Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್​ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?

ಇದೇ ಮೊದಲ ಬಾರಿಗೆ ಭಾರತೀಯ ಷೇರು ಮಾರುಕಟ್ಟೆ ಮೌಲ್ಯವು ಇದೇ ಮೊದಲ ಬಾರಿಗೆ ಫ್ರಾನ್ಸ್​ ಅನ್ನು ಮೀರಿ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಆರನೇ ಸ್ಥಾನದಲ್ಲಿ ನಿಂತಿದೆ.

Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್​ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Sep 16, 2021 | 12:02 PM

ಭಾರತದ ಷೇರು ಮಾರುಕಟ್ಟೆ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಇದೇ ಮೊದಲ ಬಾರಿಗೆ ಫ್ರಾನ್ಸ್​​ನ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು ಭಾರತವು ಮೀರಿ ಮುಂದೆ ಹೋಗಿದೆ. ಬೆಂಚ್​ಮಾರ್ಕ್​ ಸೆನ್ಸೆಕ್ಸ್​ ಈ ವರ್ಷ ಶೇ 23ಕ್ಕೂ ಹೆಚ್ಚಾಗಿದೆ. ಭಾರತದ ಮಾರುಕಟ್ಟೆ ಬಂಡವಾಳವು ಮಂಗಳವಾರದಂದು 3.4055 ಟ್ರಿಲಿಯನ್ ಯುಎಸ್​ಡಿ (ಟ್ರಿಲಿಯನ್​ ಅಂದರೆ ಲಕ್ಷ ಕೋಟಿ) ಇತ್ತು. ಇನ್ನು ಫ್ರಾನ್ಸ್​ ವಿಚಾರಕ್ಕೆ ಬಂದರೆ, 3.4023 ಯುಎಸ್​ಡಿ ಇತ್ತು ಎಂಬುದು ಬ್ಲೂಮ್​ಬರ್ಗ್​ ಡೇಟಾದಿಂದ ತಿಳಿದುಬಂದಿದೆ. ಮಾರುಕಟ್ಟೆ ಮೌಲ್ಯದ ವಿಚಾರಕ್ಕೆ ಬಂದರೆ ಭಾರತವು ಈ ವರ್ಷ ಭಾರೀ ಗಳಿಕೆಯನ್ನು ಕಂಡಿದೆ. 873.4 ಬಿಲಿಯನ್ ಡಾಲರ್ ಅಥವಾ ಶೇ 35ರಷ್ಟು ಏರಿಕೆ ಕಂಡಿದೆ. ಡಿಸೆಂಬರ್ 31, 2020ರಲ್ಲಿ ಮಾರುಕಟ್ಟೆ ಮೌಲ್ಯ 2.52 ಲಕ್ಷ ಕೋಟಿ ಡಾಲರ್ ಇತ್ತು. 2020ರ ಮಾರ್ಚ್​ನಲ್ಲಿ ಮಾರ್ಕೆಟ್​ ಕನಿಷ್ಠ ಮಟ್ಟವನ್ನು ತಲುಪಿದ ನಂತರ, ಮಾರುಕಟ್ಟೆ ಮೌಲ್ಯಕ್ಕೆ ಭಾರತವು 2.08 ಲಕ್ಷ ಕೋಟಿ ಅಮೆರಿಕನ್ ಡಾಲರ್ ಅಥವಾ ಶೇ 159ರಷ್ಟು ಗಳಿಕೆ ಕಂಡಿದೆ. ಮಾರುಕಟ್ಟೆ ಬಂಡವಾಳ 2.14 ಟ್ರಿಲಿಯನ್​ ಡಾಲರ್​ಗೆ 373 ಬಿಲಿಯನ್ ಅಮೆರಿಕನ್ ಡಾಲರ್ ಅಥವಾ ಶೇ 17.4ರಷ್ಟು ಸೇರ್ಪಡೆ ಆಗಿದೆ.

ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಮಾರುಕಟ್ಟೆ ಅಂದರೆ ಅದು ಅಮೆರಿಕದ ಷೇರು ಮಾರುಕಟ್ಟೆ. ಅದರ ಮಾರುಕಟ್ಟೆ ಬಂಡವಾಳ 51.3 ಟ್ರಿಲಿಯನ್ ಡಾಲರ್ ಇದೆ. ನಂತರದ ಸ್ಥಾನ ಚೀನಾದ್ದು. 12.42 ಟ್ರಿಲಿಯನ್ ಡಾಲರ್ ಇದೆ. ಜಪಾನ್​ 7.43 ಟ್ರಿಲಿಯನ್ ಡಾಲರ್, ಹಾಂಕಾಂಗ್​ 6.52 ಟ್ರಿಲಿಯನ್​ ಯುಎಸ್​ಡಿ ಮತ್ತು ಯುನೈಟೆಡ್​ ಕಿಂಗ್​ಡಮ್ 3.68 ಟ್ರಿಲಿಯನ್ ಡಾಲರ್ ಇದೆ. “ಪ್ರಬಲ ನಗದು ಲಭ್ಯತೆ ಮತ್ತು ಸಕಾರಾತ್ಮಕ ಸ್ಥೂಲ ಆರ್ಥಿಕ ಸಂಗತಿಗಳು ದೇಶೀಯ ಮಾರುಕಟ್ಟೆಯನ್ನು ಇನ್ನಷ್ಟು ದಾಖಲೆ ಎತ್ತರಕ್ಕೆ ಒಯ್ಯಲು ಬೆಂಬಲಿಸುತ್ತವೆ. ಗ್ರಾಹಕ ಬೇಡಿಕೆಯನ್ನು ತುಂಬ ಹತ್ತಿರದಿಂದ ಗಮನಿಸುತ್ತಿದ್ದು, ಅದು ಚೇತರಿಸುಕೊಳ್ಳುವ ನಿರೀಕ್ಷೆ ಇದೆ. ಹಬ್ಬದ ಋತು ಆರಂಭವಾಗಿ ಮತ್ತು ನಿರ್ಬಂಧಗಳು ಸಡಿಲ ಆಗುತ್ತಾ ಬರುತ್ತಿವೆ, ಆದರೂ ಈಗ ಕೂಡ ಕೊರೊನಾ ಮೂರನೇ ಅಲೆಯ ಆತಂಕ ಇದ್ದೇ ಇದೆ,” ಎಂದು ಮೋತಿಲಾಲ್ ಓಸ್ವಾಲ್ ತನ್ನ ವರದಿಯಲ್ಲಿ ಹೇಳಿದೆ.

ಈ ವರ್ಷದಲ್ಲಿ ಇಲ್ಲಿಯ ತನಕ ಸೆನ್ಸೆಕ್ಸ್ ಹಾಗೂ ನಿಫ್ಟಿ ಕ್ರಮವಾಗಿ ಶೇ 23 ಮತ್ತು ಶೇ 25ರಷ್ಟು ಮೇಲೇರಿದೆ. ವಿದೇಶೀ ಹೂಡಿಕೆದಾರರು 800 ಕೋಟಿ ಯುಎಸ್​ಡಿಯಷ್ಟು ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದು, ದೇಶೀ ಹೂಡಿಕೆದಾರರು 23,532 ಕೋಟಿ ರೂಪಾಯಿ ಹೂಡಿದ್ದಾರೆ. ಕಳೆದ ಜುಲೈನಲ್ಲಿ ಕೈಗಾರಿಕೆ ಉತ್ಪಾದನೆ ಸೂಚ್ಯಂಕ ಶೇ 11.5 ಆಗಿ, ಹತ್ತಿರಹತ್ತಿರ ಕೊವಿಡ್ ಮುಂಚಿನ ಹಂತಕ್ಕೆ ಬಂದು, ಸಮಾಧಾನ ತಂದಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಅದೇ ರೀತಿ ಆಗಸ್ಟ್​ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವು ಸಹ ಶೇ 5.3ರಷ್ಟನ್ನು ತಲುಪಿದೆ. ಇದರಿಂದಾಗಿ ಆರ್​ಬಿಐನಿಂದ ಹಣಕಾಸು ನೀತಿಯನ್ನು ಮೃದುವಾಗಿಯೇ ಮುಂದುವರಿಸಬಹುದು. ಈಗಿನ ಆರ್ಥಿಕ ಚೇತರಿಕೆ ಚಲನೆಗೆ ಬೆಂಬಲಿಸುವ ಹಣಕಾಸು ನೀತಿಯನ್ನೇ ಅನುಸರಿಸಬಹುದು.

ನಿರೀಕ್ಷೆ ಮಾಡಿದ್ದಕ್ಕಿಂತಲೂ ಉತ್ತಮ ಜಿಡಿಪಿ ಹಾಗೂ ಜಿಎಸ್​ಟಿ ಸಂಗ್ರಹವು ಗಳಿಕೆಯಲ್ಲಿ ಸುಸ್ಥಿರವಾಗಿ ಪುಟಿದೇಳುವ ಸೂಚನೆ ನೀಡುತ್ತಿದೆ. ಇದರಿಂದಾಗಿ ಮಾರುಕಟ್ಟೆಯನ್ನು ಪ್ರೀಮಿಯಂ ಮೌಲ್ಯಮಾಪನದಲ್ಲಿ ಇರಲು ಸಹಾಯ ಮಾಡುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಜಿಎಸ್​ಟಿ ಅಡಿಯಲ್ಲಿ ತರಬೇಕೇ ಬೇಡವೇ ಎಂಬುದರ ಬಗ್ಗೆ ತೀರ್ಮಾನ ಕೈಗೊಳ್ಳುವ ಸಲುವಾಗಿ ಶುಕ್ರವಾರದಂದು ಜಿಎಸ್​ಟಿ ಸಮಿತಿ ಸಭೆಯು ಸೇರಲಿದೆ.

ಇದನ್ನೂ ಓದಿ: Sensex: ಇನ್ನು 10 ವರ್ಷದಲ್ಲಿ 2,00,000 ಪಾಯಿಂಟ್ ತಲುಪುತ್ತದಂತೆ ಭಾರತದ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್

(This Is The First Time Indian Stock Market Value Overtakes France Becomes Sixth Biggest)

Published On - 11:49 am, Thu, 16 September 21

ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