Tax On Cryptocurrency: ಕೇಂದ್ರ ಬಜೆಟ್​ನಲ್ಲಿ ಕ್ರಿಪ್ಟೋ ಗಳಿಕೆಯ ಮೇಲೆ ತೆರಿಗೆ ಬದಲಾವಣೆ ಸಾಧ್ಯತೆ

ಕೇಂದ್ರ ಬಜೆಟ್​ 2022ರಲ್ಲಿ ಕ್ರಿಪ್ಟೋಕರೆನ್ಸಿಗಳಿಗೆ ಸಂಬಂಧಿಸಿದಂತೆ ಹೊಸ ತೆರಿಗೆ ಕಾನೂನು ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Tax On Cryptocurrency: ಕೇಂದ್ರ ಬಜೆಟ್​ನಲ್ಲಿ ಕ್ರಿಪ್ಟೋ ಗಳಿಕೆಯ ಮೇಲೆ ತೆರಿಗೆ ಬದಲಾವಣೆ ಸಾಧ್ಯತೆ
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on:Nov 19, 2021 | 9:10 PM

ಕ್ರಿಪ್ಟೋಕರೆನ್ಸಿ ಗಳಿಕೆಗಳನ್ನು ತೆರಿಗೆಗೆ ಒಳಪಡಿಸಲು ಆದಾಯ ತೆರಿಗೆ ಕಾನೂನುಗಳಲ್ಲಿ ಬದಲಾವಣೆಗಳನ್ನು ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಕೆಲವು ಬದಲಾವಣೆಗಳೊಂದಿಗೆ ಮುಂದಿನ ವರ್ಷ ಬಜೆಟ್‌ನ ಭಾಗ ಆಗಬಹುದು ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಗುರುವಾರ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಆದಾಯ ತೆರಿಗೆಯ ವಿಷಯದಲ್ಲಿ ಕೆಲವರು ಈಗಾಗಲೇ ಕ್ರಿಪ್ಟೋಕರೆನ್ಸಿಯಿಂದ ಬರುವ ಆದಾಯದ ಮೇಲೆ ಕ್ಯಾಪಿಟಲ್​ ಗೇಯ್ನ್ಸ್​ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಗೆ ಸಂಬಂಧಿಸಿದಂತೆ ಇತರ ಸೇವೆಗಳ ಸಂದರ್ಭದಲ್ಲಿ ಅನ್ವಯ ಆಗುವಂತೆ ಈ ದರವು ಅನ್ವಯವಾಗುತ್ತದೆ ಎಂಬುದರಿಂದ ಕಾನೂನು “ಬಹಳ ಸ್ಪಷ್ಟವಾಗಿದೆ” ಎಂದು ಬಜಾಜ್ ಹೇಳಿದ್ದಾರೆ.

“ನಾವು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಜನರು ಈಗಾಗಲೇ ಅದರ ಮೇಲೆ ತೆರಿಗೆಯನ್ನು ಪಾವತಿಸುತ್ತಿದ್ದಾರೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಈಗ ಅದು ನಿಜವಾಗಿಯೂ ಸಾಕಷ್ಟು ಬೆಳೆದಿದೆ. ಕಾನೂನಿನಲ್ಲಿ ಕೆಲವು ಬದಲಾವಣೆಗಳನ್ನು ತರಬಹುದೇ ಅಥವಾ ಇಲ್ಲವೇ ಎಂಬುದನ್ನು ನಾವು ನೋಡುತ್ತೇವೆ. ಆದರೆ ಅದು ಬಜೆಟ್ ಚಟುವಟಿಕೆ ಆಗಿರುತ್ತದೆ. ನಾವು ಈಗಾಗಲೇ ಬಜೆಟ್‌ಗೆ ಸಮೀಪಿಸುತ್ತಿದ್ದೇವೆ, ನಾವು ಆ ಸಮಯವನ್ನು ನೋಡಬೇಕಾಗಿದೆ” ಎಂದು ಬಜಾಜ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಕ್ರಿಪ್ಟೋ ವ್ಯಾಪಾರಕ್ಕಾಗಿ ಟಿಸಿಎಸ್ (ಟ್ಯಾಕ್ಸ್ ಕಲೆಕ್ಟಡ್ ಅಟ್ ಸೋರ್ಸ್) ಪರಿಚಯಿಸಬಹುದೇ ಎಂದು ಕೇಳಿದಾಗ, ಬಜಾಜ್, “ನಾವು ಹೊಸ ಕಾನೂನನ್ನು ತಂದರೆ ನಂತರ ಏನು ಮಾಡಬೇಕೆಂದು ನಾವು ನೋಡುತ್ತೇವೆ” ಎಂದು ಹೇಳಿದ್ದಾರೆ.

ಹೂಡಿಕೆದಾರರನ್ನು ತಪ್ಪು ದಾರಿಗೆ ಎಳೆಯುವ ಜಾಹೀರಾತು “ಹೌದು, ನೀವು ಹಣ ಗಳಿಸಿದರೆ ತೆರಿಗೆ ಪಾವತಿಸಬೇಕು. ನಾವು ಈಗಾಗಲೇ ಕೆಲವು ತೆರಿಗೆಗಳನ್ನು ಪಡೆದಿದ್ದೇವೆ. ಕೆಲವರು ಅದನ್ನು ಆಸ್ತಿ ಎಂದು ಪರಿಗಣಿಸಿದ್ದಾರೆ ಮತ್ತು ಅದರ ಮೇಲೆ ಕ್ಯಾಪಿಟಲ್​ ಗೇಯ್ನ್ಸ್​ ತೆರಿಗೆಯನ್ನು ಪಾವತಿಸಿದ್ದಾರೆ,” ಎಂದು ಅವರು ಹೇಳಿದ್ದಾರೆ. ಕ್ರಿಪ್ಟೋಕರೆನ್ಸಿ ಟ್ರೇಡಿಂಗ್‌ನಲ್ಲಿ ತೊಡಗಿರುವ ಜನರನ್ನು ಫೆಸಿಲಿಟೇಟರ್, ಬ್ರೋಕರೇಜ್ ಮತ್ತು ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಎಂದು ವರ್ಗೀಕರಿಸಲಾಗುತ್ತದೆಯೇ ಮತ್ತು ಜಿಎಸ್‌ಟಿ ಅಡಿಯಲ್ಲಿ ತೆರಿಗೆಯನ್ನು ಹೇಗೆ ಮಾಡಲಾಗುತ್ತದೆ ಎಂದು ಕೇಳಿದಾಗ ಬಜಾಜ್, “ಇತರ ಸೇವೆಗಳಲ್ಲಿ ಈಗಾಗಲೇ ಅಂತಹ ಸಂಗತಿಗಳು ಲಭ್ಯ ಇವೆ. ಆದ್ದರಿಂದ ಯಾವ ಜಿಎಸ್‌ಟಿ ದರದಲ್ಲಿ ತೆರಿಗೆ ವಿಧಿಸಲಾಗುತ್ತದೋ ಅದು ಅನ್ವಯಿಸುತ್ತದೆ. ಹೂಡಿಕೆ ಮಾಡುವವರು ತಾವು ನೋಂದಾಯಿಸಿಕೊಳ್ಳಬೇಕು. ಜಿಎಸ್‌ಟಿ ಕಾನೂನು ತುಂಬಾ ಸ್ಪಷ್ಟವಾಗಿದೆ. ಚಟುವಟಿಕೆ ಇದ್ದರೆ ಜನರಿಗೆ ಸಹಾಯ ಮಾಡುವ ಹಾಗೂ ಬ್ರೋಕರೇಜ್ ಶುಲ್ಕ ವಿಧಿಸುವ ಬ್ರೋಕರ್ ಇದ್ದರೆ ಜಿಎಸ್‌ಟಿ ವಿಧಿಸಲಾಗುತ್ತದೆ,” ಎಂದು ಅವರು ಹೇಳಿದ್ದಾರೆ.

ಹೂಡಿಕೆದಾರರನ್ನು ತಪ್ಪುದಾರಿಗೆ ಎಳೆಯುವ ಉದ್ದೇಶಗಳೊಂದಿಗೆ ಆಮಿಷವೊಡ್ಡಲು ಇದನ್ನು ಬಳಸಲಾಗುತ್ತಿದೆ ಎಂಬ ಕಳವಳದ ನಡುವೆ ನವೆಂಬರ್ 29ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವು ಕ್ರಿಪ್ಟೋಕರೆನ್ಸಿಗಳ ಮಸೂದೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿಗಳಲ್ಲಿನ ಹೂಡಿಕೆಯ ಮೇಲೆ ಸುಲಭ ಮತ್ತು ಹೆಚ್ಚಿನ ಆದಾಯದ ಭರವಸೆ ನೀಡುವ ಚಲನಚಿತ್ರ ತಾರೆಯರನ್ನು ಒಳಗೊಂಡ ಜಾಹೀರಾತುಗಳ ಸಂಖ್ಯೆ ಹೆಚ್ಚುತ್ತಿದೆ.

ಸದ್ಯಕ್ಕೆ, ದೇಶದಲ್ಲಿ ಕ್ರಿಪ್ಟೋಕರೆನ್ಸಿಗಳ ಬಳಕೆಯ ಮೇಲೆ ಯಾವುದೇ ನಿಯಂತ್ರಣ ಅಥವಾ ಯಾವುದೇ ನಿಷೇಧವಿಲ್ಲ. ಈ ಹಿನ್ನೆಲೆಯಲ್ಲಿ, ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ಅಧಿಕಾರಿಗಳೊಂದಿಗೆ ಕ್ರಿಪ್ಟೋಕರೆನ್ಸಿಗಳ ಕುರಿತು ಸಭೆ ನಡೆಸಿದ್ದರು. ಮತ್ತು ಸಮಸ್ಯೆಯನ್ನು ಎದುರಿಸಲು ಬಲವಾದ ನಿಯಂತ್ರಕ ಕ್ರಮಗಳನ್ನು ತೆಗೆದುಕೊಳ್ಳುವ ಸೂಚನೆಗಳಿವೆ. ಈ ವಾರದ ಆರಂಭದಲ್ಲಿ, ಬಿಜೆಪಿಯ ಜಯಂತ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ಹಣಕಾಸು ಸ್ಥಾಯಿ ಸಮಿತಿಯು ಕ್ರಿಪ್ಟೋ ಎಕ್ಸ್​ಚೇಂಜ್​ಗಳು, ಬ್ಲಾಕ್ ಚೈನ್ ಮತ್ತು ಕ್ರಿಪ್ಟೋ ಅಸೆಟ್ಸ್ ಕೌನ್ಸಿಲ್ (BACC) ಪ್ರತಿನಿಧಿಗಳನ್ನು ಭೇಟಿ ಮಾಡಿ, ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಬಾರದು, ಆದರೆ ಅದನ್ನು ನಿಯಂತ್ರಿಸಬೇಕು ಎಂಬ ತೀರ್ಮಾನಕ್ಕೆ ಬಂದಿತು. ಆರ್‌ಬಿಐ ಕ್ರಿಪ್ಟೋಕರೆನ್ಸಿಗಳ ವಿರುದ್ಧ ತನ್ನ ಬಲವಾದ ಅಭಿಪ್ರಾಯಗಳನ್ನು ಪದೇ ಪದೇ ಪುನರುಚ್ಚರಿಸಿದೆ ಮತ್ತು ಅವು ದೇಶದ ಸ್ಥೂಲ ಆರ್ಥಿಕತೆ ಮತ್ತು ಆರ್ಥಿಕ ಸ್ಥಿರತೆಗೆ ಗಂಭೀರ ಬೆದರಿಕೆ ಉಂಟು ಮಾಡುತ್ತವೆ ಹಾಗೂ ಹೂಡಿಕೆದಾರರ ಸಂಖ್ಯೆ, ಮತ್ತು ಅವರು ಕ್ಲೇಮ್​ ಮಾಡುವ ಮಾರುಕಟ್ಟೆ ಮೌಲ್ಯವನ್ನು ಸಹ ಸಂದೇಹಿಸಿವೆ.

