ಕಬ್ಬಿಣ, ಸಿಮೆಂಟ್​ ಪೂರೈಸ್ತೇನೆ ಅಂತಾ ಹೇಳಿ ದೊಡ್ಡ ಬಿಲ್ಡರ್ಸ್​ಗೆ ವಂಚನೆ: ಅರೆಸ್ಟ್

ಬೆಂಗಳೂರು: ಕಟ್ಟಡ ಸಾಮಗ್ರಿ ಪೂರೈಕೆ ಹೆಸರಲ್ಲಿ ವಂಚಿಸುತ್ತಿದ್ದವನನ್ನ ಈಶಾನ್ಯ ವಿಭಾಗದ CEN​ ಪೊಲೀಸರು ಸೆರೆಹಿಡಿದಿದ್ದಾರೆ. ವಂಚಕ ದಾವೂದ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಷ್ಠಿತ ಕಂಪನಿ ಮ್ಯಾನೇಜರ್​ ಎಂದು ಪರಿಚಯಿಸಿಕೊಳ್ತಿದ್ದ ದಾವೂದ್​ ಪಾಷಾ ಕಟ್ಟಡ ನಿರ್ಮಾಣ ಕಂಪನಿಗಳಿಗೆ ಕಬ್ಬಿಣ, ಸಿಮೆಂಟ್​ ಸೇರಿ ಕಚ್ಚಾ ವಸ್ತು ಪೂರೈಸುತ್ತೇನೆ ಎಂದು ಸಂಪರ್ಕಿಸುತ್ತಿದ್ದನಂತೆ. ಬಳಿಕ ಕಟ್ಟಡ ನಿರ್ಮಾಣ ಕಂಪನಿಗಳಿಂದ ಹಣ ಪಡೆದು ವಂಚಿಸ್ತಿದ್ದ ಎಂದು ಹೇಳಲಾಗಿದೆ.

ಅಂತೆಯೇ, ಬಾಲಾಜಿ ಕನ್​ಸ್ಟ್ರಕ್ಷನ್​ ಅನ್ನೋ ಕಂಪನಿಗೆ ಮೋಸ ಮಾಡಿದ್ದ. ಹಾಗಾಗಿ, ಕಂಪನಿಯವರು CEN​ ಪೊಲೀಸರಿಗೆ  Cyber Crime, Economic Offences & Narcotics Police ದೂರು ನೀಡಿದ್ದರು. ಕಂಪನಿ ನೀಡಿದ ದೂರಿನನ್ವಯ ದಾವೂದ್ ಬಂಧನವಾಗಿದೆ.

Related Tags:

Related Posts :

Category:

error: Content is protected !!