ಆ ಎರಡು ಸಂಘಟನೆಗಳನ್ನ ಬ್ಯಾನ್​ ಮಾಡಲು ದೇಶಾದ್ಯಂತ ಹೆಚ್ಚುತ್ತಿದೆ ಒತ್ತಡ

ದೆಹಲಿ: ಬೆಂಗಳೂರಿನ ಗಲಭೆಯಿಂದ ಇದೀಗ SDPI ಮತ್ತು PFI ಸಂಘಟನೆಗಳನ್ನು ನಿಷೇಧಿಸಲು ಒತ್ತಡ ಹೆಚ್ಚಾಗುತ್ತಿದೆ. PFI ಅಥವಾ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ ಅಧೀನದ ರಾಜಕೀಯ ಸಂಘಟನೆಯಾದ SDPI ಸೇರಿದಂತೆ ಎರಡು ಸಂಘಟನೆಗಳನ್ನು ಬ್ಯಾನ್ ಮಾಡಲು ದೇಶಾದ್ಯಂತ ಒತ್ತಡ ಹೆಚ್ಚುತ್ತಿದೆ.

ಈ ಕುರಿತು ಕೇಂದ್ರ ಗೃಹ ಇಲಾಖೆಗೆ ಹಲವು ರಾಜ್ಯಗಳು ಮನವಿ ಸಹ ಮಾಡಿವೆ ಎಂದು ತಿಳಿದುಬಂದಿದೆ. ಉತ್ತರಪ್ರದೇಶ, ಕೇರಳ, ಅಸ್ಸಾಂ ಮತ್ತು ರಾಜಸ್ಥಾನ ಸರ್ಕಾರಗಳಿಂದ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಜೊತೆಗೆ, ಕರ್ನಾಟಕವೂ ಕಳೆದ ಒಂದು ವರ್ಷದಲ್ಲಿ ಎರಡು ಬಾರಿ ಮನವಿ ಮಾಡಿದೆ.

ಎರಡು ಸಂಘಟನೆಗಳ ಕಾನೂನುಬಾಹಿರ ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹವಾಗಿದ್ದು ಹೆಚ್ಚಿನ ಮಾಹಿತಿ ಮತ್ತು ಸಾಕ್ಷ್ಯ ಸಂಗ್ರಹಕ್ಕಾಗಿ ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಘಟನೆಗಳು ಈ ಹಿಂದೆ ಬಿಜೆಪಿ ಹಾಗೂ RSSನಾಯಕರ ಹತ್ಯೆಗೆ ಸ್ಕೆಚ್ ಸಹ ಮಾಡಿತ್ತಂತೆ.

ಇದಲ್ಲದೆ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ‌ಯೂ ಇದರ ಕಾರ್ಯಕರ್ತ ಮಾರಣಾಂತಿಕ ಹಲ್ಲೆ ನಡೆಸಿದ್ದ. ಇಂಥದ್ದೆ ಹಲವಾರು ಗಂಭೀರ ಪ್ರಕರಣಗಳು ಎರಡು ಸಂಘಟನೆಗಳ ಮೇಲೆ ಇದೆ. ಹೀಗಾಗಿ, ರಾಜ್ಯದ ಸಂಸದರು ಕೇಂದ್ರ ಗೃಹ ಇಲಾಖೆಗೆ PFI ಬ್ಯಾನ್ ಮಾಡಲು ಮನವಿ ಮಾಡಿದ್ದಾರೆ.

Related Tags:

Related Posts :

Category: