ಕೆಲಸದ ಆಮಿಷವೊಡ್ಡಿ ಕೋಟಿಗೂ ಅಧಿಕ ಹಣ ಪಡೆದ ಆರೋಪಿ ಅರೆಸ್ಟ್

ಬೆಂಗಳೂರು: ಕೆಲಸದ ಆಮಿಷವೊಡ್ಡಿ ವಂಚನೆ ಮಾಡುತ್ತಿದ್ದ ವ್ಯಕ್ತಿಯನ್ನು ನಗರದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಮೂಲದ ಶಿವಕುಮಾರ್ ಹೊಸಹಳ್ಳಿ ಬಂಧಿತ ಆರೋಪಿ. ಈತ 10ಕ್ಕೂ ಹೆಚ್ಚು ಜನರಿಂದ 1 ಕೋಟಿ ಹಣ ಪಡೆದು ವಂಚನೆ ಮಾಡಿದ್ದಾನೆ.

ಕೊರೊನಾದಿಂದಾಗಿ ಅನೇಕ ಮಂದಿ ಕೆಲಸ ಕಳೆದುಕೊಂಡು ನೋವಿನಲ್ಲಿದ್ದಾರೆ. ಮುಂದೆ ಏನಪ್ಪಾ ಗತಿ ಎಂದು ಪರದಾಡುತ್ತಿದ್ದಾರೆ. ಇಂತಹ ಸಮಯವನ್ನು ಬಳಸಿಕೊಂಡ ಆರೋಪಿ ಕೆಲಸ ಕೊಡಿಸುವುದಾಗಿ ಹೇಳಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿದ್ದಾನೆ. ಸರ್ಕಾರಿ ಇಲಾಖೆಗಳಿಂದ ಗುತ್ತಿಗೆ ಹಣವನ್ನ ಬಿಡುಗಡೆಗೊಳಿಸುವುದಾಗಿಯೂ ಮೋಸ ಮಾಡಿದ್ದಾನೆ. ರಾಜಕಾರಣಿಗಳು, ಅವರ ಕುಟುಂಬಸ್ಥರು ಪರಿಚಯವಿರುವುದಾಗಿ‌ ನಂಬಿಸಿ 10ಕ್ಕೂ ಅಧಿಕ ಜನರಿಂದ 1 ಕೋಟಿಗೂ ಅಧಿಕ ಹಣ ಪಡೆದು ವಂಚಿಸಿದ್ದ ಆರೋಪಿ ಈಗ ಅಂದರ್ ಆಗಿದ್ದಾನೆ.

Related Tags:

Related Posts :

Category:

error: Content is protected !!