ಕೋವಿಡ್ ಹೆಚ್ಚಳ: ತಕ್ಷಣ ಕರ್ನಾಟಕಕ್ಕೆ ಉನ್ನತ ತಂಡ ನಿಯೋಜಿಸಿದ ಕೇಂದ್ರ ಸರ್ಕಾರ

ರಾಜ್ಯದಲ್ಲಿ ಕೋವಿಡ್ ನಿರ್ವಹಣೆಗಾಗಿ ತಕ್ಷಣ ಕರ್ನಾಟಕಕ್ಕೆ ಉನ್ನತ ತಂಡವೊಂದನ್ನು ಕೇಂದ್ರ ಸರ್ಕಾರ ನಿಯೋಜಿಸಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಜೊತೆಗೆ ಕೇರಳ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳಕ್ಕೂ ಉನ್ನತ ಮಟ್ಟದ ಕೇಂದ್ರ ತಂಡಗಳು ನಿಯೋಜನೆಗೊಂಡಿವೆ.ಈ ರಾಜ್ಯಗಳಲ್ಲಿ ಇತ್ತೀಚಿಗೆ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಹಾಗಾಗಿ, ಕೊರೊನಾ ಸೋಂಕು ನಿಯಂತ್ರಣ, ಕಣ್ಗಾವಲು, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ ಮತ್ತು ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ ಬಲವರ್ಧನೆಗೆ ಕೇಂದ್ರ ತಂಡ ನೆರವಾಗಲಿದೆ.

ಪ್ರತಿಯೊಂದು ತಂಡದಲ್ಲಿ ಜಂಟಿ ಕಾರ್ಯದರ್ಶಿ (ಆಯಾ ರಾಜ್ಯಕ್ಕೆ ನೋಡಲ್ ಅಧಿಕಾರಿ), ಸಾರ್ವಜನಿಕ ಆರೋಗ್ಯ ಅಂಶಗಳನ್ನು ನೋಡಿಕೊಳ್ಳಲು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಡೆಗಟ್ಟಲು ರಾಜ್ಯವು ಅನುಸರಿಸುತ್ತಿರುವ ಕ್ಲಿನಿಕಲ್ ನಿರ್ವಹನಾ ಶಿಷ್ಟಾಚಾರವನ್ನು ನೋಡಿಕೊಳ್ಳಲು ಒಬ್ಬ ವೈದ್ಯರು ಇರುತ್ತಾರೆ.

ನಿಗ್ರಹ, ಕಣ್ಗಾವಲು, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು ಮತ್ತು ಸಕಾರಾತ್ಮಕ ಪ್ರಕರಣಗಳ ಸಮರ್ಥ ಕ್ಲಿನಿಕಲ್ ನಿರ್ವಹಣೆಯನ್ನು ಬಲಪಡಿಸಲು ರಾಜ್ಯಗಳ ಪ್ರಯತ್ನಗಳನ್ನು ತಂಡಗಳು ಬೆಂಬಲಿಸುತ್ತವೆ. ಸಮಯೋಚಿತ ರೋಗನಿರ್ಣಯ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತವೆ.

ಕರ್ನಾಟಕದಲ್ಲಿ ಒಟ್ಟು 7,43,848 ಪ್ರಕರಣಗಳು ವರದಿಯಾಗಿವೆ. ಇದು ದೇಶದ ಒಟ್ಟು ಪ್ರಕರಣಗಳಲ್ಲಿ ಶೇ.10.1 ಆಗಿದೆ. ಕರ್ನಾಟಕವು ಪ್ರತಿ ಮಿಲಿಯನ್ ಜನಸಂಖ್ಯೆಗೆ 11,010 ಪ್ರಕರಣಗಳನ್ನು ಹೊಂದಿದೆ. ರಾಜ್ಯದಲ್ಲಿ 6,20,008 ರೋಗಿಗಳು ಗುಣಮುಖರಾಗಿದ್ದಾರೆ. ಇದರ ಪರಿಣಾಮವಾಗಿ ಚೇತರಿಕೆ ದರವು ಶೇ.83.35 ಆಗಿದೆ. ಸಕ್ರಿಯ ಪ್ರಕರಣಗಳು 1,13,557 (ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.14.1). ರಾಜ್ಯದಲ್ಲಿ ಒಟ್ಟು 10,283 ಸಾವು ಸಂಭವಿಸಿವೆ. ಒಟ್ಟು ಪ್ರಕರಣಗಳ ಸಾವಿನ ಸಂಖ್ಯೆ ಶೇ.1.38 ನಷ್ಟು ಮತ್ತು ಪ್ರತಿ ಮಿಲಿಯನ್ ಜನಸಂಖ್ಯೆಗೆ 152 ಸಾವುಗಳು ಸಂಭವಿಸಿವೆ. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 95674 ಮತ್ತು ಪಾಸಿಟಿವ್ ದರ ಶೇ.11.5 ಆಗಿದೆ.

ಕೇರಳದಲ್ಲಿ ಒಟ್ಟು 3,17,929 ಪ್ರಕರಣಗಳು ವರದಿಯಾಗಿದ್ದು, ಇದು ಒಟ್ಟು ಪ್ರಕರಣಗಳಲ್ಲಿ ಶೇ.4.3 ಆಗಿದೆ. ಪ್ರತಿ ಹತ್ತು ಲಕ್ಷಕ್ಕೆ 8906 ಪ್ರಕರಣಗಳಾಗಿವೆ. ಚೇತರಿಸಿಕೊಂಡ ಒಟ್ಟು ಪ್ರಕರಣಗಳ ಸಂಖ್ಯೆ 2,22,231 ಇದ್ದು, ಚೇತರಿಕೆಯ ದರ ಶೇ.69.90 ಆಗಿದೆ. ಸಕ್ರಿಯ ಪ್ರಕರಣಗಳು 94,609 (ದೇಶದ ಶೇ. 11.8). ರಾಜ್ಯದಲ್ಲಿ ಒಟ್ಟು 1089 ಸಾವುಗಳು ಸಂಭವಿಸಿದ್ದು, ಪ್ರಕರಣಗಳ ಸಾವಿನ ಪ್ರಮಾಣ ಶೇ.0.34 ಮತ್ತು ಪ್ರತಿ ಹತ್ತು ಲಕ್ಷಕ್ಕೆ 31 ಸಾವುಗಳಾಗಿವೆ. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 53518 ಮತ್ತು ಪಾಸಿಟಿವ್ ದರ ಶೇ.16.6 ಆಗಿದೆ.

ರಾಜಸ್ಥಾನದಲ್ಲಿ ಒಟ್ಟು 1,67,279 ಪ್ರಕರಣಗಳು (ಇದು ದೇಶದ ಒಟ್ಟು ಪ್ರಕರಣಗಳ ಶೇ.2.3), ಪ್ರತಿ ಮಿಲಿಯನ್‌ಗೆ 2,064 ಪ್ರಕರಣಗಳು ಮತ್ತು ಒಟ್ಟು ಚೇತರಿಕೆಯ ಸಂಖ್ಯೆ 1,43,984 ಆಗಿದೆ. ಚೇತರಿಕೆಯ ದರ ಶೇ. 86.07 ರಷ್ಟಿದೆ. ಸದ್ಯದ ಸಕ್ರಿಯ ಪ್ರಕರಣಗಳು 21,587 (ದೇಶದ ೊಟ್ಟು ಸಕ್ರಿಯ ಪ್ರಕರಣಗಳ ಶೇ. 2.7). ರಾಜ್ಯದಲ್ಲಿ ಸಾವಿನ ಸಂಖ್ಯೆ 1,708; ಪ್ರಕರಣಗಳ ಸಾವಿನ ಪ್ರಮಾಣ ಶೇ.1.02; ಮತ್ತು ಪ್ರತಿ ಮಿಲಿಯನ್ ಗೆ 21 ಸಾವುಗಳು ಸಂಭವಿಸಿವೆ. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 38,605 ಆಗಿದ್ದು, ಪಾಸಿಟಿವ್ ದರ ಶೇ.5.3 ಆಗಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು ಪ್ರಕರಣಗಳು 3,09,417 (ರಾಷ್ಟ್ರೀಯ ಪ್ರಕರಣಗಳ ಶೇ. 4.2) ಒಂದು ಮಿಲಿಯನ್ ಜನಸಂಖ್ಯೆಗೆ 3,106 ಪ್ರಕರಣಗಳು ವರದಿಯಾಗಿವೆ. ಒಟ್ಟು ಗುಣಮುಖರಾದವರ ಸಂಖ್ಯೆ 2,71,563 ಮತ್ತು ಚೇತರಿಕೆಯ ದರ ಶೇ.87.77. 31,984 ಸಕ್ರಿಯ ಪ್ರಕರಣಗಳೊಂದಿಗೆ, ರಾಜ್ಯವು ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ. 4.0 ನಷ್ಟು ಪಾಲು ಹೊಂದಿದೆ. ಒಟ್ಟು ಸಾವುಗಳು 5,870; ಪ್ರಕರಣದ ಸಾವಿನ ಪ್ರಮಾಣ ಶೇ. 1.90 ಆಗಿದ್ದರೆ, ಪ್ರತಿ ಮಿಲಿಯನ್ ಜನಸಂಖ್ಯೆಗೆ ಸಾವುಗಳು 59. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 37,872, ಪಾಸಿಟಿವ್ ದರ ಶೇ.8.2 ಆಗಿದೆ.

ಛತ್ತೀಸ್‌ಗಢದಲ್ಲಿ ಒಟ್ಟು 1,53,515 ಪ್ರಕರಣಗಳು ವರದಿಯಾಗಿವೆ. (ದೇಶದ ಒಟ್ಟು ಪ್ರಕರಣಗಳಲ್ಲಿ ಶೇ. 2.1), ಪ್ರತಿ ಮಿಲಿಯನ್‌ಗೆ 5,215 ಪ್ರಕರಣಗಳು. ಒಟ್ಟು 1,23,943 ಮಂದಿ ಗುಣಮುಖರಾಗಿದ್ದಾರೆ. ಮತ್ತು ಚೇತರಿಕೆಯ ದರ ಶೇ.80.74 ಆಗಿದೆ. ಇಲ್ಲಿ 28,187 ಸಕ್ರಿಯ ಪ್ರಕರಣಗಳು ಇದ್ದು, ದೇಶದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಶೇ.3.5 ಆಗಿದೆ. ರಾಜ್ಯದಲ್ಲಿ ಒಟ್ಟು 1385 ಸಾವುಗಳು ಸಂಭವಿಸಿವೆ. ಪ್ರಕರಣಗಳ ಸಾವಿನ ಪ್ರಮಾಣ ಶೇ.0.90 ಮತ್ತು ಪ್ರತಿ ಮಿಲಿಯನ್‌ಗೆ 47 ಸಾವುಗಳು ಸಂಭವಿಸಿವೆ. ಪ್ರತಿ ಹತ್ತು ಲಕ್ಷಕ್ಕೆ ಪರೀಕ್ಷೆಯ ಪ್ರಮಾಣ 50191 ಮತ್ತು ಪಾಸಿಟಿವ್ ದರ ಶೇ.10.4.

ಕೋವಿಡ್ ನಿರ್ವಹಣೆಗಾಗಿ ವಿವಿಧ ರಾಜ್ಯ/ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಪ್ರಯತ್ನಗಳನ್ನು ಬಲಪಡಿಸುವ ನಿರಂತರ ಪ್ರಯತ್ನವಾಗಿ, ಕೇಂದ್ರ ಸರ್ಕಾರವು ಕಾಲಕಾಲಕ್ಕೆ ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಲು ಕೇಂದ್ರ ತಂಡಗಳನ್ನು ನಿಯೋಜಿಸುತ್ತಿದೆ. ಈ ತಂಡಗಳು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತವೆ ಮತ್ತು ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತವೆ. ಅವರ ಪ್ರಯತ್ನಗಳನ್ನು ಬಲಪಡಿಸಲು ಮತ್ತು ತೊಂದರೆಗಳನ್ನು ಪರಿಹರಿಸಲು ನೆರವಾಗುತ್ತವೆ.

Related Tags:

Related Posts :

Category:

error: Content is protected !!