ಏಕೀಕೃತ ಪೆನ್ಷನ್ ಸ್ಕೀಮ್; ಯಾವಾಗಿಂದ ಜಾರಿ? 2004ಕ್ಕೆ ಮುಂಚೆ ಇದ್ದ ಒಪಿಎಸ್​ಗಿಂತ ಇದು ಎಷ್ಟು ಭಿನ್ನ?

Unified Pension Scheme details: ಕೇಂದ್ರ ಸರ್ಕಾರ ಪಿಂಚಣಿ ವ್ಯವಸ್ಥೆಯಲ್ಲಿ ಮತ್ತೊಂದಿಷ್ಟು ಸುಧಾರಣೆ ತಂದಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿರುವ ಯುಪಿಎಸ್, ಹಿಂದಿನ ಪಿಂಚಣಿ ವ್ಯವಸ್ಥೆಗೆ ಸಾಮ್ಯತೆ ಹೊಂದಿದೆ. ಪ್ರಸಕ್ತ ಸರ್ಕಾರಿ ಉದ್ಯೋಗಿಗಳಿಗೆ ಎನ್​ಪಿಎಸ್ ಮತ್ತು ಯುಪಿಎಸ್ ಎಂಬ ಎರಡು ಆಯ್ಕೆಗಳಿವೆ. ಯಾವುದನ್ನಾದರೂ ಆರಿಸಿಕೊಳ್ಳಬಹುದು.

ಏಕೀಕೃತ ಪೆನ್ಷನ್ ಸ್ಕೀಮ್; ಯಾವಾಗಿಂದ ಜಾರಿ? 2004ಕ್ಕೆ ಮುಂಚೆ ಇದ್ದ ಒಪಿಎಸ್​ಗಿಂತ ಇದು ಎಷ್ಟು ಭಿನ್ನ?
ಯೂನಿಫೈಡ್ ಪೆನ್ಷನ್ ಸ್ಕೀಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 26, 2024 | 11:52 AM

ನವದೆಹಲಿ, ಆಗಸ್ಟ್ 26: ಕೇಂದ್ರ ಸರ್ಕಾರದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಸರ್ಕಾರಿ ಉದ್ಯೋಗಿಗಳಿಗೆ ರೂಪಿಸಲಾಗಿದೆ. ಆಗಸ್ಟ್ 24ರಂದು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. 2025ರ ಏಪ್ರಿಲ್ 1ರಿಂದ ಇದರ ಜಾರಿಯಾಗಲಿದೆ. ಈಗ ಅಸ್ತಿತ್ವದಲ್ಲಿರುವ ನ್ಯಾಷನಲ್ ಪೆನ್ಷನ್ ಸಿಸ್ಟಂಗೆ ಪರ್ಯಾಯವಾಗಿ ಯುಪಿಎಸ್ ಕೂಡ ಲಭ್ಯ ಇರುತ್ತದೆ. ಈಗಾಗಲೇ ಎನ್​ಪಿಎಸ್ ಅಳವಡಿಸಿಕೊಂಡಿರುವವರು ಯುಪಿಎಸ್​ಗೆ ಬದಲಾಗಬಹುದು. ಎರಡೂ ಆಯ್ಕೆಗಳು ಉದ್ಯೋಗಿಗಳಿಗೆ ಲಭ್ಯ ಇರುತ್ತದೆ.

ಹಳೆಯ ಪಿಂಚಣಿ ಯೋಜನೆ ಬದಲಾಗಿ ಸರ್ಕಾರ 2004ರಲ್ಲಿ ನ್ಯಾಷನಲ್ ಪೆನ್ಷನ್ ಸಿಸ್ಟಂ ಅನ್ನು ಜಾರಿಗೆ ತಂದಿತು. ಇದು ಮಾರುಕಟ್ಟೆಗೆ ಜೋಡಿತವಾದ ಸ್ಕೀಮ್ ಆದ್ದರಿಂದ ಬಹಳಷ್ಟು ಉದ್ಯೋಗಿಗಳಲ್ಲಿ ಅಸಮಾಧಾನ ತಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪಿಂಚಣಿ ಯೋಜನೆಯನ್ನು ಪರಾಮರ್ಶಿಸಲು ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್ ನೇತೃತ್ವದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿತು. ಆ ಸಮಿತಿ ಶಿಫಾರಸು ಮಾಡಿದ ಅಂಶಗಳ ಆಧಾರದ ಮೇಲೆ ಯೂನಿಫೈಡ್ ಪೆನ್ಷನ್ ಸ್ಕೀಮ್ ರೂಪಿಸಲಾಗಿದೆ.

