ಹೆಚ್ಚುವರಿ ಸಾಲ ಪಡೆಯಲು ಕರ್ನಾಟಕಕ್ಕೆ ಕೇಂದ್ರದಿಂದ ಅನುಮತಿ

ಬೆಂಗಳೂರು: ಕೊರೊನಾ ಹಾಗೂ ಲಾಕ್​ಡೌನ್​ನಿಂದ ರಾಜ್ಯಗಳ ಆದಾಯ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸಾಲ ಪಡೆಯಲು 5 ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಿಗೆ ಕೇಂದ್ರ ಅನುಮತಿ ನೀಡಿದೆ.

ಐದು ರಾಜ್ಯಗಳಿಗೆ ಒಟ್ಟು 9,913 ಕೋಟಿ ರೂಪಾಯಿಯ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಿರುವ ಕೇಂದ್ರ ಕರ್ನಾಟಕಕ್ಕೆ 4,509 ಕೋಟಿ ರೂಪಾಯಿ ಸಾಲ ಪಡೆಯಲು‌ ಅನುಮತಿ ಕೊಟ್ಟಿದೆ.

ಕೊರೊನಾ ಮತ್ತು ಲಾಕ್​ಡೌನ್​ನಿಂದ ರಾಜ್ಯಗಳ ಆದಾಯ ಕುಸಿತಕಂಡಿತ್ತು. ಹೀಗಾಗಿ, ಹೆಚ್ಚುವರಿ ಸಾಲ ಪಡೆಯಲು ಅನುಮತಿ ಕೋರಿದ್ದವು. ಇದೀಗ, ಸಾಲ ಪಡೆಯಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

Related Tags:

Related Posts :

Category:

error: Content is protected !!