Tv9 Kannada Digital Explainer: ವಿದೇಶದಲ್ಲಿರುವ ಭಾರತದ ಆಸ್ತಿಗಳ ವಶಕ್ಕೆ ಕೇರ್ನ್ ಎನರ್ಜಿ ಮುಂದಾಗಿರುವುದು ಏಕೆ?

| Updated By: Srinivas Mata

Updated on: Jul 10, 2021 | 8:15 PM

ಈ ಹಿಂದಿನ ತೆರಿಗೆ ವಿವಾದದಲ್ಲಿ ಕೇರ್ನ್ ಎನರ್ಜಿಯು ಭಾರತ ಸರ್ಕಾರದ ವಿರುದ್ಧ ಗೆದ್ದ 1.2 ಬಿಲಿಯನ್ ಡಾಲರ್ ಮಧ್ಯಸ್ಥಿಕೆ ಪ್ರಕರಣವನ್ನು ಜಾರಿಗೊಳಿಸಲು ಪಡೆದ ನ್ಯಾಯಾಲಯದ ಮೊದಲ ಆದೇಶ ಪಡೆದಿದೆ. ಏನಿದು ಪ್ರಕರಣ, ಹಿನ್ನೆಲೆ ಮತ್ತಿತರ ವಿವರಗಳು ಇಲ್ಲಿವೆ.

Tv9 Kannada Digital Explainer: ವಿದೇಶದಲ್ಲಿರುವ ಭಾರತದ ಆಸ್ತಿಗಳ ವಶಕ್ಕೆ ಕೇರ್ನ್ ಎನರ್ಜಿ ಮುಂದಾಗಿರುವುದು ಏಕೆ?
ಪ್ರಾತಿನಿಧಿಕ ಚಿತ್ರ
Follow us on

ಪ್ಯಾರಿಸ್​ನಲ್ಲಿ ಇರುವ 20 ಮಿಲಿಯನ್ ಯೂರೋಗಳಷ್ಟು ಮೌಲ್ಯದ 20 ಭಾರತೀಯ ಸರ್ಕಾರಿ ಆಸ್ತಿಗಳ ಮೇಲೆ ನಿರ್ಬಂಧ ವಿಧಿಸುವ ಅಧಿಕಾರವನ್ನು ಬ್ರಿಟನ್‌ನ ಕೇರ್ನ್ ಎನರ್ಜಿ (Cairn Energy) ಪಿಎಲ್‌ಸಿಯು ಫ್ರೆಂಚ್ ನ್ಯಾಯಾಲಯದಿಂದ ಪಡೆದುಕೊಂಡಿದೆ ಎಂದು ಲಂಡನ್ ಮೂಲದ ಫೈನಾನ್ಷಿಯಲ್ ಟೈಮ್ಸ್ ಗುರುವಾರ ವರದಿ ಮಾಡಿದೆ. ಈ ಹಿಂದಿನ ತೆರಿಗೆ ವಿವಾದದಲ್ಲಿ ಕೇರ್ನ್ ಎನರ್ಜಿಯು ಭಾರತ ಸರ್ಕಾರದ ವಿರುದ್ಧ ಗೆದ್ದ 1.2 ಬಿಲಿಯನ್ ಡಾಲರ್ ಮಧ್ಯಸ್ಥಿಕೆ ಪ್ರಕರಣವನ್ನು ಜಾರಿಗೊಳಿಸಲು ಪಡೆದ ನ್ಯಾಯಾಲಯದ ಮೊದಲ ಆದೇಶ ಇದು. ಗುರುವಾರದಂದು ಹಣಕಾಸು ಸಚಿವಾಲಯವು ಈ ಬಗ್ಗೆ ಮಾಹಿತಿಯನ್ನು ನೀಡಿ, ಫ್ರೆಂಚ್​ನ ಯಾವುದೇ ನ್ಯಾಯಾಲಯದಿಂದ ಈ ಬಗ್ಗೆ ಸಂವಹನವನ್ನು ಸ್ವೀಕರಿಸಿಲ್ಲ ಮತ್ತು ಸತ್ಯವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ ಎಂದು ಮಾತ್ರ ಹೇಳಿದೆ.

