ವಾರಿಯರ್ಸ್‌ಗೆ ಕರ್ನಾಟಕ ಸರ್ಕಾರ ಸಂಬಳ ಕೊಡ್ತಿಲ್ಲ: ಕೋರ್ಟ್​ಗೆ ಕೇಂದ್ರದಿಂದ ಮಾಹಿತಿ!

ನವದೆಹಲಿ: ಕೊರೊನಾ ಮಾಹಮಾರಿಯ ಸಂಕಟ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ಹೆಮ್ಮಾರಿಯ ವಿರುದ್ಧ ಹೊರಾಡುತ್ತಿರುವ ಹೆಲ್ತ್‌ ವರ್ಕರ್ಸ್‌ಗೆ ಕರ್ನಾಟಕ ಸರ್ಕಾರ ಮೋಸ ಮಾಡ್ತಿದೆಯಾ? ಹೀಗೊಂದು ಪ್ರಶ್ನೆ ಮೂಡಲು ಕಾರಣ ಸುಪ್ರೀಮ್‌ ಕೋರ್ಟ್‌ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಮಾಹಿತಿ.

ಹೌದು ಕೇಂದ್ರ ಸರ್ಕಾರ ಸುಪ್ರೀಮ್‌ ಕೋರ್ಟ್‌ಗೆ ಸಲ್ಲಿಸಿದ ಮಾಹಿತಿಯಲ್ಲಿ ಕರ್ನಾಟಕ , ಮಹಾರಾಷ್ಟ್ರ, ತ್ರಿಪುರ ಮತ್ತು ಪಂಜಾಬ್‌ ರಾಜ್ಯಗಳು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೋವಿಡ್‌ ವಾರಿಯರ್ಸ್‌, ಫ್ರಂಟ್‌ಲೈನ್‌ ವರ್ಕರ್ಸ್‌ ಮತ್ತು ಡಾಕ್ಟರ್‌ಗಳಿಗೆ ಸರಿಯಾದ ಸಮಯದಲ್ಲಿ ಸಂಬಳವನ್ನು ನೀಡುತ್ತಿಲ್ಲ. ಈ ಬಗ್ಗೆ ನಿರ್ದೇಶನ ಕೊಟ್ಟರೂ ಅದನ್ನು ಪಾಲಿಸುವಲ್ಲಿ ವಿಫಲವಾಗಿವೆ ಎಂದು ತಿಳಿಸಿದೆ.

ಇದನ್ನು ಕೇಳಿ ಕೆಂಡಾಮಂಡಲವಾಗಿರುವ ಸುಪ್ರೀಂ‌ ಕೋರ್ಟ್‌, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಆರೋಗ್ಯ ಕಾರ್ಯಕರ್ತರ ಪಾತ್ರ ಮಹತ್ತರವಾದದ್ದು. ಅವರಿಗೆ ಯಾವುದೇ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಗುವಂತೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚಿಸಿದೆ.

 

Related Tags:

Related Posts :

Category:

error: Content is protected !!