ಹತ್ತೇ ದಿನದಲ್ಲಿ ಒಂದು ಸಾವಿರ ಬೆಡ್ ಆಸ್ಪತ್ರೆ ನಿರ್ಮಿಸಿದ ಚೀನಾ!

, ಹತ್ತೇ ದಿನದಲ್ಲಿ ಒಂದು ಸಾವಿರ ಬೆಡ್ ಆಸ್ಪತ್ರೆ ನಿರ್ಮಿಸಿದ ಚೀನಾ!

ಬೀಜಿಂಗ್: ಕೊರೊನಾ ವೈರಸ್ ಸಾವಿನಕೇಕೆಯ ನಡುವೆ ಚೀನಾ ಅದೊಂದು ಪವಾಡ ಮಾಡಿದೆ. ಅದು 10 ದಿನಗಳ ಪವಾಡ. ಚೀನಾದ ಕೊರೊನಾ ಮಾರಿ ಜಗತ್ತಿಗೇ ಭೀತಿ ಸೃಷ್ಟಿಸಿದ್ರೆ, ಚೀನಾ ಮಾಡಿರುವ ಹತ್ತು ದಿನದ ಪವಾಡ ಕಂಡು ಜಗತ್ತು ಬೆರಗಾಗಿದೆ. ಸಮಯದ ವಿರುದ್ಧ ಸಮರ ಸಾರಿ ಗೆದ್ದಿರುವ ಚೀನಾದ ಈ ಹತ್ತು ದಿನದ ಪವಾಡ ನಿಜಕ್ಕೂ ಅದ್ಭುತ.

10 ದಿನದಲ್ಲಿ ಆಸ್ಪತ್ರೆ ನಿರ್ಮಾಣ:
ಕೊರೊನಾ ವೈರಸ್ ಚೀನಾದಲ್ಲಿ ಸಾವಿನ ತಾಂಡವ ಆಡ್ತಿದೆ. ಈ ಭಯಾನಕ ವೈರಸ್‌ ಚೀನಾದಲ್ಲಿ ಈಗಾಗಲೇ 430ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ 20 ಸಾವಿರ ಗಡಿ ದಾಟಿದೆ. ರಾತ್ರಿ ಕಳೆದು ಬೆಳಗಾಗುವಷ್ಟ್ರಲ್ಲಿ ಸಾವಿನ ಸಂಖ್ಯೆ ಐನೂರರ ಗಡಿ ಮುಟ್ಟುವ ಆತಂಕ ಎದುರಾಗಿದೆ. ಇಂತಹ ಸಮಯದಲ್ಲಿ ಹತ್ತೇ ಹತ್ತು ದಿನದಲ್ಲಿ 1 ಸಾವಿರ ಹಾಸಿಗೆ ಇರುವ ಬೃಹತ್ ಆಸ್ಪತ್ರೆ ನಿರ್ಮಿಸಿ ಪವಾಡ ಮಾಡಿದೆ.

ಜ.23ರ ಮಧ್ಯರಾತ್ರಿ ಕಾರ್ಯ ಆರಂಭ:
ಕೊರೊನಾ ವೈರಸ್ ಸಾವಿನ ಬೇಟೆ ಆರಂಭಿಸಿದ ಬೆನ್ನಲ್ಲೇ ಚೀನಾ ಸೋಂಕಿತರಿಗಾಗಿಯೇ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿತ್ತು. ಬೇರೆ ರೋಗಿಗಳಿಗೆ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಆಸ್ಪತ್ರೆ ನಿರ್ಮಿಸಲು ಮುಂದಾಗಿತ್ತು. ಜನವರಿ 23ರ ಮಧ್ಯರಾತ್ರಿ ಆಸ್ಪತ್ರೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ವಿಶಾಲವಾದ ಜಾಗದಲ್ಲಿ 30ಕ್ಕೂ ಅಧಿಕ ಜೆಸಿಬಿಗಳು, ಯಂತ್ರಗಳು ಭೂಮಿ ಅಗೆಯುತ್ತಿರುವ ನೂರಾರು ಟ್ರಕ್‌ಗಳು ಮಣ್ಣು ಸಾಗಿಸುತ್ತಿರುವ ದೃಶ್ಯವನ್ನು ಚೀನಾ ಸರ್ಕಾರಿ ಮಾಧ್ಯಮ ಬಿಡುಗಡೆ ಮಾಡಿತ್ತು.

ಕೊರೊನಾ ವೈರಸ್ ಸೋಂಕಿತರ ಸ್ಥಳಾಂತರ:
ಕೊರೊನಾ ವೈರಸ್ ಸೋಂಕಿತರಿಗಾಗಿಯೇ ಯುದ್ಧೋಪಾದಿಯಲ್ಲಿ ಪ್ರತ್ಯೇಕ ಆಸ್ಪತ್ರೆ ನಿರ್ಮಿಸುವ ಚೀನಾದ ಸಾಹಸವನ್ನು ಇಡೀ ಜಗತ್ತು ಕುತೂಹಲದಿಂದ ಎದುರು ನೋಡ್ತಿತ್ತು. ಹತ್ತು ದಿನದಲ್ಲಿ ಅದು ಬರೋಬ್ಬರಿ ಒಂದು ಸಾವಿರ ಬೆಡ್ ಸಾಮರ್ಥ್ಯದ ಆಸ್ಪತ್ರೆಯನ್ನು ನಿರ್ಮಿಸೋಕೆ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದು ಅಸಾಧ್ಯ ಅನ್ನೋ ಮಾತುಗಳು ವ್ಯಕ್ತವಾಗಿತ್ತು. ಆದ್ರೆ, ಚೀನಾ ಅಸಾಧ್ಯವನ್ನು ಸಾಧಿಸಿ ತೋರಿಸಿದೆ. ಹತ್ತೇ ಹತ್ತು ದಿನದಲ್ಲಿ ಬೃಹತ್ ಆಸ್ಪತ್ರೆಯನ್ನು ನಿರ್ಮಿಸಿದೆ. 10 ದಿನದಲ್ಲಿ ಒಂದು ಸಾವಿರ ಬೆಡ್ ಸಾಮರ್ಥ್ಯದ ಸುಸಜ್ಜಿತ ಆಸ್ಪತ್ರೆ ತಲೆ ಎತ್ತಿ ನಿಂತಿದೆ. ಹತ್ತು ದಿನದಲ್ಲಿ ನಿರ್ಮಾಣವಾದ ಈ ಆಸ್ಪತ್ರೆಗೆ ಈಗಾಗಲೇ ಕೊರೊನಾ ವೈರಸ್ ಸೋಂಕಿತರನ್ನು ಸ್ಥಳಾಂತರ ಕೂಡ ಮಾಡಲಾಗಿದೆ.

, ಹತ್ತೇ ದಿನದಲ್ಲಿ ಒಂದು ಸಾವಿರ ಬೆಡ್ ಆಸ್ಪತ್ರೆ ನಿರ್ಮಿಸಿದ ಚೀನಾ!
, ಹತ್ತೇ ದಿನದಲ್ಲಿ ಒಂದು ಸಾವಿರ ಬೆಡ್ ಆಸ್ಪತ್ರೆ ನಿರ್ಮಿಸಿದ ಚೀನಾ!

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!