ಆರ್​ಬಿಐ ಸುತ್ತೋಲೆ ರದ್ದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಈ ತಿಂಗಳ ಆರಂಭದಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ಅನುಮತಿಸುವುದರ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ಪುನರುಚ್ಚರಿಸಿದ್ದರು. ಏಕೆಂದರೆ ಅವು ಕೇಂದ್ರೀಯ ಬ್ಯಾಂಕ್‌ಗಳ ನಿಯಂತ್ರಣಕ್ಕೆ ಬಾರದಿರುವುದರಿಂದ ಅವು ಯಾವುದೇ ಹಣಕಾಸು ವ್ಯವಸ್ಥೆಗೆ ಗಂಭೀರ ಅಪಾಯವಾಗಿದೆ ಎಂದು ಹೇಳಿದ್ದಾರೆ. 2020ರ ಮಾರ್ಚ್ ಆರಂಭದಲ್ಲಿ ಸುಪ್ರೀಂ ಕೋರ್ಟ್, ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸುವ ಆರ್​ಬಿಐ ಸುತ್ತೋಲೆಯನ್ನು ರದ್ದುಗೊಳಿಸಿತು. ಇದರ ನಂತರ ಫೆಬ್ರವರಿ 5, 2021ರಂದು ಡಿಜಿಟಲ್ ಕರೆನ್ಸಿಯ ಮಾದರಿಯನ್ನು ಸೂಚಿಸಲು ಕೇಂದ್ರೀಯ ಬ್ಯಾಂಕ್ ಆಂತರಿಕ ಸಮಿತಿಯನ್ನು ಸ್ಥಾಪಿಸಿತು. ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಪ್ರಸರಣವನ್ನು ಎದುರಿಸಲು ಆರ್‌ಬಿಐ ಅಧಿಕೃತ ಡಿಜಿಟಲ್ ಕರೆನ್ಸಿಯೊಂದಿಗೆ ಹೊರಬರಲು ತನ್ನ ಉದ್ದೇಶವನ್ನು ಪ್ರಕಟಿಸಿದೆ. ಅದರ ಬಗ್ಗೆ ಕೇಂದ್ರೀಯ ಬ್ಯಾಂಕ್ ಹಲವು ಕಳವಳ ಹೊಂದಿದೆ.

ಖಾಸಗಿ ಡಿಜಿಟಲ್ ಕರೆನ್ಸಿಗಳು/ವರ್ಚುವಲ್ ಕರೆನ್ಸಿಗಳು/ಕ್ರಿಪ್ಟೋ ಕರೆನ್ಸಿಗಳು ಕಳೆದ ಒಂದು ದಶಕದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಇಲ್ಲಿ, ನಿಯಂತ್ರಕರು ಮತ್ತು ಸರ್ಕಾರಗಳು ಈ ಕರೆನ್ಸಿಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ ಹಾಗೂ ಸಂಬಂಧಿತ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಸೇವೆಗಳನ್ನು ಒದಗಿಸುವ ಬ್ಯಾಂಕ್‌ಗಳು ಮತ್ತು ಸಂಸ್ಥೆಗಳನ್ನು ನಿಷೇಧಿಸುವ ಏಪ್ರಿಲ್ 6, 2018ರ ಆರ್‌ಬಿಐ ಸುತ್ತೋಲೆಯನ್ನು ಮಾರ್ಚ್ 4, 2021ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಎಂದು ಗಮನಿಸಬಹುದು.

ಇದನ್ನೂ ಓದಿ: Cryptocurrency: ಕ್ರಿಪ್ಟೋಕರೆನ್ಸಿಯ “ತೀರ ಆಳವಾದ” ಸಮಸ್ಯೆಗಳ ಬಗ್ಗೆ ಎಚ್ಚರಿಕೆ ನೀಡಿದ ಆರ್​ಬಿಐ ಗವರ್ನರ್ ದಾಸ್

Published On - 8:58 pm, Fri, 19 November 21

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