 2 ಸೇವಾ ಶುಲ್ಕ + ಜಿಎಸ್ಟಿ
10000 ರೂ. ಮೇಲ್ಪಟ್ಟು ರೂ. 1 ಲಕ್ಷ ತನಕ: ರೂ. 4 ಸೇವಾ ಶುಲ್ಕ + ಜಿಎಸ್ಟಿ
1 ಲಕ್ಷ ರೂ. ಮೇಲ್ಪಟ್ಟು ರೂ. 2 ಲಕ್ಷ ತನಕ: ರೂ. 12 ಸೇವಾ ಶುಲ್ಕ + ಜಿಎಸ್ಟಿ
2 ಲಕ್ಷ ರೂ. ಮೇಲ್ಪಟ್ಟು ರೂ. 5 ಲಕ್ಷ ತನಕ (ಹೊಸ ಸ್ಲ್ಯಾಬ್): ರೂ. 20 ಸೇವಾ ಶುಲ್ಕ + ಜಿಎಸ್ಟಿ
ಎನ್ಇಎಫ್ಟಿ ಸೇವಾ ಶುಲ್ಕಗಳು- ಆನ್ಲೈನ್ ವಿಧಾನ
ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಬ್ಯಾಂಕಿಂಗ್, ಯೋನೋ ಆ್ಯಪ್ ಸೇರಿದಂತೆ ಎನ್ಇಎಫ್ಟಿ ವಹಿವಾಟುಗಳಿಗೆ ಯಾವುದೇ ಜಿಎಸ್ಟಿ ಅಥವಾ ಸೇವಾ ಶುಲ್ಕ ಇಲ್ಲ. 2 ಲಕ್ಷ ರೂಪಾಯಿ ಮೇಲ್ಪಟ್ಟ ಮೊತ್ತಕ್ಕೂ ಇದು ಅನ್ವಯಿಸುತ್ತದೆ.
ಎನ್ಇಎಫ್ಟಿ ಸೇವಾ ಶುಲ್ಕಗಳು- ಆಫ್ಲೈನ್ ವಿಧಾನ
10,000 ರೂ. ತನಕ: ರೂ. 2 ಸೇವಾ ಶುಲ್ಕ + ಜಿಎಸ್ಟಿ
10,000 ರೂ. ಮೇಲ್ಪಟ್ಟು ರೂ. 1 ಲಕ್ಷ ತನಕ: ರೂ. 4 ಸೇವಾ ಶುಲ್ಕ + ಜಿಎಸ್ಟಿ
1 ಲಕ್ಷ ರೂ. ಮೇಲ್ಪಟ್ಟು ರೂ. 2 ಲಕ್ಷ ತನಕ: ರೂ. 12 ಸೇವಾ ಶುಲ್ಕ + ಜಿಎಸ್ಟಿ
2 ಲಕ್ಷ ರೂ. ಮೇಲ್ಪಟ್ಟು : ರೂ. 20 ಸೇವಾ ಶುಲ್ಕ + ಜಿಎಸ್ಟಿ
ಆರ್ಟಿಜಿಎಸ್ ಶುಲ್ಕಗಳು: ಆನ್ಲೈನ್ ವಿಧಾನ
ಇಂಟರ್ನೆಟ್ ಅಥವಾ ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಯೋನೋ ಆ್ಯಪ್ ಮೂಲಕ ಮಾಡುವ ಆರ್ಟಿಜಿಎಸ್ ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕ ಅಥವಾ ಜಿಎಸ್ಟಿ ಅನ್ವಯ ಆಗಲ್ಲ. ಮೊತ್ತವು 5 ಲಕ್ಷ ರೂಪಾಯಿ ದಾಟಿದರೂ ಯಾವುದೇ ಶುಲ್ಕ ತಗುಲುವುದಿಲ್ಲ.
ಆರ್ಟಿಜಿಎಸ್ ಶುಲ್ಕಗಳು: ಆಫ್ಲೈನ್ ವಿಧಾನ
2 ಲಕ್ಷ ರೂಪಾಯಿ ಮೇಲ್ಪಟ್ಟು ಮತ್ತು 5 ಲಕ್ಷ ರೂಪಾಯಿವರೆಗೆ: ರೂ. 20 ಸೇವಾ ಶುಲ್ಕ + ಜಿಎಸ್ಟಿ
5 ಲಕ್ಷ ರೂಪಾಯಿ ಮೇಲ್ಪಟ್ಟು: ರೂ. 40 ಸೇವಾ ಶುಲ್ಕ + ಜಿಎಸ್ಟಿ
ಈ ಮೇಲ್ಕಂಡ ಸೇವೆಗಳ ಎಲ್ಲ ಶುಲ್ಕಗಳು ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅನ್ವಯ ಆಗುವಂಥದ್ದು.
ಇದನ್ನೂ ಓದಿ: IMPS Charges: ಎಸ್ಬಿಐನಲ್ಲಿ 5 ಲಕ್ಷ ರೂಪಾಯಿ ತನಕ ಆನ್ಲೈನ್ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ
Published On - 1:48 pm, Fri, 14 January 22