ಸ್ಯಾಂಡಲ್​ವುಡ್ ಸಾರಥಿಗೆ ಹುಟ್ಟುಹಬ್ಬದ ಸಂಭ್ರಮ, 43ನೇ ವಸಂತಕ್ಕೆ ಕಾಲಿಟ್ಟ ಚಾಲೆಂಜಿಂಗ್ ಸ್ಟಾರ್

‘ಮೆಜೆಸ್ಟಿಕ್’​ನಲ್ಲಿ ಕಾಲಿಟ್ಟು.. ‘ಧ್ರುವ’ ತಾರೆಯಾಗಿ ಮಿಂಚಿ. ‘ಕಿಟ್ಟಿ’ ಅನ್ನೋ ಪಟ್ಟ ಗಿಟ್ಟಿಸ್ಕೊಂಡು ರೋಸ್​ ಹಿಡಿದ ‘ಕರಿಯ’ ಇದೀಗ ಅಭಿಮಾನಿಗಳ ಪಾಲಿನ ‘ದಾಸ’. ಸ್ಯಾಂಡಲ್​​ವುಡ್​ನ ‘ಸಾರಥಿ’ ‘ಚಕ್ರವರ್ತಿ’ಯಾಗಿ ಮೆರೆಯುತ್ತಿದ್ದಾರೆ. ಇವತ್ತು ದಚ್ಚು ಫ್ಯಾನ್ಸ್​ ಪಾಲಿಗೆ ವೆರಿ ವೆರಿ​ ಸ್ಪೆಷಲ್ ಡೇ. ಅದೇ ‘ರಾಬರ್ಟ್’ ಬರ್ತ್​​ ಡೇ.

ಖುಷಿ ಎಲ್ಲೆ ಮೀರಿದೆ. ಸಂಭ್ರಮ, ಸಡಗರ ಜೋರಾಗಿದೆ. ಡಿಬಾಸ್. ಡಿಬಾಸ್ ಅನ್ನೋ ಘೋಷಣೆ ಮುಗಿಲು ಮುಟ್ಟಿದೆ. ನಿದ್ದೆ ಬಿಟ್ಟು ಒಡೆಯನ ಕಣ್ತುಂಬಿಕೊಳ್ಳೋಕೆ ದಾಂಗುಡಿ ಇಟ್ಟಿದ್ದಾರೆ. ಡಿಬಾಸ್​​ಗೆ ಅಭಿಮಾನದ ವಿಶ್ ಮಾಡೋಕೆ ಎಲ್ರೂ ಎಂಟ್ರಿ ಕೊಟ್ಟಿದ್ದಾರೆ.

ಸ್ಯಾಂಡಲ್​​ವುಡ್​​​ ‘ಒಡೆಯ’ನಿಗೆ ಹುಟ್ಟುಹಬ್ಬದ ಸಂಭ್ರಮ!
ಚಾಲೆಂಜಿಂಗ್ ಸ್ಟಾರ್ ದರ್ಶನ್​. ಸ್ಯಾಂಡಲ್​​​ವುಡ್​ನಲ್ಲಿ ಸುನಾಮಿಯಂತೆ ಫ್ಯಾನ್ಸ್ ಫಾಲೋವಿಂಗ್ ಹೊಂದಿರೋ ಭೂಪತಿ ಬರ್ತ್​ಡೇ ಜೋರಾಗಿದೆ. ಇವತ್ತು 43ನೇ ವಸಂತಕ್ಕೆ ದಾಸ ಕಾಲಿಟ್ಟಿದ್ರೆ, ಅಭಿಮಾನಿಗಳಲ್ಲಿ ಹಬ್ಬದಂತಹ ಸಂಭ್ರಮ. ದಚ್ಚು ಮೀಟ್ ಆಗೋಕೆ ಕಾತರದಿಂದ ಕಾಯ್ತಿದ್ದ ಅಭಿಮಾನಿಗಳು ಡಿಬಾಸ್ ಜನುಮದಿನವನ್ನ ಅದ್ಧೂರಿಯಾಗಿ ಆಚರಿಸಿದ್ರು.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ದರ್ಶನ್​ ಮನೆ ಬಳಿ ಸಂಭ್ರಮ ಮನೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಯಿಂದ್ಲೂ ಸಾವಿರಾರು ಅಭಿಮಾನಿಗಳು ಆಗಮಿಸಿದ್ರು. ಒಡೆಯನಿಗೆ ಪ್ರೀತಿ, ಅಭಿಮಾನದಿಂದ ಹುಟ್ಟು ಹಬ್ಬದ ಶುಭಾಷಯ ಕೋರಿದ್ರು.

