Drugs Case: ಪರಾರಿಯಾಗಿರುವ ಆದಿತ್ಯ ಆಳ್ವಾನ ರೆಸಾರ್ಟ್​ ಮೇಲೆ CCB ದಾಳಿ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದ A6 ಆರೋಪಿ ಆಗಿರುವ ಆದಿತ್ಯ ಆಳ್ವಾರ ಹೆಬ್ಬಾಳದ ಬಳಿಯಿರುವ ರೆಸಾರ್ಟ್ ಮೇಲೆ CCB ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದ CCB ಅಧಿಕಾರಿಗಳ ಶೋಧಕಾರ್ಯ ನಡೆಸಿದ್ದಾರೆ.

House of Drugs or House Of Life?
ಮಾಜಿ ಸಚಿವ ಜೀವರಾಜ್ ಆಳ್ವಾರ ಪುತ್ರ ಆದಿತ್ಯ ಆಳ್ವಾ ಒಡೆತನದ ಹೆಬ್ಬಾಳದ ಹೌಸ್ ಆಫ್ ಲೈಫ್ ರೆಸಾರ್ಟ್‌ನಲ್ಲಿ ಶೋಧಕಾರ್ಯ ನಡೆಸಲಾಗುತ್ತಿದೆ. ಆದಿತ್ಯ ಇಲ್ಲಿಯೇ ಹಲವು ಪಾರ್ಟಿಗಳನ್ನು ಆಯೋಜಿಸಿದ್ದ ಎಂದು ಹೇಳಲಾಗಿದೆ.

ಸ್ಯಾಂಡಲ್​ವುಡ್​ ಡ್ರಗ್ಸ್​ ಕೇಸ್​ನಲ್ಲಿ ಆರೋಪಿ 6 ಎಂದು ಸಿಸಿಬಿ ಪೊಲೀಸರು ಗುರುತಿಸುತ್ತಿದ್ದಂತೆ ಆದಿತ್ಯ ಆಳ್ವಾ ಪರಾರಿಯಾಗಿದ್ದಾನೆ. ಸದ್ಯ, ರೆಸಾರ್ಟ್ ಕೇರ್ ಟೇಕರ್ ರಾಮದಾಸ್ ಎಂಬುವವರಿಂದ ಸಿಸಿಬಿ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

A6 ಆದಿತ್ಯ ಆಳ್ವಾ ರೆಸಾರ್ಟ್‌ನಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ರೆಸಾರ್ಟ್​ನ ಬೀಗ ಒಡೆದು CCB ಇನ್​ಸ್ಪೆಕ್ಟರ್‌ಗಳಾದ ಅಂಜುಮಾಲಾ ನಾಯಕ್, ಪುನೀತ್ ಹಾಗೂ ಹರೀಶ್ ನೇತೃತ್ವದಲ್ಲಿ ರೆಸಾರ್ಟ್​ನಲ್ಲಿ ಪರಿಶೀಲನೆ ನಡೆಸಿದ್ದಾರೆ.

ನಾಲ್ಕು  ಎಕರೆ ವಿಶಾಲ ಪ್ರದೇಶದಲ್ಲಿದೆ ಆದಿತ್ಯನ ಮಾದಕ ಲೋಕ House Of Life.
ಅದರ ಕೆಲ ಝಲಕ್​ಗಳು ಇಲ್ಲಿವೆ ನೋಡಿ:


Related Tags:

Related Posts :

Category: