ಸರಿಲೇರು ನೀಕೆವ್ವರು ಕಾರ್ಯಕ್ರಮದಲ್ಲಿ ಏನದು ಚಿರಂಜೀವಿ-ವಿಜಯಶಾಂತಿ ಕೋಪತಾಪದ ರಹಸ್ಯ!

, ಸರಿಲೇರು ನೀಕೆವ್ವರು ಕಾರ್ಯಕ್ರಮದಲ್ಲಿ ಏನದು ಚಿರಂಜೀವಿ-ವಿಜಯಶಾಂತಿ ಕೋಪತಾಪದ ರಹಸ್ಯ!

ಇಂತಹದ್ದೊಂದು ಟ್ರೈಲರ್​ನ್ನು ಹಿಂದೆಯೂ ನೋಡಿಲ್ಲ. ಮುಂದೆಯೋ ನೋಡಕ್ಕಾಗಲ್ಲ. ಅದೇನು ಕಾಮಿಡಿ, ಎಂಥಾ ಡ್ರಾಮಾ. ಸೂಪರ್​ಸ್ಟಾರ್ ಮಹೇಶ್ ಬಾಬು ಹಾಗೂ ನಟಿ ರಶ್ಮಿಕಾಳ ಕಾಮಿಡಿ ಟೈಮಿಂಗ್, ನಿಜಕ್ಕೂ ನೆವರ್ ಬಿಫೋರ್, ಎವರ್ ಆಫ್ಟರ್. ಅಬ್ಬಬ್ಬಬ್ಬಾ.. ಟಾಲಿವುಡ್​ ಸೂಪರ್​ಸ್ಟಾರ್ ಮಹೇಶ್ ಅಭಿನಯದ ಸರಿಲೇರು ನೀಕೆವ್ವರು ಟ್ರೈಲರ್ ನೋಡಿದ್ಮೇಲೆ ನೋಡುಗರ ರಿಯಾಕ್ಷನ್ ಇದು. ಕ್ಲಾಸಿಗೆ ಕ್ಲಾಸ್.. ಮಾಸ್​ಗೆ ಪಕ್ಕಾ ಮಾಸ್ ಎನ್ನುವಂತಿದೆ ಈ ಟ್ರೈಲರ್.

ಸಂಕ್ರಾಂತಿಗೆ ಸಿನಿಮಾ ರಿಲೀಸ್​:
, ಸರಿಲೇರು ನೀಕೆವ್ವರು ಕಾರ್ಯಕ್ರಮದಲ್ಲಿ ಏನದು ಚಿರಂಜೀವಿ-ವಿಜಯಶಾಂತಿ ಕೋಪತಾಪದ ರಹಸ್ಯ!ಪ್ರಿನ್ಸ್ ಮಹೇಶ್ ಬಾಬು ಆಕ್ಷನ್ ಸೀನ್ಸ್ ಈ ಸಿನಿಮಾದಲ್ಲಿ ಬೇರೆ ರೇಂಜ್​ನಲ್ಲಿರಲಿವೆ. ಹಿಂದೆಂದೂ ನಿಮ್ಮನ್ನು ಮಹೇಶ್ ಬಾಬು ನಗಿಸಿಯೇ ಇಲ್ಲ ಅನ್ನೋ ಮಟ್ಟಕ್ಕೆ ಕಾಮಿಡಿ ಇರಲಿದೆ. ಇದೇ ಸಂಕ್ರಾಂತಿಗೆ ರಿಲೀಸ್ ಆಗಲಿರುವ ಸರಿಲೇರು ನೀಕೆವ್ವರು ಚಿತ್ರ ಅಭಿಮಾನಿಗಳಿಗೆ ಡಬಲ್ ಧಮಾಕ. ಜಸ್ಟ್ ಟ್ರೈಲರಷ್ಟೇ ರಿಲೀಸ್ ಆಗಿದ್ದು, ಚಿಕ್ಕ ಬ್ರೇಕ್ ಕೊಡ್ತಿದ್ದೀನಿ, ನಂತರ ಇದೆ ಮಾರಿಹಬ್ಬ ಅನ್ನೋ ಡೈಲಾಗ್ ಹೊಡೆಯೋ ಮೂಲಕ, ಥಿಯೇಟರ್​ನಲ್ಲಿ ಹಬ್ಬ ಮಾಡಿಕೊಳ್ಳಬಹುದು ಅನ್ನೋ ಮುನ್ಸೂಚನೆ ಕೊಟ್ಟಿದ್ದಾರೆ ಪ್ರಿನ್ಸ್.

