AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank NPAs: ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ 6 ವರ್ಷಗಳ ಕನಿಷ್ಠ ಮಟ್ಟಕ್ಕೆ; ನಿರ್ಮಲಾ ಸೀತಾರಾಮನ್

Non Performing Assets; ಬ್ಯಾಂಕ್​ಗಳ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ 2022ರ ಮಾರ್ಚ್​​ನಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಶೇಕಡಾ 5.9ರಷ್ಟಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

Bank NPAs: ಬ್ಯಾಂಕ್​ಗಳ ಅನುತ್ಪಾದಕ ಆಸ್ತಿ 6 ವರ್ಷಗಳ ಕನಿಷ್ಠ ಮಟ್ಟಕ್ಕೆ; ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)Image Credit source: PTI
TV9 Web
| Updated By: Ganapathi Sharma|

Updated on: Dec 21, 2022 | 6:25 PM

Share

ನವದೆಹಲಿ: ಬ್ಯಾಂಕ್​ಗಳ ಒಟ್ಟು ಅನುತ್ಪಾದಕ ಆಸ್ತಿಯ ಪ್ರಮಾಣ (NPA) 2022ರ ಮಾರ್ಚ್​​ನಲ್ಲಿ ಆರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಶೇಕಡಾ 5.9ರಷ್ಟಿತ್ತು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಿಳಿಸಿದ್ದಾರೆ. ರಾಜ್ಯಸಭೆ ಕಲಾಪದಲ್ಲಿ ಹೆಚ್ಚುವರಿ ಅನುದಾನಕ್ಕೆ ಸಂಬಂಧಿಸಿದ ಚರ್ಚೆ ವೇಳೆ ಮಾಹಿತಿ ನೀಡಿದ ಅವರು, ಹಣಕಾಸೇತರ ಖಾಸಗಿ ಕ್ಷೇತ್ರದ ಸಾಲದ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಕಾರ್ಪೊರೇಟ್ ವಲಯದ ಬ್ಯಾಲೆನ್ಸ್​ಶೀಟ್​ನಿಂದ ತಿಳಿದುಬಂದಿದೆ. ಇದು 2016ರ ಮಾರ್ಚ್​​ನಲ್ಲಿ ಜಿಡಿಪಿಯ ಶೇಕಡಾ 97.4ರಷ್ಟಿದ್ದರೆ 2022ರ ಜೂನ್​ನಲ್ಲಿ ಶೇಕಡಾ 87.8ಕ್ಕೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಉತ್ಪಾದನೆ ಆಧಾರಿತ ಭತ್ಯೆಯಂಥ (ಪಿಎಲ್​ಐ ಸ್ಕೀಮ್) ಯೋಜನೆಗಳಿಂದ ದೇಶದಲ್ಲಿ ಬಂಡವಾಳ ವೆಚ್ಚಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಬಂಡವಾಳ ವೆಚ್ಚದ ಜತೆಗೆ ಪಿಎಲ್​ಐ ಸ್ಕೀಮ್​ನಂಥ ಯೋಜನೆಗಳಿಂದ ಸ್ಟಾರ್ಟಪ್​ಗಳ ಸ್ಥಾಪನೆಯಾದಾಗ ಉದ್ಯೋಗಾವಕಾಶವೂ ಸೃಷ್ಟಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಭಿವೃದ್ಧಿಹೊಂದಿದ ಅನೇಕ ದೇಶಗಳು ಇಂದು ಆರ್ಥಿಕ ಹಿಂಜರಿತದಿಂದ ಬಳಲುತ್ತಿವೆ. ಇದಕ್ಕೆ ಆ ದೇಶಗಳು ಕೋವಿಡ್ ಅನ್ನು ನಿರ್ವಹಿಸಿದ ರೀತಿಯೇ ಕಾರಣ. ಆದರೆ, ಭಾರತವು ಭಿನ್ನವಾಗಿ ಸಾಂಕ್ರಾಮಿಕವನ್ನು ಎದುರಿಸಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹೊರಗಿನಿಂದ ಬರುವ ಇಂಧನ ಮತ್ತು ರಸಗೊಬ್ಬರ ದರ ಗಳ ಪರಿಣಾಮವಾಗಿ ಹಣದುಬ್ಬರ ಹೆಚ್ಚಾಗಿತ್ತು. ಇದರ ಮೇಲೆ ಸರ್ಕಾರ ನಿಗಾ ಇರಿಸಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: EPFO New Subscribers: ಅಕ್ಟೋಬರ್​ನಲ್ಲಿ 12.94 ಲಕ್ಷ ಮಂದಿ ಇಪಿಎಫ್​ಒಗೆ ಸೇರ್ಪಡೆ; ಉದ್ಯೋಗ ಹೆಚ್ಚಳವೂ ಕಾರಣ

