ಸ್ಯಾಂಡಲ್​ವುಡ್​ Drugs ಜಾಲ: A9 ಅಶ್ವಿನ್ ಅಲಿಯಾಸ್ ಭೋಗಿ ಸೆರೆ

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 9ನೇ ಆರೋಪಿ ಅಶ್ವಿನ್ ಅಲಿಯಾಸ್ ಭೋಗಿಯನ್ನು CCB ಪೊಲೀಸರು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. A9 ಅಶ್ವಿನ್ ಅಲಿಯಾಸ್​ ಭೋಗಿ ರವಿಶಂಕರ್​ ಸ್ನೇಹಿತ ಎಂದು ಹೇಳಲಾಗಿದೆ.
ಪ್ರಕರಣದ 8ನೇ ಆರೋಪಿಯಾದ ಅಭಿಸ್ವಾಮಿ ಕೂಡ ಭೋಗಿಗೆ ಆಪ್ತ ಎಂದು ತಿಳಿದುಬಂದಿದೆ. ಡ್ರಗ್ಸ್​ ದಂಧೆಗೆ ಭೋಗಿ ಕಾಲಿಡಲು ಅಭಿಸ್ವಾಮಿ ನೆರವು ನೀಡಿದ್ದನಂತೆ. ಅಭಿಸ್ವಾಮಿ ಮೂಲಕ ಅಶ್ವಿನ್ ನೈಜೀರಿಯನ್​ ಪೆಡ್ಲರ್​ಗಳ ಸಂಪರ್ಕ ಹೊಂದಿದ್ದ ಎಂಬ ಮಾಹಿತಿ ಸಿಕ್ಕಿದೆ.

ಪೆಡ್ಲರ್​ಗಳಿಗೆ ಕರೆ ಮಾಡಿದರೆ ಪಿಲ್ಸ್, ಕೊಕೇನ್​ ಕೊಡ್ತಾರೆ ಎಂದು ಅಶ್ವಿನ್ ಅಲಿಯಾಸ್​ ಭೋಗಿ​ಗೆ ಅಭಿಸ್ವಾಮಿ ತಿಳಿಸಿದ್ದನಂತೆ. ಹಾಗಾಗಿ, ಪೆಡ್ಲರ್​ಗಳ ಸಂಪರ್ಕ ಬೆಳೆಸಿಕೊಂಡು ಭೋಗಿ ದಂಧೆಗಿಳಿದಿದ್ದ ಎಂದು ತಿಳಿದುಬಂದಿದೆ. ಒಮ್ಮೆ, ಪ್ರಶಾಂತ್ ರಾಜು ಸ್ನೇಹಿತ ಸಂತೋಷ್​ ದೆಹಲಿಯಿಂದ ಬಂದಿದ್ದ ವೇಳೆ ಡ್ರಗ್ಸ್​ಗಾಗಿ ರವಿಶಂಕರ್​ಗೆ ಕರೆಮಾಡಿದ್ದನಂತೆ. ಆಗ, ರವಿಶಂಕರ್ ಭೋಗಿಗೆ ಕರೆ ಮಾಡಿ ಡ್ರಗ್ಸ್​ ಬೇಕೆಂದು ಹೇಳಿದ್ದನಂತೆ. ಆಗ, ನನ್ನ ಬಳಿ ಡ್ರಗ್ಸ್ ಇಲ್ಲವೆಂದು ಅಶ್ವಿನ್ ಭೋಗಿ ನೈಜೀರಿಯನ್​ ಪೆಡ್ಲರ್​ ಒಬ್ಬನ ನಂಬರ್​ ನೀಡಿದ್ದನಂತೆ. ಈ ಮಾಹಿತಿಯನ್ನು ರವಿಶಂಕರ್ ವಿಚಾರಣೆ ವೇಳೆ ಹೇಳಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

Related Tags:

Related Posts :

Category:

error: Content is protected !!