ರಾಜಾರೋಷವಾಗಿ ಎಂಟ್ರಿಕೊಟ್ಟ ಖದೀಮನನ್ನು ಬೆನ್ನಟ್ಟಿ ಹಿಡಿದ ಮಹಿಳೆ

, ರಾಜಾರೋಷವಾಗಿ ಎಂಟ್ರಿಕೊಟ್ಟ ಖದೀಮನನ್ನು ಬೆನ್ನಟ್ಟಿ ಹಿಡಿದ ಮಹಿಳೆ

ಬೆಂಗಳೂರು: ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದವನನ್ನ ಮಹಿಳೆಯೊಬ್ಬರು ಬೆನ್ನಟ್ಟಿ ಹಿಡಿದ ಘಟನೆ ವೈಟ್ ಫೀಲ್ಡ್​ನಲ್ಲಿ ನಡೆದಿದೆ. ಕಳೆದ ಡಿಸೆಂಬರ್ 5 ರಂದು ಬಾಲಾಜಿ ಸರೋವರ ಅಪಾರ್ಟ್ ಮೆಂಟ್​ಗೆ ವೆಂಕಟಸ್ವಾಮಿ ಎಂಬ ಖದೀಮ ನುಗ್ಗಿದ್ದಾನೆ. ಮಹಿಳೆ ಡೋರ್ ಲಾಕ್‌ ಮಾಡದೇ ಇರೋದನ್ನ ಗಮನಿಸಿ ಒಳನುಗ್ಗಿದ್ದ ಕಳ್ಳ, ಯಾರು ಇಲ್ಲ ಅಂತ ರೂಂ ಒಳಗೇ ಎಂಟ್ರಿ ಕೊಟ್ಟಿದ್ದಾನೆ.

ಆದರೆ ಮನೆಯ ಕಿಚನ್ ನಲ್ಲಿ ಮಹಿಳೆ ಅಡುಗೆ ಮಾಡುತ್ತಿದ್ದಳು, ಮತ್ತೊಂದು ರೂಂನಲ್ಲಿ ಮಹಿಳೆಯ ಮಗ ಮಲಗಿದ್ದ. ಇದನ್ನು ತಿಳಿಯದ ಕಳ್ಳ ಒಳಗೆ ಬಂದು ಮನೆಯ ಕಬೋರ್ಡ್ ನಲ್ಲಿ ಕೈ ಚಳಕ ತೋರಲು ಮುಂದಾಗಿದ್ದಾನೆ. ಈ ವೇಳೆ ಶಬ್ದ ಕೇಳಿ ರೂಂ‌ ಬಳಿ ಮಹಿಳೆ ಬಂದಿದ್ದಾಳೆ. ಆಕೆಯನ್ನು ಕಂಡ ಕಳ್ಳ ಮನೆಯಿಂದ ಪರಾರಿಯಾಗಿದ್ದಾನೆ.

ತಕ್ಷಣವೇ ಮಹಿಳೆ ಕಳ್ಳನನ್ನು ಬೆನ್ನಟ್ಟಿದ್ದಾಳೆ. ಕಳ್ಳ ಅಪಾರ್ಟ್ ಮೆಂಟ್ ಫಸ್ಟ್ ಪ್ಲೋರ್​ನ ಚಪ್ಪಲಿ ಸ್ಟಾಂಡ್ ಹಿಂದೆ ಅವಿತಿದ್ದ. ಆತನನ್ನು ಹಿಡಿಯುವಾಗ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಈ ವೇಳೆ ಅಪಾರ್ಟ್ ಮೆಂಟ್​ನಲ್ಲಿದ್ದ ಕೆಲವರು ಬಂದಿದ್ದಾರೆ. ಓಡುತ್ತಿದ್ದ ಕಳ್ಳನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆ ಕಳ್ಳನನ್ನ ಬೆನ್ನತ್ತಿ ಹಿಡಿದಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
, ರಾಜಾರೋಷವಾಗಿ ಎಂಟ್ರಿಕೊಟ್ಟ ಖದೀಮನನ್ನು ಬೆನ್ನಟ್ಟಿ ಹಿಡಿದ ಮಹಿಳೆ

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!