ಯಾಮಾರಿದರೆ ಯಮಲೋಕ ಸೇರುತ್ತಿದ್ದ: ಚಿರತೆ ದಾಳಿಯ ದೃಶ್ಯ CCTV ಯಲ್ಲಿ ಸೆರೆ..

ಮಂಡ್ಯ: ದಾಳಿ ಮಾಡಲು ಬಂದ ಚಿರತೆ ನೋಡಿ ಒಳಗೆ ಓಡಿ ಹೋಗಿ ವ್ಯಕ್ತಿ ಪ್ರಾಣ ರಕ್ಷಿಸಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದಲ್ಲಿ ನಡೆದಿದೆ.

ಅರೆತಿಪ್ಪೂರು ಗ್ರಾಮದಲ್ಲಿ ರಾತ್ರಿ ವೇಳೆ ವ್ಯಕ್ತಿಯೊಬ್ಬ ಮನೆಯ ಆವರಣದಲ್ಲಿ ಮಾತನಾಡುತ್ತಾ ನಿಂತಿದ್ದಾನೆ.ಈ ವೇಳೆ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಲು ಮುಂದಾಗಿದೆ. ಚಿರತೆ ಹತ್ತಿರ ಬರುತ್ತಿದ್ದದ್ದನ್ನು ಗಮನಿಸಿದ ವ್ಯಕ್ತಿ ಭಯದಿಂದ ಮನೆಯೊಳಗೆ ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾನೆ.

ಘಟನೆಯ ಸಂಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮನೆಗೆ ಚಿರತೆ ಬಂದಿದ್ದ ಸುದ್ದಿ ತಿಳಿದು ಗ್ರಾಮಸ್ಥರು ಮತ್ತು ಕುಟುಂಬದವರು ಆತಂಕಗೊಂಡಿದ್ದಾರೆ.

Related Tags:

Related Posts :

Category: