AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐವತ್ತು ವರ್ಷದಲ್ಲಿ ಆಗುವಂಥದ್ದನ್ನು ಆರೇ ವರ್ಷದಲ್ಲಿ ಸಾಧಿಸಿದೆ ಭಾರತ: ವಿಶ್ವಬ್ಯಾಂಕ್ ಪ್ರಶಂಸೆ

World Bank Praises India's DPI: ಜನ್ ಧನ್ ಯೋಜನೆ, ಆಧಾರ್, ಮೊಬೈಲ್ ನಂಬರ್​ನೊಳಗೊಂಡ ವ್ಯವಸ್ಥೆ, ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಸೌಕರ್ಯದ ಮೂಲಕ ಭಾರತ ಹಣಕಾಸು ಒಳಗೊಳ್ಳುವಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ. ಐದು ದಶಕದಲ್ಲಿ ಆಗುವ ಕೆಲಸವನ್ನು ಕೇವಲ 6 ವರ್ಷದಲ್ಲಿ ಮಾಡಿದೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಜಿ20 ಗ್ರೋಬಲ್ ಪಾರ್ಟ್ನರ್​ಶಿಪ್ ಫಾರ್ ಫೈನಾನ್ಷಿಯಲ್ ಇನ್​ಕ್ಲೂಶನ್ ಎಂಬ ದಾಖಲೆಯಲ್ಲಿ ವಿಶ್ವಬ್ಯಾಂಕ್ ಈ ವಿಚಾರಗಳನ್ನು ಹೈಲೈಟ್ ಮಾಡಿದೆ.

ಐವತ್ತು ವರ್ಷದಲ್ಲಿ ಆಗುವಂಥದ್ದನ್ನು ಆರೇ ವರ್ಷದಲ್ಲಿ ಸಾಧಿಸಿದೆ ಭಾರತ: ವಿಶ್ವಬ್ಯಾಂಕ್ ಪ್ರಶಂಸೆ
ವಿಶ್ವಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 08, 2023 | 12:35 PM

ನವದೆಹಲಿ, ಸೆಪ್ಟೆಂಬರ್ 8: ಭಾರತದ ಡಿಜಿಟಿಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಥವಾ ಸಾರ್ವಜನಿಕ ಡಿಜಿಟಲ್ ಸೌಕರ್ಯ ವ್ಯವಸ್ಥೆ (DPI- Digital Public Infrastructure) ಬಗ್ಗೆ ವಿಶ್ವಬ್ಯಾಂಕ್ ಪ್ರಶಂಸೆ ವ್ಯಕ್ತಪಡಿಸಿದೆ. ಜಿ20 ಸಭೆಗಾಗಿ ಸಿದ್ಧಪಡಿಸಿದ ದಾಖಲೆಯೊಂದರಲ್ಲಿ ವಿಶ್ವಬ್ಯಾಂಕ್, ಭಾರತದಲ್ಲಿ ಡಿಪಿಐಗಳ ಪಾತ್ರದ ಬಗ್ಗೆ ಪ್ರಸ್ತಾಪಿಸುತ್ತಾ ಕಳೆದ 6 ವರ್ಷದಲ್ಲಿ ಆಗಿರುವ ಪ್ರಗತಿಯನ್ನು ಶ್ಲಾಘಿಸಿದೆ. ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ವಿಚಾರದಲ್ಲಿ ಐದು ದಶಕದಲ್ಲಿ ಆಗುವಂಥದ್ದನ್ನು ಭಾರತ ಕೇವಲ 6 ವರ್ಷದಲ್ಲಿ ಸಾಧಿಸಿದೆ ಎಂದು ಹೇಳಿದೆ.

ಇನ್ನು, ಡಿಪಿಐನಲ್ಲಿ ಪ್ರಮುಖ ಭಾಗ ಎನಿಸಿರುವ ಜನ್ ಧನ್ ಯೋಜನೆ, ಆಧಾರ್ ಮತ್ತು ಮೊಬೈಲ್ ನಂಬರ್​ಗಳ ಸಂಯೋಜನೆಯ (JAM Trinity) ಪಾತ್ರವನ್ನು ವಿಶ್ವಬ್ಯಾಂಕ್ ಗುರುತಿಸಿದೆ. ಹಣಕಾಸು ಒಳಗೊಳ್ಳುವಿಕೆಯ (Financial Inclusion) ಪ್ರಗತಿಗೆ ಈ ಮೂರು ಅಂಶಗಳು ಬಹಳ ಮುಖ್ಯ ಎನಿಸಿವೆ. ಹಣಕಾಸು ಒಳಗೊಳ್ಳುವಿಕೆ ದರ 2008ರಲ್ಲಿ ಶೇ. 25ರಷ್ಟು ಇದ್ದದ್ದು ಕಳೆದ 6 ವರ್ಷದಲ್ಲಿ ಶೇ. 80ಕ್ಕೆ ಏರಿದೆ. ಇಷ್ಟ ಸಾಧಿಸಲು ಬೇಕಾಗಿದ್ದ ಅವಧಿ 47 ವರ್ಷಗಳಷ್ಟು ಕಡಿಮೆ ಆಗಿದೆ. ಇದಕ್ಕೆ ಭಾರತದ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಪ್ರಗತಿ ಕಾರಣ ಎಂದು ವಿಶ್ವ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಜಿ20 ದೇಶಗಳಲ್ಲಿ ವಿಶ್ವದ ಶೇ. 85 ಜಿಡಿಪಿ; ಈ ಗುಂಪಿನ ಬಗ್ಗೆ ಕುತೂಹಲಕಾರಿ ಮಾಹಿತಿ

