Paytm ಫಸ್ಟ್​ ಗೇಮ್ಸ್​ ಌಪ್​ಗೆ ಸಚಿನ್​ ಜಾಹೀರಾತು ನೀಡಿರುವುದು ಜಿಗುಪ್ಸೆ ತರುತ್ತಿದೆ -CAIT

ದೆಹಲಿ: ಚೀನಾ ಕಂಪನಿಯಿಂದ ಹೂಡಿಕೆ ಪಡೆದಿರುವ Paytm ಫಸ್ಟ್​ ಗೇಮ್​ ಌಪ್​ಗೆ ಕ್ರಿಕೆಟಿಗ ಸಚಿನ್​ ತೆಂಡೂಲ್ಕರ್​ ಜಾಹೀರಾತು ನೀಡಿರುವುದು ನಿಜಕ್ಕೂ ಜಿಗುಪ್ಸೆ ತರುತ್ತಿದೆ ಎಂದು ಅಖಿಲ ಭಾರತೀಯ ವ್ಯಾಪಾರಿಗಳ ಒಕ್ಕೂಟ (CAIT) ಹೇಳಿಕೆ ನೀಡಿದೆ.

ಫಸ್ಟ್​ ಗೇಮ್​ ಌಪ್ Paytm ಹಾಗೂ ಚೀನಾದ ಅಲಿಬಾಬಾ ಕಂಪನಿಯ ಜಂಟಿ ಹೂಡಿಕೆಯಲ್ಲಿ ಸ್ಥಾಪಿತವಾದ ಯೋಜನೆ. ಇದಕ್ಕೆ ಸಚಿವ್​ ರಾಯಭಾರಿಯಾಗುವುದಕ್ಕೆ ಒಪ್ಪಿಕೊಂಡಿದ್ದು ಬಾನೇ ಬೇಸರ ತಂದಿದೆ ಎಂದು ಒಕ್ಕೂಟವು ತಿಳಿಸಿದೆ. ಜೊತೆಗೆ, ಈ ಕುರಿತು ಟೆಂಡೂಲ್ಕರ್​ಗೆ ಪತ್ರ ಸಹ ಬರೆದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚೀನಾದೊಂದಿಗೆ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ತಾವು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಸಹ ಒಕ್ಕೂಟವು ಸಚಿನ್​ಗೆ ಮನವಿ ಮಾಡಿದೆ.

Related Tags:

Related Posts :

Category:

error: Content is protected !!