ಬೆಂಗಳೂರಿನಲ್ಲಿ ಇಂದು ಕೊವಿಡ್-19 ವ್ಯಾಧಿಯಿಂದ 9 ಸಾವು, ಸೋಂಕಿತರ ಸಂಖ್ಯೆ ಕಮ್ಮಿ

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಸೋಮವಾರ ಸಾಯಂಕಾಲ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಾಜ್ಯದಲ್ಲಿಂದು ಕೊವಿಡ್-19 ಸೋಂಕಿನಿಂದ 59 ಜನ ಮರಣವನ್ನಪ್ಪಿದ್ದಾರೆ ಮತ್ತು ಹೊಸದಾಗಿ 6,892 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಸೋಂಕಿಗೆ ಇದುವರೆಗೆ ಬಲಿಯಾದವರ ಸಂಖ್ಯೆ 8,641ಕ್ಕೇರಿದೆ ಹಾಗೂ ಸೋಂಕಿತರ ಸಂಖ್ಯೆ 5,82,458ತಲುಪಿದೆ.

ಸೋಂಕಿತರ ಪೈಕಿ 4,69,750 ಜನ ಗುಣಮುಖರಾಗಿ ಕೊವಿಡ್ ಕೇರ್ ಸೆಂಟರ್​ಗಳಿಂದ ಡಿಸ್ಚಾರ್ಜ್ ಆಗಿದ್ದು ಮಿಕ್ಕಿದ1,04,048 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.

ಹಾಗೆಯೇ ಬೆಂಗಳೂರಲ್ಲಿ ಇಂದು ಸೋಂಕಿಗೆ 9 ಜನರ ಬಲಿಯಾಗಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 2,722 ಜನರಿಗೆ ಸೋಂಕು ತಗುಲಿದೆ. ನಗರದಲ್ಲಿ ಕೊವಿಡ್-19 ವ್ಯಾಧಿಯೋದ 2,845 ಜನರು ಸತ್ತಿದ್ದಾರೆ ಮತ್ತು ಸೋಂಕಿತರ ಸಂಖ್ಯೆ 2,23,569ಕ್ಕೇರಿದೆ. 1,76,541 ಸೋಂಕಿತರು ಗುಣಮುಖರಾಗಿ ಮನೆಗಳಿಗೆ ತೆರಳಿದರೆ, ಉಳಿದ 44,182 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related Tags:

Related Posts :

Category:

error: Content is protected !!