ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನವು ಶುಕ್ರವಾರದಿಂದ (ಜ.29) ಆರಂಭವಾಗಲಿದೆ. ಫೆಬ್ರುವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಇದು ಅವರು ಮಂಡಿಸುವ ಮೂರನೇ ಬಜೆಟ್.
ಆರ್ಥಿಕ ಸಮೀಕ್ಷೆ ಯಾವಾಗ?
ಅಧಿವೇಶನದ ಮೊದಲ ದಿನ (ಜ.29) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಆರ್ಥಿಕ ಸಮೀಕ್ಷೆ ಪ್ರಸ್ತುತ ಪಡಿಸಲಿದ್ದಾರೆ. ಬಜೆಟ್ ಅಧಿವೇಶನದ ದಿನ ಪ್ರಸ್ತುತ ಪಡಿಸುವ ಆರ್ಥಿಕ ಸಮೀಕ್ಷೆ ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇಶದಲ್ಲಿನ ಒಟ್ಟಾರೆ ಆರ್ಥಿಕ ಬೆಳವಣಿಗೆಯ ಸಾರಾಂಶ ಆಗಿರುತ್ತದೆ.
ಸಮೀಕ್ಷೆಯಲ್ಲಿ ಹಣದ ವಹಿವಾಟು, ಮೂಲ ಸೌಕರ್ಯ, ಕೃಷಿ, ಕೈಗಾರಿಕಾ ಉತ್ಪನ್ನ, ಉದ್ಯೋಗ, ಬೆಲೆ, ಆಮದು, ರಫ್ತು, ವಿದೇಶಿ ವಿನಿಮಯ ಮೊದಲಾದವುಗಳು ದೇಶದ ಆರ್ಥಿಕತೆಯ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಎಂಬ ಮಾಹಿತಿಗಳು ಇರುತ್ತವೆ. ಈ ಬಾರಿ ದೇಶದಲ್ಲಿ ಕೊರೊನಾವೈರಸ್ನಿಂದಾಗಿ ಉಂಟಾದ ಆರ್ಥಿಕ ಹೊಡೆತವು ಪ್ರಧಾನ ವಿಷಯವಾಗಲಿದೆ.
ಕೇಂದ್ರ ಬಜೆಟ್ 2021 ಎಲ್ಲಿ ವೀಕ್ಷಿಸಬಹುದು?
ಕೇಂದ್ರ ಬಜೆಟ್ 2021 ಲೋಕಸಭೆ ಟಿವಿಯಲ್ಲಿ ನೇರ ಪ್ರಸಾರವಾಗಲಿದೆ. ಲೋಕಸಭೆ ಟಿವಿಯ ಯುಟ್ಯೂಬ್ ಮತ್ತು ಟ್ವಿಟರ್ ಅಕೌಂಟ್ಗಳಲ್ಲಿಯೂ ಲೈವ್ ಇರಲಿದೆ. ಬಜೆಟ್ ಬಗ್ಗೆ ಕ್ಷಣಕ್ಷಣದ ಮಾಹಿತಿಗೆ https://tv9kannada.com ಗೆ ಭೇಟಿ ನೀಡಿ.
ಮುಖ್ಯ ಆರ್ಥಿಕ ಸಲಹೆಗಾರರು ಸುದ್ದಿಗೋಷ್ಠಿಯ ಲೈವ್ ಮಾಹಿತಿ
CEA Dr @SubramanianKri will address a Press Conference on 29th Jan 2021, at 2:30 PM in New Delhi after the presentation of Economic Survey 2020-21 by Finance Minister in Parliament.
Watch LIVE here👇
➡️YouTube – https://t.co/9T01Ouigfn@nsitharamanoffc @Anurag_Office @PIB_India— Ministry of Finance (@FinMinIndia) January 28, 2021
Budget 2021 ನಿರೀಕ್ಷೆ | ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಆಸರೆ ಸಿಗಬೇಕಿದೆ