ಬೈಕ್ ವೀಲಿಂಗ್ ಮಾಡುತ್ತಿದ್ದ ನಾಲ್ವರ ಬಂಧನ, ಬೈಕ್ ಜಪ್ತಿ

ಬೆಂಗಳೂರು: ಬೆಂಗಳೂರಿನ ನೈಸ್ ರಸ್ತೆಯಲ್ಲಿ ಬೈಕ್‌ ವೀಲಿಂಗ್ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿ ಕಂಬಿ ಹಿಂದೆ ಕಳಿಸಿದ್ದಾರೆ.

ಬೆಂಗಳೂರಿನ ಬ್ಯಾಟರಾಯನಪುರ ಸಂಚಾರ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಚಂದನ್ (21), ಸುಮಂತ್ (20), ಲಿಖಿತ್ (21) ಹಾಗೂ ವಿನಯ್ (28) ಬೈಕ್ ವೀಲಿಂಗ್‌ನಲ್ಲಿ ತೊಡಗಿದ್ದರು. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ನೈಸ್ ರಸ್ತೆಗೆ ತೆರಳಿದ ಪೊಲೀರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಈ ಆರೋಪಿಗಳು ಈ ಹಿಂದೆಯೂ ಬೈಕ್ ವೀಲಿಂಗ್‌ನಲ್ಲಿ ತೊಡಗಿದ್ದರು ಎನ್ನಲಾಗಿದೆ. ವಶಪಡಿಸಿಕೊಂಡ ಆರೋಪಿಗಳ ಮೊಬೈಲ್‌ನಲ್ಲಿ ಈ ಹಿಂದಿನ ವೀಲಿಂಗ್ ವಿಡಿಯೋಗಳು ಪತ್ತೆಯಾಗಿವೆ. ಸಧ್ಯ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಆರೋಪಿಗಳು ವೀಲಿಂಗ್ ಮಾಡಲು ಬಳಸಿದ್ದ 3 ದ್ವಿಚಕ್ರ ವಾಹನಗಳನ್ನು ಜಫ್ತಿ ಮಾಡಿದ್ದಾರೆ.

Related Tags:

Related Posts :

Category: