ಕೊಲ್ಲಿ ರಾಷ್ಟ್ರಗಳನ್ನು ಹಿಂದಿಕ್ಕಿ, ಅಮೆರಿಕದಲ್ಲಿ ಉದ್ಯೋಗಾವಕಾಶ ಹೆಚ್ಚಿದ್ದರಿಂದ ಭಾರತಕ್ಕೆ ಹೆಚ್ಚಳಗೊಂಡ ಪಾವತಿಗಳು!
ಅಮೆರಿಕದಲ್ಲಿ ಭಾರತೀಯರು ಆಕರ್ಷಕ ಸಂಬಳಗಳ ಉದ್ಯೋಗಗಳಿಗೆ ಆಯ್ಕೆಗೊಂಡು, ಅಲ್ಲಿ ಭಾರೀ ಸಂಪಾದನೆಗಳನ್ನು ಶುರು ಮಾಡಿದ್ದರ ಫಲವಾಗಿ ಅವರಿಂದ ಭಾರತಕ್ಕೆ ಬರುವ ಪಾವತಿಗಳು ಹೆಚ್ಚಳವಾಗಿವೆ. ಅದೇ ಕೊಲ್ಲಿ ರಾಷ್ಟ್ರಗಳ ಪರಿಸ್ಥಿತಿ ವಿಭಿನ್ನವಾಗಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ಪಾವತಿಗಳ ಪಾಲು ಶೇ. 30ಕ್ಕೆ ಕುಸಿದಿದೆ.
ನವದೆಹಲಿ: ಅಮೆರಿಕದಲ್ಲಿ (US) ಭಾರತೀಯರು ಆಕರ್ಷಕ ಸಂಬಳಗಳ ಉದ್ಯೋಗಗಳಿಗೆ ಆಯ್ಕೆಗೊಂಡು, ಅಲ್ಲಿ ಭಾರೀ ಸಂಪಾದನೆಗಳನ್ನು ಶುರು ಮಾಡಿದ್ದರ ಫಲವಾಗಿ ಅವರಿಂದ ಭಾರತಕ್ಕೆ ಬರುವ ಪಾವತಿಗಳು ಹೆಚ್ಚಳವಾಗಿವೆ. ಅದೇ ಕೊಲ್ಲಿ ರಾಷ್ಟ್ರಗಳ ಪರಿಸ್ಥಿತಿ ವಿಭಿನ್ನವಾಗಿದೆ. ಅದು ತುಸು ನಿರಾಶಾದಾಯಕವಾಗಿಯೂ ಇದೆ. ಗಲ್ಫ್ ರಾಷ್ಟ್ರಗಳಿಂದ (Gulf countries) ಬರುತ್ತಿದ್ದ ಪಾವತಿಗಳ ಪಾಲು (remittances) 2016-17 ರಲ್ಲಿ ಆಶಾದಾಯಕವಾಗಿ ಶೇ. 50 ರಷ್ಟು ಇತ್ತು. ಆದರೆ 2020-21 ರಲ್ಲಿ ಅದು ಶೇ. 30ಕ್ಕೆ ಕುಸಿದಿದೆ.
ವಿದೇಶದಲ್ಲಿರುವ ಭಾರತೀಯರು ಭಾರತಕ್ಕೆ ಹಣ ರವಾನೆ ಮಾಡುವ ವಿಧಾನದಲ್ಲಿ ಬದಲಾವಣೆಯಾಗಿದೆ. ಮೊದಲು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರು ಭಾರತಕ್ಕೆ ಹೆಚ್ಚು ಹಣ ಕಳುಹಿಸುತ್ತಿದ್ದರು. 2016-17ರ ಅವಧಿಯಲ್ಲಿ ಭಾರತಕ್ಕೆ ರವಾನೆಯಾದ ಶೇ. 50 ರಷ್ಟು ಪಾವತಿಗಳು ಗಲ್ಫ್ ರಾಷ್ಟ್ರಗಳಿಂದ ಕಳುಹಿಸಲಾಗಿದೆ. ಆದರೆ ಈಗ ಒಟ್ಟು ಹಣ ರವಾನೆಯಲ್ಲಿ ಗಲ್ಫ್ ರಾಷ್ಟ್ರಗಳ ಪಾಲು ಶೇ 30ಕ್ಕೆ ಇಳಿದಿದೆ. ಏಕೆಂದರೆ ಭಾರತಕ್ಕೆ ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಿಂದ ಹೆಚ್ಚಿನ ಹಣ ರವಾನೆಯಾಗುತ್ತಿದೆ. ಆರ್ಥಿಕ ಕುಸಿತದ ಹೊರತಾಗಿಯೂ, ಪ್ರಪಂಚದಲ್ಲಿ ಭಾರತವು ಇನ್ನೂ ಹೆಚ್ಚಿನ ಹಣ ರವಾನೆಗಳನ್ನು ಪಡೆಯುತ್ತಿರುವುದು ಗಮನಾರ್ಹ.
