ಬೆಂಗಳೂರಿನಲ್ಲಿ ಮತ್ತೆ ಖಾಕಿ ಗನ್ ಸೌಂಡ್: ಸ್ಲಂ ಭರತ್ ಸಹಚರನ ಕಾಲಿಗೆ ಗುಂಡೇಟು

ಬೆಂಗಳೂರು: ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಇಎಲ್ ಲೇಔಟ್​ನಲ್ಲಿ ಸ್ಲಂ ಭರತನ ಸಹಚರನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. 15ಕ್ಕೂ ಹೆಚ್ಚು ಕೇಸ್‌ಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಸಿದ್ದರಾಜು ಅಲಿಯಾಸ್ ಸಿದ್ದ ಮೇಲೆ ಬ್ಯಾಡರಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ರಾಜೀವ್‌ ಫೈರಿಂಗ್ ನಡೆಸಿದ್ದಾರೆ.

ಆರೋಪಿ ಬಿಇಎಲ್ ಲೇಔಟ್‌ನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆರೋಪಿಯನ್ನು ಬಂಧಿಸಲು ಬ್ಯಾಡರಹಳ್ಳಿ ಪೊಲೀಸರು ತೆರಳಿದ್ದರು. ಶರಣಾಗುವಂತೆ ಆರೋಪಿ ಸಿದ್ದರಾಜುಗೆ ಪೊಲೀಸರ ಸೂಚಿಸಿದ್ದಾರೆ. ಆದ್ರೆ ಆರೋಪಿ ಸಿದ್ದರಾಜು ಮುಖ್ಯಪೇದೆ ಗುರುದೇವ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.

ಈ ವೇಳೆ ಶರಣಾಗುವಂತೆ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರ ಮಾತೂ ಲೆಕ್ಕಿಸದೆ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಆರೋಪಿ ಬಲಗಾಲಿಗೆ ಇನ್ಸ್‌ಪೆಕ್ಟರ್ ರಾಜೀವ್‌ ಗುಂಡು ಹಾರಿಸಿ ಬಂಧಿಸಿದ್ದಾರೆ. ಗಾಯಾಳು ಮುಖ್ಯಪೇದೆ ಗುರುದೇವ್ ಹಾಗೂ ರೌಡಿಶೀಟರ್ ಸಿದ್ದರಾಜುಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related Posts :

Category:

error: Content is protected !!