ಬ್ಯಾಂಕ್​ಗಳಿಗೆ ನಕಲಿ ಬಂಡವಾಳ ಲೆಕ್ಕ: ಖಾಸಗಿ ಕಂಪೆನಿಯ ನಿರ್ದೇಶಕರ ಮನೆಗಳ ಮೇಲೆ ಸಿಬಿಐ ದಾಳಿ

ಸುರಂಗ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದ್ದ ಕಂಪನಿಯು ವಿವಿಧ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲದ ಪಡೆಯುವ ಒಪ್ಪಂದ ಮಾಡಿಕೊಂಡಿತ್ತು. ಬಳಿಕ, ಅಧಿಕ ಸಾಲ ಪಡೆಯುವ ಸಲುವಾಗಿ ನಕಲಿ‌ ಬಂಡವಾಳ ಲೆಕ್ಕ ನೀಡಿತ್ತು.

  • TV9 Web Team
  • Published On - 22:14 PM, 13 Jan 2021
ಸಿಬಿಐ ಕಚೇರಿ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಹೂಡಿಕೆಯಲ್ಲಿ‌ ನಕಲಿ‌ ಲೆಕ್ಕ ನೀಡಿ ಬ್ಯಾಂಕ್​ಗಳಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಖಾಸಗಿ ಕಂಪನಿ ನಿರ್ದೇಶಕರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ. ಬೆಂಗಳೂರಿನ ಪ್ರಾದೇಶಿಕ ಕಚೇರಿ, ಹೈದರಾಬಾದ್ ಹಾಗೂ ತಮಿಳುನಾಡಿನ ವಿವಿಧೆಡೆ ಸಿಬಿಐ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ.

ಸುರಂಗ ಕಾಮಗಾರಿ ಗುತ್ತಿಗೆ ನಿರ್ವಹಿಸುತ್ತಿದ್ದ ಕಂಪನಿಯು ವಿವಿಧ ರಾಷ್ಟ್ರೀಕೃತ ಬ್ಯಾಂಕ್​ಗಳಿಂದ ಸಾಲದ ಪಡೆಯುವ ಒಪ್ಪಂದ ಮಾಡಿಕೊಂಡಿತ್ತು. ಬಳಿಕ, ಅಧಿಕ ಸಾಲ ಪಡೆಯುವ ಸಲುವಾಗಿ ನಕಲಿ‌ ಬಂಡವಾಳ ಲೆಕ್ಕ ನೀಡಿತ್ತು. ನಕಲಿ‌ ಬಂಡವಾಳದ ಲೆಕ್ಕವನ್ನು ನೀಡಿ, ಬರೋಬ್ಬರಿ 200.38 ಕೋಟಿ ವಂಚಿಸಿರುವ ಆರೋಪವನ್ನು ಕಂಪೆನಿ ಎದುರಿಸುತ್ತಿತ್ತು.

ಈ ಬಗ್ಗೆ, ಸಾಲ ನೀಡಿದ್ದ ಬ್ಯಾಂಕ್​ಗಳ ಒಕ್ಕೂಟವು ದೂರು ದಾಖಲಿಸಿತ್ತು. ಜನವರಿ 6ರಂದು ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಪ್ರಕರಣದ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು, ಇದೀಗ ಖಾಸಗಿ ಕಂಪನಿ ನಿರ್ದೇಶಕರ ಮನೆಗಳ ಮೇಲೆ ದಾಳಿ ನಡೆಸಿದ್ದಾರೆ.

ಆಪರೇಷನ್ ಆದಿತ್ಯ ಆಳ್ವಾ: ಸಿಸಿಬಿ ತಂಡದಿಂದ ನಡೀತು ರಾತ್ರೋರಾತ್ರಿ ಕಾರ್ಯಾಚರಣೆ