ಡಿಬಾಸ್ ಬರ್ತ್​ ಡೇಗೆ ವಾರಕ್ಕೂ ಮೊದಲೇ ಅಭಿಮಾನಿಗಳು ಸಕಲ ತಯಾರಿ ಮಾಡ್ಕೊಂಡಿದ್ರು. ಪ್ರತೀ ಬಾರಿಯಂತೆ ಈ ಬಾರಿಯೂ ದರ್ಶನ್​ ಮನೆಮುಂದೆ ಸಾಲು ಸಾಲಾಗಿ ಬೃಹತ್ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು. ದರ್ಶನ್​ ಮನೆಯ ಮುಂದೆ ಹಬ್ಬದ ವಾತಾರವಣವೇ ಸೃಷ್ಟಿಯಾಗಿತ್ತು.

ಭೂಪತಿ ಬರ್ತ್​ ಡೇಯನ್ನ ಅಭಿಮಾನಿಗಳು ಭರ್ಜರಿಯಾಗಿ ಸೆಲಬ್ರೇಟ್ ಮಾಡಿದ್ರು. ಕಳೆದ ವರ್ಷ ದರ್ಶನ್ ಮಾಡಿದ ಮನವಿಯನ್ನ ಈ ಬಾರಿಯೂ ಅಭಿಮಾನಿಗಳು ಚಾಚು ತಪ್ಪದೇ ಪಾಲಿಸಿದ್ರು. ಹೂವಿನ ಹಾರ, ಗಿಫ್ಟ್​, ಕೇಕ್​ಗಳನ್ನ ತಂದು ದುಂದುಚ್ಚ ಮಾಡದೇ. ಆಹಾರ ಪದಾರ್ಥಗಳನ್ನ ಹೊತ್ತು ದರ್ಶನ್​ ಮನೆಯತ್ತ ಹೆಜ್ಜೆ ಹಾಕ್ತಿದ್ರು. ದವಸ, ಧಾನ್ಯಗಳನ್ನ ದಾನ ಮಾಡಿ ಮತ್ತೊಬ್ಬರಿಗೆ ನೆರವಾಗಿ ಎಂದು ಮನವಿ ಮಾಡಿದ್ದ ದರ್ಶನ್​ ಮಾತನ್ನ ಈ ಬಾರಿಯೂ ಅಭಿಮಾನಿ ಬಳಗ ಪಾಲಿಸಿದ್ರು.

ಇನ್ನು, ದರ್ಶನ್ ಹುಟ್ಟುಹಬ್ಬಕ್ಕೆ ಅವರ ಸಿನಿಮಾ ತಂಡದಿಂದ ಸರ್ಪ್ರೈಸ್ ಇದ್ದೇ ಇರುತ್ತೆ. ಅಂತೆಯೇ ದರ್ಶನ್ ಅಭಿನಯದ ಬಹು ನೀರೀಕ್ಷಿತ ಚಿತ್ರ ರಾಬರ್ಟ್ ಟೀಸರ್ ಮಧ್ಯರಾತ್ರಿ ರಿಲೀಸ್ ಮಾಡಲಾಯ್ತು. ರಾತ್ರಿ ಕೇಕ್ ಕಟ್ಟಿಂಗ್ ನಂತರ ಇಂದು ಇಡೀ ದಿನ ಅಭಿಮಾನಿಗಳ ನಡುವೆಯೇ ದಚ್ಚು ಕಾಲ ಕಳೆಯಲಿದ್ದಾರೆ.

Related Posts :

Category:

error: Content is protected !!