23ನೇ ಹಣಕಾಸು ವರ್ಷದಲ್ಲಿ 3.25 ಲಕ್ಷ ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವ ಪ್ರಸ್ತಾವದ ಮೇಲೆ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ, ಅಗತ್ಯ ವಸ್ತುಗಳ ಬೆಲೆ ಮೇಲೆ ನಿಗಾ ಇರಿಸುವ ಮೂಲಕ ಹಣದುಬ್ಬರ ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅನುತ್ಪಾದಕ ಆಸ್ತಿ ಎಂದರೇನು?

ಅನುತ್ಪಾದಕ ಆಸ್ತಿ ಎಂದರೆ, ಸರಳವಾಗಿ ಹೇಳುವುದಾದರೆ ಮರು ಪಾವತಿಯಾಗದೇ ಇರುವ ಸಾಲವಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವ್ಯಾಖ್ಯಾನದ ಪ್ರಕಾರ, ಬ್ಯಾಂಕ್​ಗಳಿಂದ ಪಡೆದ ಮುಂಗಡ ಅಥವಾ ಸಾಲವನ್ನು ಮರುಪಾವತಿ ಅವಧಿಯ 90 ದಿನಗಳು ಕಳೆದರೂ ಪಾವತಿ ಮಾಡದಿದ್ದರೆ (ಅಸಲು ಮತ್ತು ಬಡ್ಡಿ) ಅದು ಅನುತ್ಪಾದಕ ಆಸ್ತಿಯೆಂದು ಪರಿಗಣಿಸಲಾಗುತ್ತದೆ. ದೀರ್ಘಾವಧಿಯ ವರೆಗೆ ಸಾಲ ಮರುಪಾವತಿಯಾಗದೇ ಇದ್ದಾಗ ಅದನ್ನು ಬ್ಯಾಂಕ್​ಗಳು ತಮ್ಮ ಬ್ಯಾಲೆನ್ಸ್​​ಶೀಟ್​ಗಳಲ್ಲಿ ಅನುತ್ಪಾದಕ ಆಸ್ತಿಯೆಂದು ನಮೂದಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ವರಮಹಾಲಕ್ಷ್ಮೀ ಹಬ್ಬ ಆಚರಣೆ ದಿನಾಂಕ ಯಾವಾಗ? ಆಚರಣೆ ಹೇಗೆ , ಫಲಗಳೇನು?
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಇಂದು ವಿನಾಯಕಿ ಚತುರ್ಥಿ: ದ್ವಾದಶ ರಾಶಿ ಭವಿಷ್ಯ ಹೇಗಿದೆ ನೋಡಿ
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ಪ್ರಥಮ್​ ಮೇಲೆ ಅಟ್ಯಾಕ್: ಅಲ್ಲೇ ಇದ್ದರು ರಕ್ಷಕ್ ಸುಮ್ಮನಿದ್ದಿದ್ದು ಏಕೆ?
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ರೌಡಿಗಳ ಜೊತೆಗೆ ರಕ್ಷಕ್​ಗೆ ಏನು ಕೆಲಸ: ಪ್ರಥಮ್ ಆಕ್ರೋಶ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು