ಇಂಡಸ್​ಇಂಡ್ ಬ್ಯಾಂಕ್​ ಸಹವರ್ತಿ ಬಿಎಫ್​ಐಎಲ್​ನಲ್ಲಿ ದುರಾಡಳಿತ, ನಿಯಮಾವಳಿ ಪಾಲನೆ ಕೊರತೆ ಬಗ್ಗೆ ದೂರು

ಇಂಡಸ್​ಇಂಡ್ ಬ್ಯಾಂಕ್​ನ ಅಂಗಸಂಸ್ಥೆಯಾದ ಭಾರತ್ ಫೈನಾನ್ಷಿಯಲ್ ಇನ್​ಕ್ಲೂಷನ್​ನಲ್ಲಿ ದುರಾಡಳಿತ ಹಾಗೂ ನಿಯಮಾವಳಿಗಳ ಪಾಲನೆಯಲ್ಲಿನ ಕೊರತೆ ಬಗ್ಗೆ ದೂರು ನೀಡಲಾಗಿದೆ. 84000 ಗ್ರಾಹಕರ ಒಪ್ಪಿಗೆ ಇಲ್ಲದೆ ಸಾಲ ನೀಡಲಾಗಿದೆ ಎಂಬುದಕ್ಕೆ ಸಂಬಂಧಿಸಿದ ದೂರು ಇದಾಗಿದೆ.

ಇಂಡಸ್​ಇಂಡ್ ಬ್ಯಾಂಕ್​ ಸಹವರ್ತಿ ಬಿಎಫ್​ಐಎಲ್​ನಲ್ಲಿ ದುರಾಡಳಿತ, ನಿಯಮಾವಳಿ ಪಾಲನೆ ಕೊರತೆ ಬಗ್ಗೆ ದೂರು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 06, 2021 | 1:49 PM

ಕಿರು ಸಾಲವನ್ನು ನೀಡುವಂಐಥ ಭಾರತ್ ಫೈನಾನ್ಷಿಯಲ್ ಇನ್​ಕ್ಲೂಷನ್​ (Bharat Financial Inclusion) ಹಿರಿಯ ಅಧಿಕಾರಿಗಳ ಸಮೂಹವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮತ್ತು ಇಂಡಸ್​ಇಂಡ್ ಬ್ಯಾಂಕ್ ಸಿಇಒ ಸುಮಂತ್ ಕತ್​ಪಲಿಯಾ ಮತ್ತು ಬ್ಯಾಂಕ್​ನ ಸ್ವತಂತ್ರ ನಿರ್ದೇಶಕರನ್ನು ಎಚ್ಚರಿಸಿದೆ. ಕೊರೊನಾ ಬಿಕ್ಕಟ್ಟಿನ ಈಚೆಗೆ ಭಾರತ್ ಫೈನಾನ್ಷಿಯಲ್ ಇನ್​ಕ್ಲೂಷನ್​ನಲ್ಲಿ ಆಗಿರುವ “ದುರಾಡಳಿತ ಮತ್ತು ಎವರ್​ಗ್ರೀನ್ ಸಾಲಗಳಿಗೆ ಲೆಕ್ಕದ ನಿಯಮಾವಳಿಗಳಲ್ಲಿನ ಕೊರತೆ” ಕುರಿತು ಗಮನ ಸೆಳೆಯಲಾಗಿದೆ ಎಂದು ಸಿಎನ್​ಬಿಸಿ-ಟಿವಿ18 ವರದಿ ಮಾಡಿದೆ. ಭಾರತ್ ಫೈನಾನ್ಷಿಯಲ್ ಇನ್​ಕ್ಲೂಷನ್ ಎಂಬುದು (BFIL) ಇಂಡಸ್​ಇಂಡ್​ ಬ್ಯಾಂಕ್​ನ ಸಹವರ್ತಿ. ಬಿಎಫ್​ಐಎಲ್​ ಅನ್ನು ಎಸ್​ಕೆಎಸ್​ ಮೈಕ್ರೋಫೈನಾನ್ಸ್ ಎಂದು ಅದನ್ನು 2019ರಲ್ಲಿ ಸ್ವಾಧೀನಪಡಿಸಿಕೊಳ್ಳು ತನಕ ಕರೆಯಲಾಗುತ್ತಿತ್ತು. ಅಕ್ಟೋಬರ್ 17 ಮತ್ತು 24ರ ಮಧ್ಯೆ ಈ ಬಗ್ಗೆ ಪತ್ರವನ್ನು ರವಾನಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಈ ಬಗ್ಗೆ ದೃಢೀಕರಣ ಮಾಡಿಕೊಂಡ ಬಗ್ಗೆ ವರದಿಯಿಲ್ಲ.

ಈ ಬಗ್ಗೆ ಮೂಲ ವರದಿಯು ಪ್ರಮುಖ ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಒಂದು ವೇಳೆ “ಹೊಸದಾದ ಸಾಲ ಮೊತ್ತವನ್ನು ಬಾಕಿ ಇರುವ ಹಳೇ ಸಾಲದ ಜತೆಗೆ ತಕ್ಷಣವೇ ಪರಿಶೀಲಿಸಿಲ್ಲ” ಅಂತಾದಲ್ಲಿ, ಅಂಗಸಂಸ್ಥೆಯು “ಮಾತೃಸಂಸ್ಥೆಯ ಹಣಕಾಸನ್ನು ನುಂಗುತ್ತದೆ,” ಎಂದು ವಿಷಲ್ ಬ್ಲೋವರ್ಸ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಬ್ಬ ವಿಷಲ್ ಬ್ಲೋವರ್ ಅಕ್ಟೋಬರ್ 14ನೇ ತಾರೀಕು ಆರ್​ಬಿಐಗೆ ದೂರು ನೀಡಿದ್ದಾರೆ. ಭಾರತ್ ಫೈನಾನ್ಷಿಯಲ್ ಇನ್​ಕ್ಲೂಷನ್​ನಿಂದ ರಿಸ್ಕ್ ಮ್ಯಾನೇಜ್​ಮೆಂಟ್ ಮತ್ತು ಲೆಕ್ಕಪರಿಶೋಧನಾ ಸಮಿತಿಗಳನ್ನು ಆರಂಭಿಸುವುದನ್ನು ನಿರ್ಲಕ್ಷಿಸಲಾಗಿದೆ ಎಂದು ಎರಡು ಮೂಲಗಳು ತಿಳಿಸಿರುವುದಾಗಿ ವರದಿ ಆಗಿದೆ.

ಗ್ರಾಹಕರ ಒಪ್ಪಿಗೆಯನ್ನು ಪಡೆಯದೆ ನೀಡಿರುವ ಸಾಲ ಸೆಪ್ಟೆಂಬರ್​ನಲ್ಲಿ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ಎಂ.ಆರ್​. ರಾವ್ ರಾಜೀನಾಮೆ ನೀಡುತ್ತಾ ಮಾತನಾಡಿ, ಬಿಎಫ್​ಐಎಲ್​ಗೆ ಸಂಬಂಧಿಸಿದಂತೆ ಆರ್​ಬಿಐನಿಂದ ಆತಂಕ ವ್ಯಕ್ತಪಡಿಸಲಾಗಿದೆ ಎಂಬ ಸಂಗತಿ ಬಗ್ಗೆ ತಿಳಿದಿದೆ. ನಿರ್ದಿಷ್ಟವಾಗಿ 80 ಸಾವಿರ ಸಾಲಗಳನ್ನು 2021ರ ಮೇ ತಿಂಗಳಲ್ಲಿ ಗ್ರಾಹಕರ ಒಪ್ಪಿಗೆಯನ್ನು ಪಡೆಯದೆ ನೀಡಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ ಎಂದು ಅವರು ಹೇಳಿದ್ದರು. ಮರುಪಾವತಿ ದರವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಉದ್ದೇಶಪೂರ್ವಕ ಕ್ರಮವಾಗಿ ಆ ಆತಂಕ ವ್ಯಕ್ತವಾಗಿತ್ತು ಎಂದಿದ್ದರು. ಎವರ್​ಗ್ರೀನಿಂಗ್​ ಲೋನ್ ಅಂದರೆ, ಯಾರಾದರೂ ಈಗಾಗಲೇ ಸಾಲವನ್ನು ಪಡೆದು, ಅದನ್ನು ವಾಪಸ್​ ನೀಡದೆ ಬಾಕಿ ಉಳಿಸಿಕೊಂಡಿದ್ದಾಗ ಅದರ ಪುನಶ್ಚೇತನಕ್ಕೆ ಮತ್ತೆ ಹೊಸ ಸಾಲ ನೀಡಲಾಗುತ್ತದೆ. ಎನ್​ಪಿಎ ಅನ್ನು ತೋರಿಸಬಾರದು ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.