ಜಿ20 ಗ್ರೋಬಲ್ ಪಾರ್ಟ್ನರ್​ಶಿಪ್ ಫಾರ್ ಫೈನಾನ್ಷಿಯಲ್ ಇನ್​ಕ್ಲೂಶನ್ ಎಂಬ ದಾಖಲೆಯಲ್ಲಿ ವಿಶ್ವಬ್ಯಾಂಕ್ ಹಲವು ಸಂಗತಿಗಳನ್ನು ಪ್ರಸ್ತಾಪಿಸಿ, ಭಾರತದ ಸಾಧನೆಯನ್ನು ಕೊಂಡಾಡಿದೆ.

‘ಕಳೆದ ದಶಕದಲ್ಲಿ ಡಿಪಿಐ ವ್ಯವಸ್ಥೆಯನ್ನು ಬಳಸಿ ವಿಶ್ವದ ಅತಿದೊಡ್ಡ ಡಿಜಿಟಲ್ ಗವರ್ನ್ಮೆಂಟ್ ಟು ಪರ್ಸನ್ (ಜಿ2ಪಿ) ಆರ್ಕಿಟೆಕ್ಚರ್ ಅನ್ನು ನಿರ್ಮಿಸಿದೆ. 53 ಕೇಂದ್ರ ಸಚಿವಾಲಯಗಳ 312 ಪ್ರಮುಖ ಯೋಜನೆಗಳ ಫಲಾನುಭವಿಗಳಿಗೆ 361 ಬಿಲಿಯನ್ ಡಾಲರ್​ನಷ್ಟು ಹಣವನ್ನು ವರ್ಗಾಯಿಸಲು ಇದು ಸಾಧ್ಯವಾಗಿಸಿದೆ. 2022ರ ಮಾರ್ಚ್​ವರೆಗಿನ ಅಂಕಿ ಅಂಶ ನೋಡಿದಾಗ ಈ ವ್ಯವಸ್ಥೆಯಿಂದಾಗಿ 33 ಬಿಲಿಯನ್ ಡಾಲರ್​ಷ್ಟು ಹಣದ ಉಳಿತಾಯವಾಗಿದೆ. ಇಷ್ಟು ಹಣವು ಜಿಡಿಪಿಯ ಶೇ. 1.14ರಷ್ಟಾಗುತ್ತದೆ’ ಎಂದು ವಿಶ್ವಬ್ಯಾಂಕ್ ತನ್ನ ಜಿ20 ದಾಖಲೆಯಲ್ಲಿ ಬರೆದಿದೆ.

ಇದನ್ನೂ ಓದಿ: ಭಾರತ ಈ ವಿಶ್ವದ ಹೊಸ ಮ್ಯಾನುಫ್ಯಾಕ್ಚರಿಂಗ್ ಹಬ್ ಆಗಲಿದೆ: ಫಾಕ್ಸ್​ಕಾನ್ ವಿಶ್ವಾಸ

ಈ ಬಾರಿಯ ಜಿ20 ಸಭೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಈ ವರ್ಷಾದ್ಯಂತ ವಿವಿಧೆಡೆ ಪೂರಕ ಸಭೆಗಳು ನಡೆದಿದ್ದು, ಅಂತಿಮ ಶೃಂಗಸಭೆ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ವಿಶ್ವದ 19 ಅತಿದೊಡ್ಡ ಆರ್ಥಿಕತೆಯ ದೇಶಗಳು, ಐರೋಪ್ಯ ಒಕ್ಕೂಟ ಹಾಗೂ ಆಹ್ವಾನಿ ಅತಿಥಿ ದೇಶಗಳ ನಾಯಕರು, ಹಾಗೂ 12 ಅಂತಾರಾಷ್ಟ್ರೀಯ ಸಂಘಟನೆಗಳ ಮುಖ್ಯಸ್ಥರು ಈ ಜಿ20 ನಾಯಕರ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇನ್ನಷ್ಟು ಜಿ20 ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
ನೆರೆರಾಜ್ಯದ ಆನೆಹಿಂಡನ್ನು ಪಳಗಿಸಲು ಹೊರಟಿವೆ ಕರ್ನಾಟಕದ ಸಲಗಗಳು
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
‘ಸರಿಗಮಪ’ ಸೆಮಿ ಫೈನಲ್; ನಾಲ್ಕು ಸ್ಥಾನಕ್ಕೆ 9 ಸ್ಪರ್ಧಿಗಳ ಮಧ್ಯೆ ಬಿಗ್ ಫೈಟ್
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಬಾನು ಮುಷ್ತಾಕ್ ಕೃತಿ ಹಾರ್ಟ್ ಲ್ಯಾಂಪ್​ಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಧರ್ಮಸ್ಥಳ: ಬೊಳಿಯೂರು ತಲುಪಿದ ಆಕಾಂಕ್ಷಾ ಎಸ್ ನಾಯರ್ ಪಾರ್ಥಿವ ಶರೀರ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು