ಪಾತಕಿ ರವಿ ಪೂಜಾರಿ ಬಲಗೈ ಬಂಟ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ!

ಬೆಂಗಳೂರು: ಪಾತಕಿ ರವಿ ಪೂಜಾರಿ ಸಹಚರ ಗುಲಾಮ್​ನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಗುಲಾಮ್, ರವಿಪೂಜಾರಿ ಜೊತೆ ಸುಲಿಗೆಯಲ್ಲಿ ಕೈ ಜೊಡಿಸಿದ್ದ ಕುಖ್ಯಾತ ಸಹಚರ.

ಎರಡು ದಶಕಗಳ ಕಾಲ ಭೂಗತವಾಗಿದ್ದ ರವಿ ಪೂಜಾರಿ ಅಜ್ಜಾತ ಸ್ಥಳದಲ್ಲಿದ್ದು ಬಿಲ್ಡರ್, ಬಿಸಿನೆಸ್ ಮೆನ್​ಗಳಿಗೆ ಬೆದರಿಕೆ ಹಾಕ್ತಿದ್ದ. ಈ ವೇಳೆ ರವಿ ಪೂಜಾರಿ ಬೆದರಿಕೆ ಹಾಕಿದವರ ಬಳಿ ಗುಲಾಮ್ ಸುಲಿಗೆ ಮಾಡ್ತಿದ್ದ. ರವಿ ಪೂಜಾರಿ ಮಾಹಿತಿಯ ಮೆರೆಗೆ ಗುಲಾಮನನ್ನು ಮಂಗಳೂರಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯ ಕೋರ್ಟ್​ಗೆ ಹಾಜರು ಪಡಿಸಿ ನಂತರ 10ದಿನಗಳ ಕಷ್ಟಡಿಗೆ ಪಡೆದಿದ್ದಾರೆ. ಪೂಜಾರಿಯ ಬಲಗೈ ಬಂಟನಾಗಿರುವ ಗುಲಾಮ್​ನನ್ನು ಸದ್ಯ ಬೆಂಗಳೂರಿಗೆ ಕರೆತಂದು ವಿಚಾರಣೆ‌ ನಡೆಸಲಾಗುತ್ತೆ. ಈ ವೇಳೆ ಮತ್ತಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆ ಇದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more