ಕೊರೊನಾ ಕೊರೊನಾ.. ಅಂತಿದ್ರೂ ಮಂಗಳ ಗ್ರಹಕ್ಕೆ ಉಪಗ್ರಹ ಹಾರಿಸಿಬಿಟ್ಟ ಚೀನಾ

ಕೊರೊನಾ ಕೊರೊನಾ ಅಂತಾ ಇಡೀ ವಿಶ್ವವೇ ಬಾಯಿ ಬಡಿದುಕೊಳ್ಳುತ್ತಿರೋ ವೇಳೆಯಲ್ಲಿ ಚೀನಾ ಸೈಲೆಂಟ್​ ಆಗಿ ಮಂಗಳದತ್ತ ತನ್ನ ಗಮನ ಹರಿಸಿದೆ. ಹೌದು, ಇಡೀ ಜಗತ್ತೇ ನರಳುವಂತೆ ಮಾಡಿರುವ ಚೀನಾ ಇಂದು ಮಂಗಳ ಗ್ರಹಕ್ಕೆ ವಿಶೇಷವಾದ ಮಾನವರಹಿತ ಉಪಗ್ರಹವನ್ನು ಕಳಿಸುವತ್ತ ಹೆಜ್ಜೆ ಇಟ್ಟಿದೆ.
ಸ್ವರ್ಗಕ್ಕೆ ನನ್ನ ಸವಾಲುಗಳು ಎಂದ ಚೀನಾ!
ಟಿಯನ್​ವೆನ್​-1 (Tianwen-1) ಅಥವಾ ಸ್ವರ್ಗಕ್ಕೆ ನನ್ನ ಸವಾಲುಗಳು (Questions to Heaven) ಎಂಬ ಹೆಸರಿನ ಈ ಉಪಗ್ರಹವನ್ನು ಚೀನಾ ತನ್ನ ಲಾಂಗ್​ ಮಾರ್ಚ್​ ರಾಕೆಟ್​ ಮೂಲಕ ಇಂದು ಯಶಸ್ವಿ ಉಡ್ಡಯನ ಸಾಧಿಸಿದೆ. ವೆಂಚಾಂಗ್​ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿದ ರಾಕೆಟ್​ ಮುಖಾಂತರ ಈ ಉಪಗ್ರಹ ಮಂಗಳ ಗ್ರಹವನ್ನು ಮುಂದಿನ ಫೆಬ್ರವರಿಗೆ ತಲುಪಲಿದೆ.

ಸುಮಾರು 90 ದಿನಗಳ ಕಾಲ ಕಕ್ಷೆಯಲ್ಲಿ ಮಂಗಳನನ್ನ ಸುತ್ತಲಿದ್ದು ಈ ನಡುವೆ ಗ್ರಹದ ಮೇಲೆ ರೋವರ್​ ವಾಹನವೊಂದನ್ನು ಲ್ಯಾಂಡ್​ ಮಾಡಿಸಲಿದೆ. ಅಂದ ಹಾಗೆ, ಈ ಕಾರ್ಯದಲ್ಲಿ ಚೀನಾ ಯಶಸ್ಸು ಕಂಡರೆ ಇಡೀ ವಿಶ್ವದಲ್ಲಿ ಮಂಗಳ ಗ್ರಹವನ್ನು ಕಕ್ಷೆಯಲ್ಲಿ ಸುತ್ತಿ, ರೋವರ್​ ಲ್ಯಾಂಡ್​ ಮಾಡಿಸು ಪ್ರಪ್ರಥಮ ದೇಶವಾಗಲಿದೆ.

Related Tags:

Related Posts :

Category:

error: Content is protected !!