ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್: ಸಭಿಕರೊಬ್ಬರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಬೌಲ್ಡ್

Nirmala Sitharaman stumped by questions at BSE Event: ಮುಂಬೈನ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ಬಹುತೇಕ ನಿರುತ್ತರಿಯನ್ನಾಗಿಸಿದ ಎರಡು ಪ್ರಶ್ನೆಗಳನ್ನು ಸಭಿಕರೊಬ್ಬರು ಕೇಳಿದ ಘಟನೆ ನಡೆದಿದೆ. ಸರ್ಕಾರ ನನಗೆ ಸ್ಲೀಪಿಂಗ್ ಪಾರ್ಟ್ನರ್ ಆಗಿದೆ. ನಾನು ವರ್ಕಿಂಗ್ ಪಾರ್ಟ್ನರ್ ಆಗಿದ್ದೇನೆ. ಸರ್ಕಾರ ಬ್ರೋಕರ್​ಗಿಂತ ಹೆಚ್ಚು ಸಂಪಾದಿಸುತ್ತದೆ. ನನ್ನ ಆದಾಯವೆಲ್ಲವೂ ಸರ್ಕಾರಕ್ಕೆ ಹೋಗುತ್ತದೆ. ನನ್ನಂಥವರು ಏನು ಮಾಡುವುದು ಎಂದು ಆ ವ್ಯಕ್ತಿ ಕೇಳಿದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಕಕ್ಕಾವಿಕ್ಕಿಯಾಗಬೇಕಾಯಿತು.

ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್: ಸಭಿಕರೊಬ್ಬರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಬೌಲ್ಡ್
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 16, 2024 | 2:43 PM

ಮುಂಬೈ, ಮೇ 16: ಬಿಎಸ್​ಇಯಲ್ಲಿ ಇತ್ತೀಚೆಗೆ ನಡೆದ ಹೂಡಿಕೆದಾರರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಕುತೂಹಲಭರಿತ ಸಂವಾದಗಳಲ್ಲಿ ತೊಡಗಿದ್ದರು. ಈ ವೇಳೆ ಸಭಿಕರೊಬ್ಬರ ಎರಡು ಪ್ರಶ್ನೆಗೆ ಅವರು ನಿರುತ್ತರರಾಗಬೇಕಾಯಿತು. ನೀವು ನನಗೆ ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್ ಎಂದು ಹೇಳಿ ಸಭಾಂಗಣದಲ್ಲಿ ಆ ವ್ಯಕ್ತಿ ನಗೆಯ ಬುಗ್ಗೆ ಹರಿಸಿದರು. ಆ ವ್ಯಕ್ತಿ ಕೇಳಿದ ಆ ಎರಡು ಪ್ರಶ್ನೆಗಳೇನು? ಅದಕ್ಕೆ ಕೊನೆಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದ ಉತ್ತರ ಏನು? ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಮತ್ತು ವಾಟ್ಸಾಪ್​ನಲ್ಲಿ ಸಾಕಷ್ಟು ಶೇರ್ ಆಗುತ್ತಿದೆ.

ಸ್ಲೀಪಿಂಗ್ ಪಾರ್ಟ್ನರ್, ವರ್ಕಿಂಗ್ ಪಾರ್ಟ್ನರ್

ಸಿಜಿಎಸ್​ಟಿ, ಎಸ್​ಜಿಎಸ್​ಟಿ, ಐಜಿಎಸ್​ಟಿ, ಸ್ಟ್ಯಾಂಪ್ ಡ್ಯೂಟಿ, ಎಸ್​ಟಿಟಿ, ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಹೀಗೆ ಸಾಕಷ್ಟು ತೆರಿಗೆ ಸರ್ಕಾರಕ್ಕೆ ಹೋಗುತ್ತದೆ. ಇವತ್ತು ಭಾರತ ಸರ್ಕಾರ ಬ್ರೋಕರ್​ಗಿಂತ ಹೆಚ್ಚು ಸಂಪಾದಿಸುತ್ತಿದೆ. ನಾನು ಹೂಡಿಕೆ ಮಾಡುತ್ತಿದ್ದೇನೆ. ಎಲ್ಲಾ ರೀತಿಯ ರಿಸ್ಕ್ ಅನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ನನ್ನ ಎಲ್ಲಾ ಲಾಭವನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ. ನನಗೆ ನೀವು (ಸರ್ಕಾರ) ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್. ನನ್ನ ಹಣ, ನನ್ನ ರಿಸ್ಕ್, ನನ್ನ ಸಿಬ್ಬಂದಿ… ಇದರ ಬಗ್ಗೆ ಏನು ಹೇಳುತ್ತೀರಿ? ಎಂದು ಅವರು ಕೇಳಿದರು.

ಮನೆ ಖರೀದಿಸಲು ಶೇ. 11 ತೆರಿಗೆ ಕಟ್ಟಬೇಕು

ಇವತ್ತು ಮುಂಬೈನಲ್ಲಿ ಯಾರಾದರು ಮನೆ ಖರೀದಿಸಲು ಹೋದರೆ ಅದು ದುಃಸ್ವಪ್ನವೇ ಆಗಿರುತ್ತದೆ. ನಾನು ಟ್ಯಾಕ್ಸ್ ಕಟ್ಟುತ್ತೇನೆ. ಇವತ್ತು ಎಲ್ಲವನ್ನೂ ಚೆಕ್​ನಲ್ಲೇ ಕೊಡಬೇಕು. ಎಲ್ಲಾ ತೆರಿಗೆ ಪಾವತಿಸಿದ ಬಳಿಕ ಉಳಿಯುವ ಹಣವು ನನ್ನ ಬ್ಯಾಂಕ್ ಬ್ಯಾಲನ್ಸ್ ಆಗಿರುತ್ತದೆ. ನಾನು ಮನೆ ಖರೀದಿಸುವಾಗ ಸ್ಟ್ಯಾಂಪ್ ಡ್ಯೂಟಿ, ಜಿಎಸ್​ಟಿ ಕಟ್ಟಬೇಕು. ಬಾಂಬೆ ನಗರದಲ್ಲಿ ಅದು ಶೇ. 11ರಷ್ಟಿದೆ. ಅಂದರೆ ಮನೆ ಖರೀದಿಸುವಾಗ ಶೇ. 11ರಷ್ಟು ಹಣ ನನ್ನ ಜೇಬಿಂದ ಹೊರಟುಹೋಗುತ್ತೆ. ಸೀಮಿತ ಸಂಪನ್ಮೂಲ ಇರುವ ಒಬ್ಬ ಸಾಧಾರಣ ವ್ಯಕ್ತಿಗೆ ನೀವು ಮನೆ ಖರೀದಿಸಲು ಹೇಗೆ ನೆರವಾಗಲ್ಲಿರಿ? ಒಬ್ಬ ಬ್ರೋಕರ್ ಇಷ್ಟೊಂದು ತೆರಿಗೆಗಳ ಮಧ್ಯೆ ಹೇಗೆ ಕೆಲಸ ಮಾಡಲು ಸಾಧ್ಯ? ಇಲ್ಲಿ ಸರ್ಕಾರ ನನಗೆ ಸ್ಲೀಪಿಂಗ್ ಪಾರ್ಟ್ನರ್ ಆಗಿದೆ. ನಾನು ಯಾವ ಆದಾಯ ಇಲ್ಲದ ವರ್ಕಿಂಗ್ ಪಾರ್ಟ್ನರ್ ಆಗಿದ್ದೇನೆ ಎಂದು ಆ ವ್ಯಕ್ತಿ ಮತ್ತೊಂದು ಪ್ರಶ್ನೆ ಕೇಳಿದರು.

ಎನ್​ಡಿಟಿವಿ ತನ್ನ ಯೂಟ್ಯೂಬ್​ನಲ್ಲಿ ಹಾಕಿದ ವಿಡಿಯೋ

ಇದನ್ನೂ ಓದಿ: ಗೋಲ್ಡ್ ಇಟಿಎಫ್​ಗಳಿಂದ ವರ್ಷದಲ್ಲಿ ಶೇ. 20ರಷ್ಟು ರಿಟರ್ನ್; ಗೋಲ್ಡ್ ಬಾಂಡ್​ಗೂ ಇದಕ್ಕೂ ಏನು ವ್ಯತ್ಯಾಸ

ನಿರ್ಮಲಾ ಸೀತಾರಾಮನ್ ಕೊಟ್ಟ ಉತ್ತರ ಇದು…

ಈ ಎರಡು ಪ್ರಶ್ನೆಗಳು ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲೂ ನಗೆ ಬರಿಸಿತು. ಅಂತಿಮವಾಗಿ ಈ ಪ್ರಶ್ನೆಗಳಿಗೆ ಅವರು ಚುಟುಕಾಗಿ ಉತ್ತರ ಕೊಟ್ಟರು. ‘ಸ್ಲೀಪಿಂಗ್ ಪಾರ್ಟ್ನರ್ ಇಲ್ಲಿ ಕೂತು ಈ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು. ಎನ್​ಡಿಟಿವಿಯಲ್ಲಿ ಇದರ ವಿಡಿಯೋವನ್ನು ಹಾಕಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