Work from office: ಮತ್ತೆ ವಾರದಲ್ಲಿ 5 ದಿನ ಕಚೇರಿಗೆ ತೆರಳುವುದು ಅನುಮಾನ ಎನ್ನುತ್ತಿದೆ ಸಮೀಕ್ಷೆ
ಒಇಸಿಡಿ ಸಮೀಕ್ಷೆ ಪ್ರಕಾರವಾಗಿ ಮತ್ತೆ ವಾರದ ಏಳು ದಿನದಲ್ಲಿ 5 ದಿನಗಳು ಕೆಲಸಕ್ಕೆ ಮತ್ತೆ ಹಿಂತಿರುಗುವುದು ಅನುಮಾನ ಎನ್ನಲಾಗುತ್ತಿದೆ.
25 ದೇಶಗಳಲ್ಲಿನ ಕಾರ್ಮಿಕರ ಸಮೀಕ್ಷೆಯೊಂದರ ಪ್ರಕಾರ, ವಾರಕ್ಕೆ ಐದು ದಿನಗಳ ಕಚೇರಿ ಕೆಲಸಕ್ಕೆ ಹಿಂತಿರುಗಲು ಸಾಧ್ಯವಿಲ್ಲ. ಕೊರೊನಾ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿರುವುದು ಉದ್ಯೋಗಿಗಳು ಮತ್ತು ಮ್ಯಾನೇಜರ್ಗಳ ಕಾರ್ಯಕ್ಷಮತೆ ಮತ್ತು ಯೋಗಕ್ಷೇಮಕ್ಕೆ ಪಾಸಿಟಿವ್ ಆಗಿದೆ ಎಂದು OECD ವರದಿಯಲ್ಲಿ ಕಂಡುಬಂದಿದೆ. ವಾರದಲ್ಲಿ ಕನಿಷ್ಠ ಒಂದು ದಿನ ಟೆಲಿವರ್ಕಿಂಗ್ ಮಾಡುವ ಸಿಬ್ಬಂದಿಯ ಪ್ರಮಾಣವು ಸಾಂಕ್ರಾಮಿಕ ರೋಗದ ಮುಂಚೆಗಿಂತ ಹೆಚ್ಚು ಎಂದು ನಿರೀಕ್ಷಿಸಲಾಗಿದೆ. ವೆಬ್‌ಸೈಟ್‌ನಲ್ಲಿನ ಉದ್ಯೋಗ ಪೋಸ್ಟಿಂಗ್‌ಗಳ ಬಗ್ಗೆ OECD ಸಂಶೋಧಕರು ಪ್ರತ್ಯೇಕ ಅಧ್ಯಯನ ನಡೆಸಿದ್ದಾರೆ. ಕೊವಿಡ್ ಲಾಕ್‌ಡೌನ್‌ಗಳಲ್ಲಿ ಜಾಹೀರಾತು ಟೆಲಿವರ್ಕ್‌ನಲ್ಲಿನ ಗಣನೀಯ ಹೆಚ್ಚಳವು ನಿರ್ಬಂಧಗಳು ತೆರವುಗೊಳಿಸಿದ ಮೇಲೆ ಸಾಧಾರಣ ಮಟ್ಟದಲ್ಲಿ ವಾಪಸ್ ಆಗಿದೆ ಎಂದು ಕಂಡುಬಂದಿದೆ.
“ಈ ಫಲಿತಾಂಶಗಳ ಪ್ರಕಾರವಾಗಿ ಟೆಲಿವರ್ಕ್ ಉಳಿಯಲಿದೆ, ವಿಶೇಷವಾಗಿ ಹೆಚ್ಚಿನ ಮಟ್ಟದ ಡಿಜಿಟಲ್ ಸಿದ್ಧತೆ ಹೊಂದಿರುವ ದೇಶಗಳಲ್ಲಿ ಇರಲಿವೆ ಎಂದು ಸೂಚಿಸುತ್ತದೆ,” ಎಂಬುದನ್ನು ಸಂಶೋಧಕರು ಹೇಳಿದ್ದಾರೆ. ಟೆಲಿವರ್ಕಿಂಗ್ ಕಡೆಗೆ ಮೂಲಭೂತ ಮತ್ತು ಶಾಶ್ವತವಾದ ಬದಲಾವಣೆಯು ಆರ್ಥಿಕತೆಯ ರಚನೆಗೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಇದರ ಜತೆಗೆ ಉತ್ಪಾದಕತೆಯಿಂದ ಕಾರ್ಮಿಕರ ಹಕ್ಕುಗಳು ಮತ್ತು ಶಿಶುಪಾಲನಾ ನಿಬಂಧನೆಗಳವರೆಗೆ ಪ್ರಭಾವ ಬೀರುತ್ತದೆ.
ಹೊಂದಿಕೊಳ್ಳುವ ಬಗ್ಗೆ ಸಮೀಕ್ಷೆಯ ಫಲಿತಾಂಶಗಳನ್ನು ವಿಶ್ಲೇಷಿಸುವ ಸಂಶೋಧಕರು ಸರ್ಕಾರಗಳು, ವಿಶ್ವಾಸಾರ್ಹ ಇಂಟರ್ನೆಟ್ ಕವರೇಜ್ ಅನ್ನು ಖಾತ್ರಿ ಮಾಡಿಕೊಳ್ಳಬೇಕು. ಟೆಲಿವರ್ಕ್ ಸಾಧ್ಯವಾಗಿಸಲು ನಿಯಮಗಳನ್ನು ಹೊಂದಾಣಿಕೆ ಮಾಡಿಸಬೇಕು ಮತ್ತು ಮಹಿಳೆಯರು ಹಾಗೂ ಸಣ್ಣ ಕಂಪನಿಗಳ ಉದ್ಯೋಗಿಗಳನ್ನು ಒಳಗೊಂಡಂತೆ ದೂರದಿಂದ ಕೆಲಸ ಮಾಡುವುದರಲ್ಲಿ ಹಿಂದುಳಿದವರಿಗೆ ತರಬೇತಿಯನ್ನು ನೀಡಬೇಕು ಎಂಬ ಬಗ್ಗೆ ಹೇಳಲಾಗಿದೆ. ಯೋಗಕ್ಷೇಮ ಮತ್ತು ಮನೆಯಿಂದ ಹೆಚ್ಚು ಕೆಲಸ ಮಾಡುವುದರಿಂದ ಉತ್ಪಾದಕತೆಗೆ ಹಾನಿ ಉಂಟಾಗದಂತೆ ಕಾರ್ಮಿಕರನ್ನು ರಕ್ಷಿಸಬೇಕು ಎನ್ನಲಾಗಿದೆ.
ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದವರ ಪ್ರಕಾರ, ಟೆಲಿವರ್ಕ್‌ನ ಸೂಕ್ತ ಸಮಯ ವಾರದಲ್ಲಿ ಎರಡರಿಂದ ಮೂರು ದಿನಗಳು. ಇದರಿಂದ ಕಡಿಮೆ ಪ್ರಯಾಣ, ಮನೆಯಲ್ಲಿ ಕಡಿಮೆ ಗೊಂದಲದಂತಹ ಪ್ರಯೋಜನಗಳಿವೆ. ಆದರೆ ಇದರಿಂದ ಸಂವಹನದಲ್ಲಿ ಸಮಸ್ಯೆ ಆಗಬಹುದು. “ಟೆಲಿವರ್ಕ್ನೊಂದಿಗೆ ಕೊರೊನಾ ಸಮಯದಲ್ಲಿ ಪಡೆದ ಅನುಭವವು ಮುಂಬರುವ ವರ್ಷಗಳಲ್ಲಿ ಕೆಲಸದ ಸಂಸ್ಥೆಯ ಮೇಲೆ ನಿರ್ಣಾಯಕವಾಗಿ ಪರಿಣಾಮ ಬೀರುತ್ತದೆ ಎಂಬುದು ಅನುಮಾನ,” ಎಂದು ಸಂಶೋಧಕರು ಹೇಳಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ಗೆ ವರ್ಕ್ ಫ್ರಮ್ ಹೋಮ್ ಕೊನೆ? ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆತರಲು ಐಟಿ ಕಂಪೆನಿಗಳ ಯೋಜನೆ