ಮಂದಹಾಸ ತಂದ ಬ್ಯಾಡಗಿ, ಇಳುವರಿ ಕಮ್ಮಿಯಿದ್ರೂ ರೈತರಿಗೆ ಭರಪೂರ ಆದಾಯ

ಬಳ್ಳಾರಿ: ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ರೈತರು ಅತಿವೃಷ್ಟಿ, ಅನಾವೃಷ್ಟಿಯನ್ನ ಎದುರಿಸುತ್ತಲೇ ಇದ್ದಾರೆ. ಬೆಳೆ ಬಂದ್ರೆ ರೇಟ್ ಇರಲ್ಲ. ರೇಟ್ ಇದ್ರೆ ಬೆಳೆ ಬರಲ್ಲ. ಎರಡೂ ಇದ್ರೆ ಪ್ರಕೃತಿ ಮುನಿಸಿಗೆ ಕೈಗೆ ಬಂದ ತುತ್ತು ಬಾಯಿಗೆ ಬಂದಿರಲ್ಲ. ಆದ್ರೆ ಈ ಬಾರಿ ಬ್ಯಾಡಗಿ ಮೆಣಸಿನಕಾಯಿ ರೈತರ ಮೊಗದಲ್ಲಿ ಸಂತಸ ತಂದಿದೆ.

ಗಣಿನಾಡಿನ ಚಿಲ್ಲಿ ಬೆಳಗಾರರಿಗೆ ಒಲೀತು ಬಂಪರ್!
ಗಣಿನಾಡು ಬಳ್ಳಾರಿ. ಇಲ್ಲಿನ ರೈತರು ಸದಾ ಒಂದಿಲ್ಲೊಂದು ಸಮಸ್ಯೆಯ ಸುಳಿಗೇ ಸಿಕ್ಕಾಕ್ಕೊಂಡೇ ಇರ್ತಾರೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿ ಹರಿಯೋ ಕಡೆ ಒಂದ್ ಸಮಸ್ಯೆಯಾದ್ರೆ, ನೀರಿಲ್ಲದ ಕಡೆ ಮತ್ತೊಂದು ಸಮಸ್ಯೆ. ಅದ್ರಲ್ಲೂ ಈ ಬಾರಿ ಅತಿವೃಷ್ಟಿ ರೈತರನ್ನ ಹಿಂಡಿ ಹಿಪ್ಪೆ ಮಾಡಿತ್ತು. ಕಳೆದ ಮೂರ್ನಾಲ್ಕು ವರ್ಷದಲ್ಲಿ ಮೆಣಸಿನಕಾಯಿ ಬೆಳೆಗಾರರು ನಲುಗಿ ಹೋಗಿದ್ರು. ಆದ್ರೆ ಈ ವರ್ಷ ಬ್ಯಾಡಗಿ ಮೆಣಸಿನಕಾಯಿ ದರ 33 ಸಾವಿರ ದಾಟಿದ್ದು, ರೈತರು ಸಂತಸದಲ್ಲಿದ್ದಾರೆ.

ಇನ್ನು ಈ ಬಾರಿ ಅತಿಹೆಚ್ಚು ಮಳೆಯಾಗಿದ್ದರಿಂದ ಭೂಮಿ ತೇವಾಂಶ ಹೆಚ್ಚಾಗಿ ಇಳುವರಿ ಕುಸಿದಿದೆ. ಎಕರೆಗೆ 20 ಕ್ವಿಂಟಾಲ್ ಬರ್ತಿದ್ದ ಬೆಳೆ ಈ ಬಾರಿ 10 ಕ್ವಿಂಟಾಲ್ ಬಂದಿದೆ. ಗುಂಟೂರು ಮೆಣಸಿನಕಾಯಿ ರೇಟ್ 16ರಿಂದ 17 ಸಾವಿರ ಮಾರಾಟವಾಗ್ತಿದ್ರೆ, ಬ್ಯಾಡಗಿ ಮಾತ್ರ ಗುಂಟೂರ್ ಮೆಣಸಿನಕಾಯಿಯ ದುಪ್ಪಟ್ಟು ರೇಟ್​ಗೆ ಮಾರಾಟವಾಗ್ತಿದೆ.

ಕಳೆದ ಮೂರು ವರ್ಷಗಳಿಂದ ನಷ್ಟದಲ್ಲಿದ್ದ ರೈತರು ಈ ಬಾರಿ ಮೆಣಸಿನಕಾಯಿ ಬೆಳೆಯೋದನ್ನ ನಿಲ್ಲಿಸೋ ನಿರ್ಧಾರಕ್ಕೆ ಬಂದಿದ್ರು. ಆದ್ರೆ ಈ ಬಾರಿ ಇಳುವರಿ ಕಮ್ಮಿಯಾದ್ರೂ ರೇಟ್ ಜಾಸ್ತಿ ಇರೋದ್ರಿಂದ ಅನ್ನದಾತರ ಖುಷಿಗೇ ಪಾರವೇ ಇಲ್ಲದಂತಾಗಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!