ಇದನ್ನೂ ಓದಿ: ಮೂವತ್ತು ವರ್ಷ ಮುಗಿಸಿದ ಮ್ಯೂಚುವಲ್ ಫಂಡ್​ಗಳ ಸಾಧನೆ ಹೇಗೆ? ತಿಂಗಳಿಗೆ ಕೇವಲ 1,000 ಹೂಡಿಕೆ ಈಗ ಆಗಿದೆ 2 ಕೋಟಿ ರೂ

2004ರ ಏಪ್ರಿಲ್ 1ರಂದು ಹಾಗೂ ನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಉದ್ಯೋಗಿಗಳಿಗೆ ಎನ್​ಪಿಎಸ್ ಪಿಂಚಣಿ ಯೋಜನೆ ಅನ್ವಯ ಆಗಿದೆ. ಇವರೆಲ್ಲರೂ ಕೂಡ ಈಗ ಯುಪಿಎಸ್​ಗೂ ಅರ್ಹರಿರುತ್ತಾರೆ. ಎರಡರಲ್ಲಿ ಯಾವುದನ್ನಾದರೂ ಅವರು ಆಯ್ಕೆ ಮಾಡಿಕೊಳ್ಳಬಹುದು. ರಾಜ್ಯ ಸರ್ಕಾರಗಳೂ ಕೂಡ ತಮ್ಮ ಉದ್ಯೋಗಿಗಳಿಗೆ ಯುಪಿಎಸ್ ಆಯ್ಕೆ ನೀಡಬಹುದು.

ಓಲ್ಡ್ ಪೆನ್ಷನ್ ಸಿಸ್ಟಂಗೂ ಯುಪಿಎಸ್​ಗೂ ಏನು ವ್ಯತ್ಯಾಸ?

ಹಳೆಯ ಪಿಂಚಣಿ ಯೋಜನೆಯಲ್ಲಿ, ಅಂದರೆ, 2004ಕ್ಕೆ ಮುಂಚೆ ಇದ್ದ ವ್ಯವಸ್ಥೆಯಲ್ಲಿ ಉದ್ಯೋಗಿಗಳ ಸಂಬಳದಿಂದ ಹಣ ಮುರಿದುಕೊಳ್ಳಲಾಗುತ್ತಿರಲಿಲ್ಲ. ಉದ್ಯೋಗಿಯ ಮೂಲ ವೇತನದ ಶೇ. 14ರಷ್ಟು ಮೊತ್ತವನ್ನು ಸರ್ಕಾರವು ಪಿಂಚಣಿ ನಿಧಿಗೆ ಹಾಕುತ್ತಿತ್ತು.

ನೌಕರರು ನಿವೃತ್ತರಾದಾಗ ಪಿಂಚಣಿ ನಿಧಿಯ ಶೇ. 40ರವರೆಗೂ ಹಣವನ್ನು ಲಂಪ್ಸಮ್ ಆಗಿ ಪಡೆಯಬಹುದಿತ್ತು. ನಿವೃತ್ತರಾದಾಗ ಪಡೆದ ಕೊನೆಯ ತಿಂಗಳ ಸಂಬಳದಲ್ಲಿ ಮೂಲವೇತನ ಮತ್ತು ಡಿಎ ಮೊತ್ತದ ಶೇ. 50ರಷ್ಟು ಹಣವನ್ನು ಪಿಂಚಣಿಯಾಗಿ ನೀಡಲಾಗುತ್ತಿತ್ತು.

ಏಕೀಕೃತ ಪಿಂಚಣಿ ಯೋಜನೆಯಲ್ಲಿ ಹೇಗಿದೆ?

ಈಗ ಯೂನಿಫೈಡ್ ಪೆನ್ಷನ್ ಸಿಸ್ಟಂನಲ್ಲಿ ಉದ್ಯೋಗಿಯ ಮೂಲ ವೇತನದಿಂದ ಶೇ. 10ರಷ್ಟು ಹಣವನ್ನು ಮುರಿದುಕೊಂಡು ಪಿಂಚಣಿ ನಿಧಿಗೆ ಹಾಕಲಾಗುತ್ತದೆ. ಸರ್ಕಾರದಿಂದ ಶೇ. 18.5ರಷ್ಟು ಹಣದ ಕೊಡುಗೆ ಈ ಪಿಂಚಣಿ ನಿಧಿಗೆ ಹೋಗುತ್ತದೆ.

ಇದನ್ನೂ ಓದಿ: ಏಕೀಕೃತ ಪಿಂಚಣಿ ಯೋಜನೆಗೂ, ಎನ್​ಪಿಎಸ್, ಒಪಿಎಸ್​ಗೂ ವ್ಯತ್ಯಾಸಗಳೇನು?

ನೌಕರರು ನಿವೃತ್ತರಾದಾಗ ಆ ಇಡೀ ವರ್ಷದ ಮೂಲ ವೇತನ ಮತ್ತು ಡಿಎ ಮೊತ್ತದ ಸರಾಸರಿ ಪಡೆದು ಶೇ. 50ರಷ್ಟು ಹಣವನ್ನು ಪಿಂಚಣಿಯಾಗಿ ಕೊಡಲಾಗುತ್ತದೆ. ಇದಕ್ಕೆ ಕನಿಷ್ಠ 25 ವರ್ಷ ಸರ್ವಿಸ್ ಮಾಡಿರಬೇಕು.

ಹಾಗೆಯೇ, ಕನಿಷ್ಠ ಪಿಂಚಣಿ ಮೊತ್ತವನ್ನು 9,000 ರೂನಿಂದ 10,000 ರೂಗೆ ಏರಿಸಲಾಗಿದೆ. ಕನಿಷ್ಠ 10 ವರ್ಷ ಸರ್ವಿಸ್ ಮಾಡಿದವರು ಕನಿಷ್ಠ ಪಿಂಚಣಿಗೆ ಅರ್ಹರಿರುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್