2020-21 ರ ಆರ್ಥಿಕ ವರ್ಷದಲ್ಲಿ ಭಾರತವು 89 ಬಿಲಿಯನ್ ಡಾಲರ್ ಪಾವತಿಯನ್ನು ಸ್ವೀಕರಿಸಿದೆ. ಕೇರಳ, ಮಹಾರಾಷ್ಟ್ರ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಗಲ್ಫ್ ದೇಶಗಳಿಂದ ಗರಿಷ್ಠ ಹಣ ಪಾವತಿಯನ್ನು ಪಡೆಯುತ್ತದೆ. ಆದರೆ ಕೊಲ್ಲಿ ರಾಷ್ಟ್ರಗಳಿಂದ ಹಣ ರವಾನೆಯಲ್ಲಿ ಇಳಿಕೆಯಾಗಿದೆ. ಈ ಕಡಿತದ ಪರಿಣಾಮವನ್ನು ಈ ರಾಜ್ಯಗಳ ಆರ್ಥಿಕತೆಯ ಮೇಲೂ ಕಾಣಬಹುದು. ಹೆಚ್ಚಿನ ಸಂಖ್ಯೆಯ ಕೌಶಲ್ಯರಹಿತ ಕಾರ್ಮಿಕರು ಜೀವನೋಪಾಯಕ್ಕಾಗಿ ಗಲ್ಫ್ ದೇಶಗಳಿಗೆ ಹೋಗುತ್ತಾರೆ. ಆದರೆ ಅಮೆರಿಕ ಮತ್ತು ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಗುವ ಭಾರತೀಯರು ಹೆಚ್ಚಾಗಿ ನುರಿತ ಮತ್ತು ಉನ್ನತ ಶಿಕ್ಷಣ ಪಡೆದವರು.
ಇತ್ತೀಚಿನ ದಿನಗಳಲ್ಲಿ ಸುಶಿಕ್ಷಿತರು ವಿದೇಶದಲ್ಲಿ ನೆಲೆಸುವವರ ಸಂಖ್ಯೆ ಹೆಚ್ಚುತ್ತಿದೆ. ಕಳೆದ 3 ವರ್ಷಗಳಲ್ಲಿ 3.9 ಲಕ್ಷ ಮಂದಿ ಭಾರತೀಯ ಪೌರತ್ವ ತ್ಯಜಿಸಿ ವಿದೇಶಕ್ಕೆ ತೆರಳಿದ್ದಾರೆ ಎಂದು ಸರ್ಕಾರವೇ ಹೇಳಿದೆ. ಈ 3.9 ಲಕ್ಷ ಜನರಲ್ಲಿ 1.7 ಲಕ್ಷಕ್ಕೂ ಹೆಚ್ಚು ಜನರು ಅಮೆರಿಕದಲ್ಲಿ ನೆಲೆಸಿದ್ದಾರೆ. ಭಾರತೀಯರು ವಿದೇಶದಲ್ಲಿ ನೆಲೆಸಿದರೆ, ಈಗ ಭಾರತಕ್ಕೆ ಕಡಿಮೆ ಹಣ ಪಾವತಿಯಾಗುವ ಸಾಧ್ಯತೆಗಳಿವೆ. ಅಂದರೆ, ಭಾರತಕ್ಕೆ ಬರುವ ಪಾವತಿಯಲ್ಲಿ ಕುಸಿತ ಕಂಡುಬರಬಹುದು ಎಂಬ ಆತಂಕವಿದೆ.
To read in English click here