ಏನು ವಿವಾದ?
ಭಾರತ ಮತ್ತು ಕೇರ್ನ್ ನಡುವಿನ ಮಧ್ಯಸ್ಥಿಕೆಯು ಭಾರತದ ಈ ಹಿಂದಿನ ಅವಧಿಯ ತೆರಿಗೆ ನೀತಿಯನ್ನು ಪ್ರಶ್ನಿಸಿತ್ತು. 1962ರ ನಂತರ ಭಾರತೀಯೇತರ ಕಂಪೆನಿಯೊಂದು ಭಾರತೀಯ ಹೋಲ್ಡಿಂಗ್ ಕಂಪೆನಿಗೆ ಷೇರು ವರ್ಗಾವಣೆ ಮಾಡಿದ್ದರೆ ಅದರ ತೆರಿಗೆಯನ್ನು ಕಟ್ಟಬೇಕು ಎಂದು 2012ನೇ ಇಸವಿಯಲ್ಲಿ ಕಾನೂನು ಪ್ರಕಾರ ಕಡ್ಡಾಯ ಮಾಡಲಾಗಿತ್ತು. ಕೇರ್ನ್ ಇಂಡಿಯಾ ಲಿಮಿಟೆಡ್ ಹೋಲ್ಡಿಂಗ್ ಕಂಪೆನಿ ಅಡಿಯಲ್ಲಿ ಬರುವ ಭಾರತದ ಆಸ್ತಿಗಳನ್ನು ಒಗ್ಗೂಡಿಸಲು 2006ರಲ್ಲಿ ಕೇರ್ನ್ ಕಂಪೆನಿ ಪ್ರಯತ್ನಿಸಿತು. ಹಾಗೆ ಮಾಡುವಾಗ, ಕೇರ್ನ್ ಯುಕೆಯಿಂದ ಕೇರ್ನ್ ಇಂಡಿಯಾ ಹೋಲ್ಡಿಂಗ್ಸ್‌ನ ಷೇರುಗಳನ್ನು ಕೇರ್ನ್ ಇಂಡಿಯಾ ಲಿಮಿಟೆಡ್‌ಗೆ ವರ್ಗಾಯಿಸಿತು. ಮುಖ್ಯವಾಗಿ ಭಾರತೀಯೇತರ ಕಂಪೆನಿಗಳಲ್ಲಿ ಇದ್ದ ಷೇರುಗಳನ್ನು ಭಾರತೀಯ ಹೋಲ್ಡಿಂಗ್ ಕಂಪೆನಿಗೆ ವರ್ಗಾಯಿಸಿತು.

ಆ ನಂತರ, ಕೇರ್ನ್ ಇಂಡಿಯಾ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೂಲಕ ಸುಮಾರು ಶೇ 30ರಷ್ಟು ಹಿಂಪಡೆದಾಗ, ಗಣಿಗಾರಿಕೆ ಗುಂಪಾದ ವೇದಾಂತ ಪಿಎಲ್​ಸಿಯಿಂದ ಹೆಚ್ಚಿನ ಪಾಲು ಕೇರ್ನ್ ಎನರ್ಜಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಆದರೆ ಕೇರ್ನ್ ಇಂಡಿಯಾದಲ್ಲಿ ಇದ್ದ ತನ್ನ ಶೇ 9.8ರಷ್ಟು ಪಾಲನ್ನು ಕೇರ್ನ್ ಯುಕೆ ಕಂಪೆನಿಯು ವೇದಾಂತಕ್ಕೆ ವರ್ಗಾಯಿಸಲು ಅನುಮತಿಸಲಿಲ್ಲ. ಈ ಹಿಂದೆಯೇ ವಹಿವಾಟುಗಳ ವಿಲೇವಾರಿ ಆಗಿದ್ದರೂ 2006ರಲ್ಲಿ ನಡೆದ ವಹಿವಾಟುಗಳಿಗೆ ಕೇರ್ನ್ ಯುಕೆಯಿಂದ 6,000 ಕೋಟಿ ರೂಪಾಯಿಗಳ ಬಂಡವಾಳ ಲಾಭದ ತೆರಿಗೆಯನ್ನು ಪಾವತಿಸಬೇಕು ಎಂದು ಭಾರತೀಯ ತೆರಿಗೆ ಅಧಿಕಾರಿಗಳು ತಿಳಿಸಿದ್ದರು. ಹಾಗೆ ನೋಡಿದರೆ ವೊಡಾಫೋನ್ ಪ್ರಕರಣದಲ್ಲಿ ತೆರಿಗೆ ಅಧಿಕಾರಿಗಳು ಕಾನೂನನ್ನು ಮರುಪರಿಶೀಲಿಸುವ ವಿರುದ್ಧ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಆದರೂ ಸಂಸತ್ತು “ಭಾರತೀಯ ಆಸ್ತಿಗಳ ವರ್ಗಾವಣೆಯ” ಮೇಲೆ ಹಿಂದಿನ ತೆರಿಗೆ ವಿಧಿಸುವ ಕಾನೂನನ್ನು ಜಾರಿಗೆ ತಂದಿತು. ಯು.ಕೆ.ನಿಂದ ಬರುವ ಹೂಡಿಕೆಯನ್ನು “ನ್ಯಾಯಯುತ ಮತ್ತು ಸಮಾನ ರೀತಿಯಲ್ಲಿ” ಭಾರತವು ಪರಿಗಣಿಸಬೇಕು ಎಂಬ ಯುಕೆ-ಇಂಡಿಯಾ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಕೇರ್ನ್ ವಾದಿಸಿತ್ತು.

ಕೇರ್ನ್ ಕಂಪೆನಿ ಈಗೇಕೆ ಭಾರತೀಯ ಆಸ್ತಿಗಳನ್ನು ವಶಕ್ಕೆ ಮುಂದಾಗಿದೆ?
ಕಳೆದ ವರ್ಷ ಡಿಸೆಂಬರ್‌ನಲ್ಲಿ, ಮೂರು ಸದಸ್ಯರ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯ ಮಂಡಳಿಯು ತೀರ್ಪೊಂದನ್ನು ನೀಡಿತು. ಅದರ ಪ್ರಕಾರ, ಭಾರತ ಸರ್ಕಾರವು “ನ್ಯಾಯಯುತ ಮತ್ತು ಸಮಾನವಾದ ನಡವಳಿಕೆ ಖಾತ್ರಿಯನ್ನು ಉಲ್ಲಂಘಿಸಿದೆ,” ಮತ್ತು ಇದು ಭಾರತ-ಯುಕೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ವಿರುದ್ಧವಾಗಿದೆ ಎಂದು ಒಮ್ಮತದಿಂದ ತೀರ್ಪು ನೀಡಿತು ಹಾಗೂ ಈ ಉಲ್ಲಂಘನೆಯಿಂದಾಗಿ ಆಗಿರುವ ನಷ್ಟಕ್ಕೆ ಬ್ರಿಟಿಷ್ ಇಂಧನ ಕಂಪೆನಿಗೆ 1.2 ಬಿಲಿಯನ್ ಡಾಲರ್ ಪರಿಹಾರವನ್ನು ಆದೇಶಿಸಿತು.

ಮಧ್ಯಸ್ಥಿಕೆ ತೀರ್ಪಿನ ಮೊತ್ತವನ್ನು ಭಾರತ ಸರ್ಕಾರ ಇನ್ನೂ ಸ್ವೀಕರಿಸಿಲ್ಲ. ಪರಿಹಾರವನ್ನು ಮರುಪಡೆಯಲು ಕೇರ್ನ್ ಎನರ್ಜಿಯು ವಿದೇಶಗಳಲ್ಲಿನ ಭಾರತೀಯ ಆಸ್ತಿಗಳನ್ನು ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಮೇ ತಿಂಗಳಲ್ಲಿ, ಕೇರ್ನ್ ಕಂಪೆನಿಯು 1.2 ಬಿಲಿಯನ್ ಅಮೆರಿಕನ್ ಡಾಲರ್ ವಸೂಲಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ಭಾರತ ಏಕೆ ಮಧ್ಯಸ್ಥಿಕೆ ಮೊತ್ತಕ್ಕೆ ಒಪ್ಪಿಕೊಂಡಿಲ್ಲ?
ಮಧ್ಯಸ್ಥಿಕೆ ರಿವಾರ್ಡ್ ಹೇಗ್‌ನಲ್ಲಿ ವಿತರಿಸಿದಾಗಿನಿಂದ ಭಾರತವು ನೆದರ್‌ಲೆಂಡ್‌ನಲ್ಲಿ ಮನವಿಯನ್ನು ಸಲ್ಲಿಸಿದೆ. ಡಚ್ ಟೆಲಿಕಾಂ ಕಂಪೆನಿ ವೊಡಾಫೋನ್ ಪರವಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇದೇ ರೀತಿಯ ಮಧ್ಯಸ್ಥಿಕೆ ತೀರ್ಪು ನೀಡಲಾಯಿತು. ಭಾರತವು ಭಾಗಶಃ ಪರಿಹಾರವಾಗಿ ವೊಡಾಫೋನ್‌ಗೆ 5.47 ಮಿಲಿಯನ್ ಅಮೆರಿಕನ್ ಡಾಲರ್ ಪಾವತಿಸಬೇಕಾಗಿದೆ.

ಕೇರ್ನ್ ವಶಕ್ಕೆ ಪಡೆಯಲು ಯತ್ನಿಸುತ್ತಿರುವ ಸ್ವತ್ತುಗಳು ಯಾವುವು?
ಕೇರ್ನ್ ಎನರ್ಜಿ ಇದುವರೆಗೆ ಹಲವಾರು ದೇಶಗಳಲ್ಲಿ ಮಧ್ಯಸ್ಥಿಕೆ ಅವಾರ್ಡ್ ನೋಂದಾಯಿಸಿದೆ. ಅಲ್ಲಿ ಅದು 70 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಭಾರತೀಯ ಆಸ್ತಿಗಳನ್ನು ಗುರುತಿಸಿದೆ. ಇದು ಯುಎಸ್, ಯುಕೆ, ಕೆನಡಾ, ಸಿಂಗಾಪೂರ್, ಮಾರಿಷಸ್, ಫ್ರಾನ್ಸ್ ಮತ್ತು ನೆದರ್​ಲೆಂಡ್ಸ್​ ವ್ಯಾಪ್ತಿಯಲ್ಲಿ ಬರುತ್ತವೆ. ಅಮೆರಿಕದಲ್ಲಿ ಕೇರ್ನ್ ಎನರ್ಜಿ ಭಾರತದ ವಿರುದ್ಧ ಮೊಕದ್ದಮೆ ಹೂಡಲು ನ್ಯೂಯಾರ್ಕ್ ಅನ್ನು ಆಯ್ಕೆ ಮಾಡಿದೆ. ಏಕೆಂದರೆ, ಅಲ್ಲಿ ಭಾರತ ಸಾಕಷ್ಟು ಆಸ್ತಿಗಳನ್ನು ಹೊಂದಿದೆ. ಆ ವ್ಯಾಪ್ತಿಯಲ್ಲಿ ಪರಿಹಾರವನ್ನು ಮರುಪಡೆಯಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಏರ್ ಇಂಡಿಯಾದ ಯುನೈಟೆಡ್ ಸ್ಟೇಟ್ಸ್ ಕಾರ್ಯಾಚರಣೆಗಳ ಪ್ರಧಾನ ಕಚೇರಿಯನ್ನು ಇಲ್ಲಿ ಹೊಂದಿದೆ.

