ಸಚಿವ ಸ್ಥಾನ ತ್ಯಜಿಸಲು ನಾಗೇಶ್​ಗೆ ಸೂಚನೆ; ರಾಜೀನಾಮೆ ಕೊಡೊಲ್ಲ ಎಂದು ಬಿಗಿಪಟ್ಟು ಹಿಡಿದಿರುವ ಅಬಕಾರಿ ಸಚಿವ! ಮುಂದೇನು?

ಸಿಎಂ ಸೂಚಿಸಿದರೂ ರಾಜೀನಾಮೆ ಕೊಡದಿರಲು ಸಚಿವ ಹೆಚ್.ನಾಗೇಶ್ ನಿರ್ಧರಿಸಿದ್ದಾರೆ. ನಾಗೇಶ್ ಇಂದು ಸಂಪುಟ‌ ಸಭೆಯಲ್ಲಿ ಭಾಗಿಯಾಗಲಿದ್ದು ಸಂಪುಟ ಸಭೆಯಲ್ಲಿ ಸಚಿವ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಪಡಲಿದ್ದಾರೆ.

  • TV9 Web Team
  • Published On - 10:27 AM, 13 Jan 2021
ಬಿ.ಎಸ್​.ಯಡಿಯೂರಪ್ಪ(ಎಡ) ಹೆಚ್.ನಾಗೇಶ್ (ಬಲ)

ಬೆಂಗಳೂರು: ಹಾಲಿ ಅಬಕಾರಿ ಇಲಾಖೆ ಸಚಿವ ಹೆಚ್​.ನಾಗೇಶ್​ ಅವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಾಕ್ ನೀಡಿದ್ದಾರೆ. ನಾಗೇಶ್​ಗೆ ರಾಜೀನಾಮೆ ನೀಡುವಂತೆ ಖಡಕ್ ಸೂಚನೆ ಕೊಟ್ಟದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಹಾಗಾದ್ರೆ ಇಂದು ಹೆಚ್​.ನಾಗೇಶ್​ ರಾಜೀನಾಮೆ ನಿಶ್ಚಿತವಾ? ಎಂಬ ಪ್ರಶ್ನೆ ಹುಟ್ಟುಕೊಂಡಿದೆ.

ಈಗಾಗಲೇ ರಾಜೀನಾಮೆ ವಿಚಾರವನ್ನು ಸಿಎಂ ಯಡಿಯೂರಪ್ಪ H. ನಾಗೇಶ್ ಗಮನಕ್ಕೆ ತಂದಿದ್ದಾರೆ. ಇಂದು ಬೆಳಗ್ಗೆ ಈ ಬಗ್ಗೆ ನಾಗೇಶ್​ಗೆ ಮತ್ತೊಮ್ಮೆ ಸಿಎಂ ಸೂಚಿಸುವ ಸಾಧ್ಯತೆ ಇದೆ. ಹಾಗೂ ಇಂದು ರಾಜೀನಾಮೆ ನೀಡಿದ್ರೆ.. ಮುಂದೆ ಮತ್ತೆ ಅವಕಾಶ ನೀಡುವ ಭರವಸೆ ನೀಡಿದ್ದಾರಂತೆ. ಒಂದು ವೇಳೆ ಹೆಚ್​.ನಾಗೇಶ್ ರಾಜೀನಾಮೆಗೆ ನಿರಾಕರಿಸಿದಲ್ಲಿ ಸಚಿವ ಸ್ಥಾ‌ನದಿಂದ ವಜಾ ಮಾಡುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡುವ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್ ನಿರ್ದೇಶನ ಇರುವ ಹಿನ್ನೆಲೆಯಲ್ಲಿ ನಾಗೇಶ್ ರಾಜೀನಾಮೆ ಪಡೆಯಲು ಸಿಎಂ ದೃಢ ನಿರ್ಧಾರ ಮಾಡಿದ್ದಾರಂತೆ.

ರಾಜೀನಾಮೆ ಕೊಡದಿರಲು ಸಚಿವ ಹೆಚ್.ನಾಗೇಶ್ ನಿರ್ಧಾರ
ಸಿಎಂ ಸೂಚಿಸಿದರೂ ರಾಜೀನಾಮೆ ಕೊಡದಿರಲು ಸಚಿವ ಹೆಚ್.ನಾಗೇಶ್ ನಿರ್ಧರಿಸಿದ್ದಾರೆ. ನಾಗೇಶ್ ಇಂದು ಸಂಪುಟ‌ ಸಭೆಯಲ್ಲಿ ಭಾಗಿಯಾಗಲಿದ್ದು ಸಂಪುಟ ಸಭೆಯಲ್ಲಿ ಸಚಿವ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನ ಪಡಲಿದ್ದಾರೆ. ತನ್ನನ್ನು ಕೈಬಿಡಲ್ಲವೆಂಬ ವಿಶ್ವಾಸ ಹೊಂದಿರುವ ನಾಗೇಶ್‌ ಹಿರಿಯ ಸಚಿವರಿಂದ ಬೆಂಬಲ ಸಿಗುವ ಭರವಸೆಯಲ್ಲಿದ್ದಾರೆ. ಹೀಗಾಗಿ ರಾಜೀನಾಮೆ ಸಲ್ಲಿಸದಿರಲು ತೀರ್ಮಾನಿಸಿದ್ದಾರೆ.

ವರ್ಗಾವಣೆಗೆ 1 ಕೋಟಿ ಲಂಚ ಕೇಳಿದ ಆರೋಪ: ಸಚಿವ ಹೆಚ್.ನಾಗೇಶ್ ವಿರುದ್ದ ಪ್ರಧಾನಿಗೆ ದೂರು ಕೊಟ್ಟ ಅಬಕಾರಿ ಅಧಿಕಾರಿಯ ಪುತ್ರಿ