BREAKING NEWS
India vs Australia, 2nd ODI, LIVE Score: ಭಾರತಕ್ಕೆ ಭರ್ಜರಿ 390 ರನ್​ಗಳ ಗುರಿ ನೀಡಿದ ಆಸಿಸ್!

ಲಾಕ್​ಡೌನ್ ಬಳಿಕ ಮೊದಲ ಏಕದಿನ ಸರಣಿಯಲ್ಲಿ ಪಾಲ್ಗೊಂಡಿರುವ ಭಾರತ, ಆಸ್ಟ್ರೇಲಿಯಾ ವಿರುದ್ಧ ಇಂದು ಎರಡನೇ ಏಕದಿನ ಪಂದ್ಯವನ್ನು ಆಡುತ್ತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ 50 ಓವರ್​ಗಳಲ್ಲಿ, 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿದೆ. ಈ ಮೂಲಕ ಭಾರತಕ್ಕೆ 390 ರನ್​ಗಳ ಟಾರ್ಗೆಟ್ ನೀಡಿದೆ. ಆಸಿಸ್ ಆಟಗಾರರನ್ನು ಕಟ್ಟಿಹಾಕುವಲ್ಲಿ ವಿಫಲರಾದ ಭಾರತೀಯ ಬೌಲರ್​ಗಳು ದುಬಾರಿ ಅನಿಸಿಕೊಂಡಿದ್ದಾರೆ. 390 ರನ್​ಗಳ ಗುರಿ ತಲುಪುವಲ್ಲಿ ಯಶಸ್ವಿಯಾದರೆ ಭಾರತವು ಸರಣಿಯ

x

ಸೆಟ್ಟಲ್ಲಿ ಕೊಡ್ತಿದ್ದ ಇಡ್ಲಿ, ವಡೆ ಮಿಸ್ ಮಾಡಿಕೊಂಡಿದ್ದೆ -8 ತಿಂಗಳ ನಂತ್ರ ಕ್ಯಾಮರಾ ಮುಂದೆ ನಟ ದರ್ಶನ್​

  • KUSHAL V
  • Published On - 13:55 PM, 26 Oct 2020

ಬೆಂಗಳೂರು: ಎಂಟು ತಿಂಗಳ ನಂತರ ಸಿನಿಮಾ ಚಟುವಟಿಕೆ ಆರಂಭವಾಗಿರೋದು ಖುಷಿ ಕೊಟ್ಟಿದೆ. ಸೆಟ್ಟಲ್ಲಿ ನಮಗೆಲ್ಲಾ ಕೊಡುತ್ತಿದ್ದ ಇಡ್ಲಿ, ವಡೆ ಮಿಸ್ ಮಾಡಿಕೊಂಡಿದ್ದೆ ಎಂದು ನಟ ದರ್ಶನ್​ ಹೇಳಿದರು.
ಲಾಕ್​ಡೌನ್‌ ನಂತರ ಸಿನಿಮಾ ಮೂಹೂರ್ತಕ್ಕೆ ಆಗಮಿಸಿದ ನಟ ದರ್ಶನ್ 8 ತಿಂಗಳ ನಂತರ ಮೊದಲನೇ ಬಾರಿ ಕ್ಯಾಮರಾ ಮುಂದೆ ಕಾಣಿಸಿಕೊಂಡರು. ಆಪ್ತ ಧ್ರುವನ್ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದ ದರ್ಶನ್​
ರಾಜರಾಜೇಶ್ವರಿನಗರದ ಶೃಂಗಗಿರಿ ಷಣ್ಮುಖ ದೇವಸ್ಥಾನದಲ್ಲಿ ನಡೆದ ಭಗವಾನ್ ಶ್ರೀಕೃಷ್ಣಪರಮಾತ್ಮ ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು.

ಎಲ್ಲವೂ ಸರಿ ಹೋದ್ಮೇಲೆ ರಾಬರ್ಟ್ ರಿಲೀಸ್ ಆಗಲಿದೆ. ಇನ್ನು ದಸರಾ ಮಿಸ್ ಮಾಡಿಕೊಳ್ಳೋ ಬಗ್ಗೆ ಮಾತನಾಡಿದ ನಟ ಎಲ್ಲರೂ ದಸರಾ ಮಿಸ್ ಮಾಡ್ಕೊಂಡಿದ್ದಾರೆ. ಆದರೆ, ನಾನ್ ಮಾತ್ರ ಅಲ್ಲ ಎಂದು ದರ್ಶನ್​ ಹೇಳಿದರು.