ವಿನಿಮಯ ಕೇಂದ್ರಕ್ಕೆ ಈ ಬಗ್ಗೆ ಇಂಡಸ್​ಇಂಡ್ ಬ್ಯಾಂಕ್ ಹೇಳಿಕೆಯನ್ನು ನೀಡಿದ್ದು, ಈ ಆರೋಪವು “ಒಟ್ಟಾರೆಯಾಗಿ ನಿಖರವಾಗಿಲ್ಲ ಮತ್ತು ಆಧಾರರಹಿತ” ಎಂದು ಕರೆದಿದೆ. ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಎಫ್​ಐಎಲ್ ನಿರ್ವಹಿಸುವ ಎಲ್ಲ ಸಾಲದ ಉತ್ಪನ್ನಗಳನ್ನೂ ಮಂಜೂರು ಮಾಡುವುದು ಬ್ಯಾಂಕ್ ಮತ್ತು ಸಂಪೂರ್ಣವಾಗಿ ನಿಯಂತ್ರಕರ ಮಾರ್ಗಸೂಚಿಗೆ ಅನುಗುಣವಾಗಿ ಅದನ್ನು ಮಾಡಲಾಗುತ್ತಿದೆ. ಈ ಕಿರು ಸಾಲ ಸಂಸ್ಥೆಯು ಎಕ್ಸ್​ಕ್ಯೂಟಿವ್ ಮಟ್ಟದ ರಿಸ್ಕ್ ಮ್ಯಾನೇಜ್​ಮೆಂಟ್ (ಅಪಾಯ ನಿರ್ವಹಣೆ) ಸಮಿತಿಯನ್ನು ಹೊಂದಿದ್ದು, ಅದು ತಿಂಗಳಿಗೊಮ್ಮೆ ಸಭೆ ಸೇರುತ್ತದೆ ಎನ್ನಲಾಗಿದೆ.

ನಿಯಂತ್ರಕರ ನಿಯಮಾವಳಿಯೊಳಗೆ ಇದೆ ಬ್ಯಾಂಕ್​ ಕೂಡ “ಪ್ರಬಲವಾಗಿ” ಎವರ್​ಗ್ರೀನಿಂಗ್ ಆರೋಪವನ್ನು ನಿರಾಕರಿಸಿದೆ ಮತ್ತು ಎಲ್ಲ ಸಾಲಗಳು, ಕೊವಿಡ್​ ಅವಧಿಯಲ್ಲಿ ವಿತರಿಸಿದ್ದು ಸೇರಿದಂತೆ ಸಂಪೂರ್ಣವಾಗಿ ನಿಯಂತ್ರಕರ ನಿಯಮಾವಳಿಯೊಳಗೆ ಇದೆ ಎಂದು ಹೇಳಿದೆ. “ಗ್ರಾಹಕರ ಅಗತ್ಯವನ್ನು ಅವಲಂಬಿಸಿ” “ಬಹುಮುಖದ ವಿಧಾನವನ್ನು” ಅಳವಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ. ಗ್ರಾಹಕರು “ಕಾರ್ಯಾಚರಣೆಯ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಕೆಲವರು ಮಧ್ಯಂತರ ಪಾವತಿದಾರರಾಗಿ ಬದಲಾಗಿದ್ದಾರೆ. ಆದರೂ ಅವರಲ್ಲಿ ಹೆಚ್ಚಿನ ಭಾಗ ಅನೇಕ ಸಂದರ್ಭಗಳಲ್ಲಿ ಮರುಪಾವತಿ ಮಾಡುವ ಬಲವಾದ ಉದ್ದೇಶವನ್ನು ಪ್ರದರ್ಶಿಸಿದ್ದಾರೆ,” ಎಂದು ಅದು ಸೇರಿಸಿದೆ.

ಗ್ರಾಹಕರ ಒಪ್ಪಿಗೆಯಿಲ್ಲದೆ ಸಾಲಗಳನ್ನು ವಿತರಿಸಿದ ಆರೋಪವನ್ನು ಬ್ಯಾಂಕ್ ತಳ್ಳಿಹಾಕಿದೆ. ಮತ್ತು BFIL ಮೂಲಕ ನೀಡಲಾದ ಎಲ್ಲ ಸಾಲಗಳು ಗ್ರಾಹಕರ ಬಯೋಮೆಟ್ರಿಕ್ ದೃಢೀಕರಣದ ಮೂಲಕವೇ ಎಂದು ಹೇಳಿದೆ – ಮೇ 2021ರಲ್ಲಿ ತಾಂತ್ರಿಕ ದೋಷವನ್ನು ಹೊರತುಪಡಿಸಿ, ಆ ಸಮಯದಲ್ಲಿ ಗ್ರಾಹಕರ ಒಪ್ಪಿಗೆಯಿಲ್ಲದೆ ಸುಮಾರು 84,000 ಸಾಲಗಳನ್ನು ವಿತರಿಸಲಾಗಿದೆ ಎಂದು ವಿತರಣೆಯ ಸಮಯದಲ್ಲಿ ದಾಖಲಾಗಿತ್ತು. “ಬ್ಯಾಂಕ್‌ನಲ್ಲಿ ಮತ್ತು BFILನಲ್ಲಿ ಬಲವಾದ ಅಪಾಯ ನಿರ್ವಹಣೆ ಮತ್ತು ನಿಯಂತ್ರಣ ಚೌಕಟ್ಟು ಇದೆ ಎಂದು ಪುನರುಚ್ಚರಿಸಲು ಬ್ಯಾಂಕ್ ಬಯಸುತ್ತದೆ. ಅದೇನೇ ಇದ್ದರೂ BFILನಲ್ಲಿ ಯಾವುದೇ ಪ್ರಕ್ರಿಯೆಯ ಲೋಪ ಅಥವಾ ಲೆಕ್ಕಪತ್ರ ವೈಫಲ್ಯವಿದೆಯೇ ಎಂದು ನೋಡಲು ಬ್ಯಾಂಕ್ ಸ್ವತಂತ್ರ ವಿಮರ್ಶೆಯನ್ನು ಪ್ರಾರಂಭಿಸಿದೆ. ಯಾವುದೇ ಅಗತ್ಯವಿದ್ದಲ್ಲಿ ಬ್ಯಾಂಕ್ ತಕ್ಷಣವೇ ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತದೆ ಮತ್ತು ಎಲ್ಲ ಸಂಬಂಧಪಟ್ಟವರಿಗೆ ಸಮರ್ಪಕವಾಗಿ ತಿಳಿಸುತ್ತದೆ,” ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ಬ್ಯಾಂಕ್​ನಿಂದ ಸಂಪ್ರದಾಯವಾದಿ ಪ್ರಾವಿಷನ್ ಒದಗಿಸುವ ವಿಧಾನವನ್ನು ಅನುಸರಿಸುತ್ತಿದೆ ಮತ್ತು “ಮೈಕ್ರೋ-ಫೈನಾನ್ಸ್ ವ್ಯವಹಾರ ಸೇರಿದಂತೆ ಕ್ರೆಡಿಟ್ ವೆಚ್ಚದ ಅಂದಾಜುಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಪುನರುಚ್ಚರಿಸುತ್ತದೆ. ಬ್ಯಾಂಕ್ ಮತ್ತೊಮ್ಮೆ ಎಲ್ಲ ಆರೋಪಗಳನ್ನು ನಿರಾಕರಿಸುತ್ತದೆ,” ಎನ್ನಲಾಗಿದೆ. ​

ಇದನ್ನೂ ಓದಿ: IndusInd Bank: ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹಿಸಲು ಇಂಡಸ್​ಇಂಡ್​ ಬ್ಯಾಂಕ್​ಗೆ ಆರ್​ಬಿಐನಿಂದ ಅನುಮತಿ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