ಫೈನಾನ್ಷಿಯಲ್ ಟೈಮ್ಸ್ ವರದಿಯ ಪ್ರಕಾರ, ಫ್ರೆಂಚ್ ನ್ಯಾಯಾಲಯ, ಟ್ರಿಬ್ಯೂನಲ್ ಜುಡಿಸೈರ್ ಡಿ ಪ್ಯಾರಿಸ್, ಜೂನ್ 11 ರಂದು ಮಧ್ಯ ಪ್ಯಾರಿಸ್​ನಲ್ಲಿ ಇರುವ ಭಾರತ ಸರ್ಕಾರದ ಒಡೆತನದ ವಸತಿ ರಿಯಲ್ ಎಸ್ಟೇಟ್ ಮೇಲೆ ನಿರ್ಬಂಧ ಹೇರಲು (ನ್ಯಾಯಾಂಗ ಅಡಮಾನಗಳ ಮೂಲಕ) ಕೇರ್ನ್ ಅರ್ಜಿಗೆ ಒಪ್ಪಿಕೊಂಡಿತು, ವಿಶೇಷವಾಗಿ ಪ್ಯಾರಿಸ್​ನ 16 ಅರೋಂಡಿಸ್ಮೆಂಟ್​ನಲ್ಲಿ, ಮಾರ್ಕ್ಯೂ ಇದರಲ್ಲಿ ಇರುವ ವಸತಿ ಆಸ್ತಿ ನೆರೆಹೊರೆಯಾಗಿದೆ. ಪತ್ರಿಕೆಯ ಪ್ರಕಾರ, ಇದು ಭಾರತೀಯ ರಾಯಭಾರ ಕಚೇರಿಯಲ್ಲಿ ಉಪ ಮುಖ್ಯಸ್ಥರ ನಿವಾಸವಾಗಿತ್ತು.

ಭಾರತದ ಮುಂದಿನ ಆಯ್ಕೆಗಳು ಯಾವುವು?
ಕೇರ್ನ್​ ಪಾಲಿಗೆ ಭಾರತ ಸರ್ಕಾರ ವಿರುದ್ಧದ ಮೊದಲ ಯಶಸ್ಸು ಇದು. ಫ್ರೆಂಚ್ ನ್ಯಾಯಾಲಯದ ಆದೇಶವು ಇತರ ವ್ಯಾಪ್ತಿಯಲ್ಲಿ ಸಹ ಅವಕಾಶಗಳನ್ನು ಹೆಚ್ಚಿಸುತ್ತದೆ. ಆಸ್ತಿ ವಿವಾದಗಳು ಕಾನೂನು ವಿವಾದದಲ್ಲಿ ಸಿಲುಕಿಕೊಳ್ಳುತ್ತವೆ ಮತ್ತು ಭಾರತವು ಒಳಗೊಂಡಂತೆ ಪಾಕಿಸ್ತಾನ, ಅಫ್ಘಾನಿಸ್ತಾನವನ್ನು ಮತ್ತಿತರು ದೇಶಗಳ ಪಟ್ಟಿಗೆ ಸೇರ್ಪಡೆಗೊಳ್ಳಲಿದೆ. ಭಾರತದ ಆಸ್ತಿಗಳನ್ನು ವಿದೇಶದಲ್ಲಿ ವಶಪಡಿಸಿಕೊಳ್ಳುವ ಸಾಧ್ಯತೆ ಇದೆ. ಮೇಲ್ಮನವಿಗಳಲ್ಲಿ ಭಾರತದ ವಿರುದ್ಧದ ಮಧ್ಯಸ್ಥಿಕೆ ರಿವಾರ್ಡ್​ಗಳು ಅನ್ವಯ ಆಗುವುದಿಲ್ಲ ಎಂದು ಸಾಬೀತುಪಡಿಸದ ಹೊರತು ರಿವಾರ್ಡ್ ಅನ್ನು ವಿದೇಶಿ ವ್ಯಾಪ್ತಿಯಲ್ಲಿ ಜಾರಿಗೊಳಿಸಬಹುದು. ಆದರೂ ಎರಡೂ ಪಕ್ಷಗಳ (ಭಾರತ- ಕೇರ್ನ್ ಎನರ್ಜಿ) ಮಧ್ಯೆ ಒಪ್ಪಂದವನ್ನು ತಳ್ಳಿಹಾಕಲು ಆಗುವುದಿಲ್ಲ.

ಬೇರೆ ದೇಶಗಳಿಗೆ ಸೇರಿದ ಆಸ್ತಿಯನ್ನು ಭಾರತೀಯ ಕಂಪೆನಿ ವಶಪಡಿಸಿಕೊಂಡ ನಿದರ್ಶನ ಇದೆಯೇ?
ಬೇರೆ ದೇಶದ ಸರ್ಕಾರಗಳ ವಿರುದ್ಧದ ಮಧ್ಯಸ್ಥಿಕೆ ತೀರ್ಪನ್ನು ಜಾರಿಗೊಳಿಸುವಾಗ ನ್ಯಾಯಾಲಯದ ಪ್ರವೇಶ ಸಾಮಾನ್ಯವಾಗಿದೆ. ಕಳೆದ ತಿಂಗಳು, ಎರಡು ಭಾರತೀಯ ಖಾಸಗಿ ಕಂಪನಿಗಳು ತಮ್ಮ ಪರವಾಗಿ ಮಧ್ಯಸ್ಥಿಕೆ ಮೊತ್ತಗಳನ್ನು ಜಾರಿಗೊಳಿಸಲು ಸಲ್ಲಿಸಿದ್ದ ಪ್ರಕರಣದಲ್ಲಿ, ದೆಹಲಿ ಹೈಕೋರ್ಟ್​ನಿಂದ ಅಫ್ಗಾನಿಸ್ತಾನ ಮತ್ತು ಇಥಿಯೋಪಿಯಾದ ರಾಯಭಾರ ಕಚೇರಿಗಳಿಗೆ ಸೂಚನೆ ನೀಡಿ, ಭಾರತದಲ್ಲಿ ಆ ಕಂಪೆನಿಗಳ ಒಡೆತನದಲ್ಲಿ ಇರುವ ಆಸ್ತಿಗಳ ಮಾಹಿತಿಯನ್ನು ಬಹಿರಂಗಪಡಿಸುವ ಅಫಿಡವಿಟ್​ಗಳನ್ನು ಸಲ್ಲಿಸುವಂತೆ ನಿರ್ದೇಶಿಸಿತ್ತು. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಅಫ್ಗಾನಿಸ್ತಾನದಿಂದ ಮಧ್ಯಸ್ಥಿಕೆ ರಿವಾರ್ಡ್ ಆಗಿ ಸುಮಾರು 1.72 ಕೋಟಿ ರೂ.ಗಳನ್ನು ವಸೂಲಿ ಮಾಡಲು ಕೆಎಲ್ಎ ಕಾನ್​ಸ್ಟ್ ಟೆಕ್ನಾಲಜೀಸ್ ಕೇಳಿಕೊಂಡಿತ್ತು.

ಆಗ ಸುಪ್ರೀಂ ಕೋರ್ಟ್​ನಿಂದ ಒಬ್ಬೇ ಒಬ್ಬರು ಮಧ್ಯಸ್ಥಗಾರನನ್ನು ನೇಮಿಸಿದೆ. ಮತ್ತೊಂದು ಭಾರತೀಯ ಸಂಸ್ಥೆ ಮ್ಯಾಟ್ರಿಕ್ಸ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ 7.60 ಕೋಟಿ ರೂಪಾಯಿಯನ್ನು ಇಥಿಯೋಪಿಯಾ ಸರ್ಕಾರದಿಂದ ವಸೂಲಿ ಮಾಡಿಕೊಳ್ಳಲು ಕೇಳಿಕೊಂಡಿದೆ. ನ್ಯಾಯಮೂರ್ತಿ ಜೆ.ಆರ್. ಮಿಧಾ ಅವರ ತೀರ್ಪು, “ವಾಣಿಜ್ಯ ವಹಿವಾಟಿನಿಂದ ಉಂಟಾಗುವ ಮಧ್ಯಸ್ಥಿಕೆ ಪರಿಹಾರ ಮೊತ್ತವನ್ನು ಜಾರಿಗೊಳಿಸುವುದರ ವಿರುದ್ಧ ಬೇರೆ ದೇಶಗಳ ಸಾರ್ವಭೌಮತೆಯಿಂದ ವಿನಾಯಿತಿ ಪಡೆಯಬಹುದೇ?” ಎಂಬ ಪ್ರಶ್ನೆಯನ್ನು ಪರಿಶೀಲಿಸುತ್ತಿತ್ತು.

“ವಾಣಿಜ್ಯ ವಹಿವಾಟಿನಿಂದ ಉದ್ಭವಿಸುವ ಮಧ್ಯಸ್ಥಿಕೆ ಮೊತ್ತದ ವಿರುದ್ಧ ಬೇರೆ ದೇಶವು ಸಾರ್ವಭೌಮ ವಿನಾಯಿತಿ ಹೊಂದಿಲ್ಲ. ಮಧ್ಯಸ್ಥಿಕೆ ಒಪ್ಪಂದಕ್ಕೆ ಬರುವುದರಿಂದ ಸಾರ್ವಭೌಮ ವಿನಾಯಿತಿ ಮನ್ನಾ ಮಾಡುತ್ತದೆ. ವಿವಾದಗಳಿಗೆ ಮಧ್ಯಸ್ಥಿಕೆ ವಹಿಸುವ ಪ್ರತಿವಾದಿಯ ಒಪ್ಪಂದವು ಹೇಳಿದ ಅವಶ್ಯಕತೆಯ ಮನ್ನಾ ಆಗಿ ಕಾರ್ಯನಿರ್ವಹಿಸುತ್ತದೆ. ಬೇರೆ ದೇಶವು ಭಾರತೀಯ ಘಟಕದೊಂದಿಗೆ ಮಧ್ಯಸ್ಥಿಕೆ ಒಪ್ಪಂದಕ್ಕೆ ಬಂದಾಗ ಸಾರ್ವಭೌಮತೆ ರಕ್ಷಣೆಗೆ ತನ್ನಿಂತಾನೇ ಮನ್ನಾ ಇದೆ, ಅಂತಹ ದೇಶದ ವಿರುದ್ಧ ಮಧ್ಯಸ್ಥಿಕೆ ಮೊತ್ತವನ್ನು ಜಾರಿಗೊಳಿಸುವುದರ ವಿರುದ್ಧ ಮಧ್ಯಸ್ಥಿಕೆ ಮೊತ್ತ ಜಾರಿಗೊಳಿಸುವುದಕ್ಕೆ ಮನ್ನಾ ಇದೆ,”ಎಂದು ಹೈಕೋರ್ಟ್ ಹೇಳಿದೆ.

ಇದನ್ನೂ ಓದಿ: Cairn Energy: ಫ್ರಾನ್ಸ್​ನಲ್ಲಿರುವ ಭಾರತ ಸರ್ಕಾರದ 12714 ಕೋಟಿ ರೂ. ಆಸ್ತಿ ಕೇರ್ನ್ ಎನರ್ಜಿ ವಶಕ್ಕೆ

ಇದನ್ನೂ ಓದಿ: Cairn Energyಗೆ ₹8,000 ಕೋಟಿ ನೀಡುವಂತೆ ಭಾರತಕ್ಕೆ ಅಂತಾರಾಷ್ಟ್ರೀಯ ನ್ಯಾಯಮಂಡಳಿ ಸೂಚನೆ

(Explainer: Why Cairn energy trying to seize Indian government assets in foreign land? Here is the details)

Published On - 8:04 pm, Sat, 10 July 21