ಹಾಸ್ಟೆಲ್ ಹುಡುಗೀರಿಗೆ ತೊಂದ್ರೆಯಾಗುತ್ತೆಂದು ವಿಷವಿಟ್ಟರಾ? ನಾಯಿಗೆ ಪಾರ್ಸೆಲ್ ಎಸೆದ ದೃಶ್ಯ CCTVಯಲ್ಲಿ ಸೆರೆ

ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಸಿಟಿ ಬಳಿ ನಾಯಿಗಳಿಗೆ ವಿಷವುಣಿಸಿ ಅಮಾನವೀಯವಾಗಿ ಕೊಂದ ಘಟನೆ ನಡೆದಿತ್ತು. ಇಂದು ಆ ಘಟನೆಗೆ ಕಾರಣವಾದ ಸಾಕ್ಷ್ಯಾಧಾರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದು ಪತ್ತೆಯಾಗಿದೆ. ಜೀಪ್‌ನಲ್ಲಿ ಬಂದ ದುಷ್ಕರ್ಮಿಗಳು ವಿಷ ಹಾಕಿದ್ದ ಪಾರ್ಸೆಲ್​ನನ್ನು ಬೀದಿಯಲ್ಲಿ ಎಸೆದು ಹೋಗಿದ್ದಾರೆ.

ಬಿಸಾಕಿದಂತಹ ಪದಾರ್ಥವನ್ನು ತಿಂದ ಬೀದಿ ನಾಯಿಗಳು ಮೃತಪಟ್ಟಿವೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಸ್ಟೆಲ್‌ ಹುಡುಗಿಯರಿಗೆ ನಾಯಿಗಳಿಂದ ತೊಂದರೆಯಾಗುತ್ತೆ ಎಂದು ವಿಷವುಣಿಸಿದ್ರಾ? ಎಂಬ ಪ್ರಶ್ನೆ ಉ ದ್ಭವಿಸಿದೆ. ಇನ್ನು ಈ ಸಂಬಂಧ ಸ್ಥಳೀಯರು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮುಂದೆ ಪೊಲೀಸರು ದುಷ್ಕರ್ಮಿಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!