US Interest Rates: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ; ಭಾರತೀಯ ಮಾರುಕಟ್ಟೆ ಮೇಲೇನು ಪರಿಣಾಮ?

US Federal Reserve Announces Rates: ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ಬೆಂಚ್​ಮಾರ್ಕ್ ದರವನ್ನು ಶೇ. 5.25ರಿಂದ ಶೇ. 5.50ರಲ್ಲಿ ಮುಂದುವರಿಸಿದೆ. ಸತತ ಎರಡನೇ ಬಾರಿ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬಡ್ಡಿದರದ ಏರಿಕೆ ಅಥವಾ ಇಳಿಕೆ ಈ ಬಾರಿ ಇರುವುದಿಲ್ಲ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಹೀಗಾಗಿ, ವಿಶ್ವಾದ್ಯಂತ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಚಲವಾಗಿಲ್ಲ.

US Interest Rates: ಅಮೆರಿಕದಲ್ಲಿ ಬಡ್ಡಿದರ ಯಥಾಸ್ಥಿತಿ; ಭಾರತೀಯ ಮಾರುಕಟ್ಟೆ ಮೇಲೇನು ಪರಿಣಾಮ?
ಅಮೆರಿಕದ ಸೆಂಟ್ರಲ್ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 02, 2023 | 11:10 AM

ವಾಷಿಂಗ್ಟನ್, ನವೆಂಬರ್ 2: ಅಮೆರಿಕದ ಸೆಂಟ್ರಲ್ ಬ್ಯಾಂಕ್ ಆದ ಫೆಡರಲ್ ರಿಸರ್ವ್ (US Federal Reserve) ನಿರೀಕ್ಷೆಯಂತೆ ಬಡ್ಡಿದರ ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (FOMC) ಸಭೆ ಬಳಿಕ ಅದರ ಅಧ್ಯಕ್ಷ ಜಿರೋಮ್ ಪೋವೆಲ್ (Jerome Powell) ಈ ನಿರ್ಧಾರ ಪ್ರಕಟಿಸಿದರು. ಫೆಡರಲ್ ಬ್ಯಾಂಕ್ ತನ್ನ ಬಡ್ಡಿ ಬೆಂಚ್​ಮಾರ್ಕ್ ದರವನ್ನು (US Fed Lending Benchmark Rates) ಶೇ. 5.25ರಿಂದ ಶೇ. 5.50ರಲ್ಲಿ ಮುಂದುವರಿಸಿದೆ. ಸತತ ಎರಡನೇ ಬಾರಿ ಫೆಡರಲ್ ಬ್ಯಾಂಕ್ ತನ್ನ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಬಡ್ಡಿದರದ ಏರಿಕೆ ಅಥವಾ ಇಳಿಕೆ ಈ ಬಾರಿ ಇರುವುದಿಲ್ಲ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಹೀಗಾಗಿ, ವಿಶ್ವಾದ್ಯಂತ ಮಾರುಕಟ್ಟೆಗಳಲ್ಲಿ ಹೆಚ್ಚಿನ ಸಂಚಲವಾಗಿಲ್ಲ.

ಅಮೆರಿಕದಲ್ಲಿ ಹಣದುಬ್ಬರ ಎಷ್ಟಿದೆ?

ಅಮೆರಿಕದಲ್ಲಿ ಹಣದುಬ್ಬರ ಬಹಳ ಹೆಚ್ಚಿದ್ದರಿಂದ ಕಳೆದ ಒಂದು ವರ್ಷದ ಅವಧಿಯಲ್ಲಿ ಫೆಡರಲ್ ರಿಸರ್ವ್ ತನ್ನ ಬಡ್ಡಿದರಗಳನ್ನು ಸತತವಾಗಿ ಹೆಚ್ಚಿಸಿತ್ತು. ಶೇ. 5.25ರಿಂದ ಶೇ. 5.50ರಷ್ಟಿರುವ ಈ ದರವು ಕಳೆದ 22 ವರ್ಷಗಳಲ್ಲೇ ಗರಿಷ್ಠ ಬಡ್ಡಿ ದರದ ಮಟ್ಟ ಎನಿಸಿದೆ. ಅಮೆರಿಕದಲ್ಲಿ ಹಣದುಬ್ಬರ ಸೆಪ್ಟೆಂಬರ್ ತಿಂಗಳಲ್ಲಿ ಶೇ. 3.7ರಷ್ಟಿದೆ. ಆದರೆ, ಹಣದುಬ್ಬರವನ್ನು ಶೇ. 2ಕ್ಕೆ ತಂದು ನಿಲ್ಲಿಸುವ ಗುರಿ ಫೆಡರಲ್ ರಿಸರ್ವ್ ಬ್ಯಾಂಕ್​ನದ್ದು. ಅಕ್ಟೋಬರ್ ತಿಂಗಳ ಹಣದುಬ್ಬರ ಎಷ್ಟಿದೆ ಎಂಬುದು ನವೆಂಬರ್ 14ರಂದು ಪ್ರಕಟವಾಗುತ್ತದೆ.

ಇದನ್ನೂ ಓದಿ: ಬ್ಯಾಂಕ್​ನಲ್ಲಿ ಸಾಲ ಮಾಡಿ, ಇಎಂಐ ಕಟ್ಟಲು ಆಗುತ್ತಿಲ್ಲವೆಂದರೆ, ಈ ಕೆಲ ಸಲಹೆಗಳನ್ನು ಪಾಲಿಸಿ, ನಿಮ್ಮ ಕ್ರೆಡಿಟ್ ಸ್ಕೋರ್ ನಶಿಸದಂತೆ ನೋಡಿಕೊಳ್ಳಿ

ಭಾರತದ ಮಾರುಕಟ್ಟೆಯ ಮೇಲೇನು ಪರಿಣಾಮ?

ಆಗಲೇ ತಿಳಿಸಿದಂತೆ ಅಮೆರಿಕದ ಬಡ್ಡಿದರದಲ್ಲಿ ಈ ಬಾರಿ ಬದಲಾವಣೆ ಇರುವುದಿಲ್ಲ ಎಂಬುದು ಬಹುತೇಕ ಎಲ್ಲರಿಗೂ ಖಚಿತವಾಗಿ ಗೊತ್ತಿತ್ತು. ಫೆಡರಲ್ ರಿಸರ್ವ್ ಕೂಡ ಈ ಬಗ್ಗೆ ಸುಳಿವು ಕೊಟ್ಟಿತ್ತು. ಅದರ ಪರಿಣಾಮಗಳು ಈಗಾಗಲೇ ಆಗಿಹೋಗಿವೆ. ಇವತ್ತಿನ ನಿರ್ಧಾರದಿಂದ ಪರಿಣಾಮದಲ್ಲಿ ಹೆಚ್ಚೇನೂ ವ್ಯತ್ಯಾಸ ಆಗುವುದಿಲ್ಲ. ಷೇರುಮಾರುಕಟ್ಟೆಯಾಗಲೀ, ಚಿನ್ನವಾಗಲೀ ಸಹಜ ವಹಿವಾಟು ಕಾಣಬಹುದು.

ಅಮೆರಿಕದ ಬಡ್ಡಿದರ 22 ವರ್ಷದಲ್ಲೇ ಗರಿಷ್ಠ ಮಟ್ಟದಲ್ಲಿದೆ. ಈಗಾಗಲೇ ವಿದೇಶೀ ಹೂಡಿಕೆದಾರರು ಕಳೆದ ಕೆಲ ತಿಂಗಳಿಂದ ಭಾರತದ ಮಾರುಕಟ್ಟೆಗಳಿಂದ ಬಂಡವಾಳ ಹಿಂತೆಗೆದುಕೊಂಡು ಅಮೆರಿಕದ ಮಾರುಕಟ್ಟೆಗಳಲ್ಲಿ ಸುರಿದಿವೆ. ಒಂದು ವೇಳೆ, ಫೆಡರಲ್ ರಿಸರ್ವ್ ತನ್ನ ಬಡ್ಡಿದರವನ್ನು ಇನ್ನಷ್ಟು ಹೆಚ್ಚಿಸಿದ್ದರೆ ಭಾರತದ ಷೇರುಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇತ್ತು. ಭಾರತ ಮಾತ್ರವಲ್ಲ ಇತರ ವಿಶ್ವ ಷೇರುಮಾರುಕಟ್ಟೆಗಳಲ್ಲೂ ಸಂಚಲನಗಳಾಗಬಹುದಿತ್ತು.

ಇದನ್ನೂ ಓದಿ: ಕಡಿಮೆಯಾಯ್ತು ಭಾರತಕ್ಕೆ ಬರುವ ರಷ್ಯಾ ತೈಲ; ಹೆಚ್ಚಾಯ್ತು ಸೌದಿ ತೈಲ; ಏನು ಕಾರಣ?

ನವೆಂಬರ್ 14ರಂದು ಅಮೆರಿಕದ ಅಕ್ಟೋಬರ್ ತಿಂಗಳ ಹಣದುಬ್ಬರ ಎಷ್ಟೆಂದು ಪ್ರಕಟವಾಗಲಿದೆ. ಅದರ ಮೇಲೆ ಫೆಡರಲ್ ರಿಸರ್ವ್​ನ ಬಡ್ಡಿದರ ಮುಂದೆ ಯಾವ ಕಡೆ ಹೋಗಹುದು ಎಂಬ ಸುಳಿವು ಸಿಗಬಹುದು. ಒಂದು ವೇಳೆ ಹಣದುಬ್ಬರ ನಿರೀಕ್ಷಿತ ರೀತಿಯಲ್ಲಿ ಇಳಿಕೆ ಆಗಿದ್ದರೆ ಬಡ್ಡಿದರ ಏರಿಕೆ ಇರುವುದಿಲ್ಲ ಎನ್ನುವುದು ಖಚಿತವಾಗುತ್ತದೆ. ಹಣದುಬ್ಬರ ಏರಿದ್ದರೆ ಆಗ ಬಡ್ಡಿದರ ಏರಿಕೆಯ ಸಾಧ್ಯತೆ ಇದೆ ಎಂದು ಭಾವಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