ಇಳಕಲ್ ಸೀರೆ, ಪೇಟ ತೊಟ್ಟು ಮಹಿಳಾ ಮಣಿಗಳಿಂದ ಬೈಕ್ ಱಲಿ, ಕನ್ನಡದಲ್ಲಿ ಶುಭ ಕೋರಿದ ಆರ್​ಸಿಬಿ ಆಟಗಾರರು!

  • TV9 Web Team
  • Published On - 10:18 AM, 1 Nov 2020

ಬೆಂಗಳೂರು: ರಾಜ್ಯದೆಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಆದ್ರೆ ಕೊರೊನಾ ಹಿನ್ನೆಲೆಯಲ್ಲಿ ಎಲ್ಲೆಡೆ ಸರಳವಾಗಿ ಕನ್ನಡ ಹಬ್ಬವನ್ನ ಆಚರಿಸಲಾಗ್ತಿದೆ. ಹೀಗಾಗಿ ಕನ್ನಡಿಗರಿಗೆ ಆರ್​ಸಿಬಿ ಆಟಗಾರರು ಸಹ ಶುಭ ಕೋರಿದ್ದಾರೆ. ಕ್ಯಾಪ್ಟನ್ ವಿರಾಟ್ ಕೊಹ್ಲಿ, ಎಬಿಡಿ, ದೇವದತ್ ಪಡಿಕ್ಕಲ್ ಸೇರಿದಂತೆ ಆರ್​ಸಿಬಿ ಆಟಗಾರರೆಲ್ಲರೂ ಶುಭ ಕೋರಿದ್ದು ಕನ್ನಡಾಭಿಮಾನಿಗಳಿಗೆ ಸಂತಸವನ್ನುಂಟು ಮಾಡಿದೆ.

ಮತ್ತೊಂದೆಡೆ ಗಣಿನಾಡು ಬಳ್ಳಾರಿಯ ಕೋಟೆ ಮೇಲೆ 65 ಅಡಿ ಉದ್ದದ ಕನ್ನಡ ಧ್ವಜವನ್ನ ಹಾರಿಸಲಾಯ್ತು. ನವಕರ್ನಾಟಕ ಯುವ ಶಕ್ತಿ ಸಂಘಟನೆಯವರು ಧ್ವಜಾರೋಹಣ ನೆರವೇರಿಸಿದ್ರು.

ಇನ್ನು ಕನ್ನಡದ ಬಾವುಟ ಹಿಡಿದು ಮಹಿಳೆಯರು ವಿಧಾನಸೌಧದಿಂದ ಎಂ.ಜಿ.ರಸ್ತೆಯ ಮ್ಯೂಸಿಯಂವರೆಗೆ ಬೈಕ್ ಱಲಿ ಮಾಡಿದ್ದಾರೆ. ಇಳಕಲ್ ಸೀರೆ, ಪೇಟಾ ತೊಟ್ಟು ನಾರಿಯರು ಬೈಕ್ ಚಲಾಯಿಸಿದ್ದಾರೆ.