Central Government Schemes: 2021ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಿವು

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2021ನೇ ಇಸವಿಯಲ್ಲಿ ಜಾರಿಗೊಳಿಸಿದ ಪ್ರಮುಖ ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ಈ ಲೇಖನದಲ್ಲಿದೆ.

Central Government Schemes: 2021ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳಿವು
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on: Dec 23, 2021 | 9:25 PM

2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಕಲ್ಯಾಣ ಯೋಜನೆಗಳನ್ನು ತರಲಾಗಿದೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸರ್ಕಾರದಿಂದ ಇನ್ನಷ್ಟು ಯೋಜನೆಗಳನ್ನು ಆರಂಭಿಸುವುದಕ್ಕೆ ಒತ್ತಡ ಸೃಷ್ಟಿಯಾಯಿತು. ಜನಸಾಮಾನ್ಯರಿಗೆ ಆರ್ಥಿಕ ಹಾಗೂ ವೈಯಕ್ತಿಕ ಹೊರೆಯನ್ನು ಇಳಿಸಿಕೊಳ್ಳಲು ಈ ಯೋಜನೆಗಳ ಮೂಲಕ ನೆರವಾಯಿತು. ಸಮಾಜದ ವಿವಿಧ ಸ್ತರದ ಜನರಿಗೆ ಅನುಕೂಲ ಆಗುವಂತೆ ಯೋಜನೆಗಳನ್ನು ತರಲಾಯಿತು. 2021ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಜಾರಿಯಾದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (PMGKP) ಇನ್ಷೂರೆನ್ಸ್ ಯೋಜನೆ ಈ ವರ್ಷದ ಜೂನ್​ನಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಇನ್ಷೂರೆನ್ಸ್ ಯೋಜನೆಯನ್ನು ಕೊವಿಡ್19 ವಿರುದ್ಧ ಹೋರಾಡುವ ಆರೋಗ್ಯ ಸಿಬ್ಬಂದಿಗೆ ವಿಸ್ತರಿಸಿತು. ಏಪ್ರಿಲ್ 24, 2021ರಿಂದ ಸನ್ವಯ ಆಗುವಂತೆ ಒಂದು ವರ್ಷಗಳ ಕಾಲ ವಿಸ್ತರಿಸಲಾಯಿತು. 2020ರ ಮಾರ್ಚ್​ನಲ್ಲಿ ಆರೋಗ್ಯ ಸಿಬ್ಬಂದಿ ಕುಟುಂಬಕ್ಕಾಗಿ ಕೇವಲ 90 ದಿನಗಳಿಗಾಗಿ ತರಲಾಯಿತು. ವೈಯಕ್ತಿಕ ಅಪಘಾತಕ್ಕಾಗಿ 50 ಲಕ್ಷ ರೂಪಾಯಿ ಪರಿಹಾರವನ್ನು ಒದಗಿಸಿತ್ತು. ಈ ಯೋಜನೆಯು ಎಲ್ಲ ಆರೋಗ್ಯ ಸಿಬ್ಬಂದಿಗೆ, ಸಮುದಾಯ ಆರೋಗ್ಯ ಸಿಬ್ಬಂದಿಗೆ ಮತ್ತು ಖಾಸಗಿ ಆರೋಗ್ಯ ಸಿಬ್ಬಂದಿಗೆ ಅನ್ವಯಿಸುತ್ತದೆ.

ಪಿಎಂ ಮೆಂಟರಿಂಗ್ ಯುವ ಸ್ಕೀಮ್ ಈ ಯೋಜನೆಯು 2021ರ ಆಗಸ್ಟ್​ನಲ್ಲಿ ಆರಂಭವಾಯಿತು. ಭಾರತದ ಯುವಜನರಲ್ಲಿ ಕೌಶಲಾಭಿವೃದ್ಧಿಗೆ ತರಬೇತಿ ನೀಡುವ ಯೋಜನೆ ಇದಾಗಿದೆ. ಪ್ರಧಾನಮಂತ್ರಿ ಯುವ ಯೋಜನೆ (ಯುವ ಉದ್ಯಮಿತಾ ವಿಕಾಸ ಯೋಜನಾ) ಗುರಿ ಏನೆಂದರೆ, ಉದ್ಯಮಶೀಲತೆ ಅಭಿವೃದ್ಧಿಗೆ ಎಕೋಸಿಸ್ಟಮ್ ಸಕ್ರಿಯಗೊಳಿಸುವುದು. ಅದು ಕೂಡ ಉದ್ಯಮಶೀಲತೆ ಶಿಕ್ಷಣ ಹಾಗೂ ತರಬೇತಿ ಮೂಲಕವಾಗಿ.

ಇ-ಶ್ರಮ್ ಪೋರ್ಟಲ್ ಅಸಂಘಟಿತ ವ;ಯದ ಕಾರ್ಮಿಕರು ಮತ್ತು ದಿನಗೂಲಿ ನೌಕರರಿಗೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರವು ಈ ವರ್ಷದ ಆಗಸ್ಟ್​ 26ರಂದು ಇ-ಶ್ರಮ್ ಪೋರ್ಟಲ್ ಆರಂಭಿಸಿತು. ಈ ಯೋಜನೆ ಅಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಡೇಟಾಬೇಸ್ ಜಾರಿ ತಂದಿದ್ದು, ಕಾರ್ಮಿಕರ ಸಚಿವಾಲಯದಿಂದ ವಿಶಿಷ್ಟ ಗುರುತಿನ ಸಂಖ್ಯೆ (UAN) ಕಾರ್ಡ್ ಪಡೆಯುತ್ತಾರೆ. ಇಲ್ಲಿಯ ತನಕ 12 ಕೋಟಿ ಜನರು ಈ ಕಾರ್ಯಕ್ರಮದ ಅಡಿಯಲ್ಲಿ ನೋಂದಣಿ ಆಗಿದ್ದಾರೆ ಎಂಬುದು ದತ್ತಾಂಶದಿಂದ ತಿಳಿಯುತ್ತದೆ.

ಅಕಡೆಮಿಕ್ ಬ್ಯಾಂಕ್ಸ್ ಆಫ್ ಕ್ರೆಡಿಟ್ (ABC) ಯೋಜನೆ ಈ ಯೋಜನೆಯು ಶಿಕ್ಷಣ ಸಚಿವಾಲಯದಿಂದ ಆರಂಭಿಸಲಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೊಬಿಲಿಟಿ ಒದಗಿಸುವುದು ಇದರ ಉದ್ದೇಶ. ದೇಶದ ಯಾವುದೇ ಉನ್ನತ ಶಿಕ್ಷಣ ಸಂಸ್ಥೆಗೆ ಸೂಕ್ತವಾದ “ಕ್ರೆಡಿಟ್ ಟ್ರಾನ್ಸ್​ಫರ್” ಮೂಲಕ ಒಂದರಿಂದ ಮತ್ತೊಂದಕ್ಕೆ ಬದಲಿಸಿಕೊಳ್ಳುವ ವ್ಯವಸ್ಥೆ ಇದು. ವಿದ್ಯಾರ್ಥಿಗಳಿಗೆ ಇದಕ್ಕೆ ಸ್ವಾತಂತ್ರ್ಯ ಇರುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ಜತೆಗೆ ಈ ವರ್ಷದ ಜುಲೈನಲ್ಲಿ ಇದು ಆರಂಭವಾಯಿತು.

ಗ್ರಾಮ ಉಜಾಲ ಯೋಜನಾ ಗ್ರಾಮೀಣ ಜನರಿಗೆ ಅನುಕೂಲ ಆಗುವ ಉದ್ದೇಶದಿಂದ ಈ ಯೋಜನೆ ಆರಂಭಿಸಲಾಯಿತು. ಉನ್ನತ ಗುಣಮಟ್ಟದ ವಿದ್ಯುತ್ ಅನ್ನು ಭಾರತದಾದ್ಯಂತ ಹಳ್ಳಿಗಳಿಗೆ ಒದಗಿಸಬೇಕು ಎಂಬ ಉದ್ದೇಶ ಈ ಯೋಜನೆ ಅಡಿಯಲ್ಲಿ ಇದೆ. ಈ ನೀತಿಯಲ್ಲಿ ಎನರ್ಜಿ ಎಫಿಶಿಯೆನ್ಸಿ ಸರ್ವೀಸಸ್ ಲಿಮಿಟೆಡ್​ (EESL) ಮೂಲಕ ಗ್ರಾಮೀಣ ಜನರಿಗೆ ಒಂದು ಎಲ್​ಇಡಿ ಬಲ್ಬ್​ಗೆ 10 ರೂಪಾಯಿಯಂತೆ ಮಾರಾಟ ಮಾಡುತ್ತದೆ.

ಪಿಎಂ ಉಮೀದ್ ಯೋಜನೆ ಉದ್ಯಮಶೀಲತೆ ಅಭಿವೃದ್ಧಿ ಯೋಜನೆಗಾಗಿ ಪಿಎಂ ಉದ್ಯಮ ಮಿತ್ರ ಇದನ್ನು 2021ರ ಏಪ್ರಿಲ್​ನಲ್ಲಿ ಆರಂಭಿಸಲಾಯಿತು. 2025ರಿಂದ 2026ರೊಳಗೆ 3 ಲಕ್ಷದಷ್ಟು ಯುವ ಉದ್ಯಮಿಗಳಿಗೆ ಕೌಶಲ ತರಬೇತಿ ನೀಡಬೇಕು ಎಂಬ ಉದ್ದೇಶ ಈ ಯೋಜನೆಗೆ ಇದೆ. ಯುವ ಜನರಿಗೆ ಸಾಲವನ್ನು ಒದಗಿಸುತ್ತದೆ ಮತ್ತು ಉದ್ಯೋಗ ಒದಗಿಸುವ ಸಲುವಾಗಿ ಸೂಕ್ತ ಮಾರುಕಟ್ಟೆಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ.

ಇದನ್ನೂ ಓದಿ: PLI Scheme: ಪಿಎಲ್​ಐ ಯೋಜನೆ ಅಡಿ ಸೆಮಿಕಂಡಕ್ಟರ್​ಗೆ 76 ಸಾವಿರ ಕೋಟಿ ರೂ. ಕೇಂದ್ರ ಸಂಪುಟ ಅನುಮೋದನೆ