14 ವರ್ಷ ಬಳಿಕ ಚಿತ್ರರಂಗಕ್ಕೆ ವಿಜಯಶಾಂತಿ  ರೀ ಎಂಟ್ರಿ:
ಸರಿಲೇರು ನೀಕೆವ್ವರು ಮಹೇಶ್ ಬಾಬು ಅಭಿನಯದ 26ನೇ ಸಿನಿಮಾ. ಪ್ರಿನ್ಸ್ ಮಹೇಶ್ ಜೊತೆ ಇದೇ ಮೊದಲ ಬಾರಿಗೆ ರಶ್ಮಿಕಾ ಮಂದಣ್ಣ ಸ್ಕ್ರೀನ್ ಶೇರ್ ಮಾಡಿದ್ರೆ, ಇದೇ ಮೊದಲ ಬಾರಿಗೆ ಮೆಗಾಸ್ಟಾರ್ ಚಿರಂಜೀವಿ ಮಹೇಶ್ ಬಾಬು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ರು. ಇನ್ನು, ಲೇಡಿ ಸೂಪರ್​ಸ್ಟಾರ್ ವಿಜಯಶಾಂತಿ 14ವರ್ಷಗಳ ಬಳಿಕ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಅದ್ರಲ್ಲೂ ಈ ಹಿಂದೆ ಲಿಟಲ್ ಸೂಪರ್​ಸ್ಟಾರ್ ಮಹೇಶ್ ಬಾಬು ಜೊತೆ ನಟಿಸಿದ್ದ ವಿಜಯ್​ಶಾಂತಿ, 32ವರ್ಷಗಳ ಬಳಿಕ ಮತ್ತೆ ಮಹೇಶ್ ಬಾಬು ಜೊತೆ ನಟಿಸಿದ್ದಾರೆ. ಇಷ್ಟೆಲ್ಲಾ ವಿಶೇಷತೆಗಳಿಂದ ಫ್ರೀ ರಿಲೀಸ್ ಈವೆಂಟ್ ಗಮನ ಸೆಳೆದಿತ್ತು. ಇದೆಲ್ಲದರ ನಡುವೆ ವೇದಿಕೆ ಮೇಲೆ ರಶ್ಮಿಕಾ ಮಂದಣ್ಣಳ ಕ್ಯೂಟ್ ಪರ್ಫಾಮೆನ್ಸ್ ಇನ್ನಷ್ಟು ಕ್ಯೂಟ್ ಅನಿಸ್ತು.

ಚಿರಂಜೀವಿ ಮಾತು ನನಗೆ ಸ್ಫೂರ್ತಿ:
, ಸರಿಲೇರು ನೀಕೆವ್ವರು ಕಾರ್ಯಕ್ರಮದಲ್ಲಿ ಏನದು ಚಿರಂಜೀವಿ-ವಿಜಯಶಾಂತಿ ಕೋಪತಾಪದ ರಹಸ್ಯ!ಮೊದಲು ಒಕ್ಕಡು ಸಿನಿಮಾ ನೋಡಿ, ಫೋನ್ ಮಾಡಿ, ಭೇಟಿಯಾಗಿ 2ಗಂಟೆಗಳ ಕಾಲ ಮಾತನಾಡಿದ್ರು. ಆಗ ಚಿರಂಜೀವಿ ಹೇಳಿದ ಮಾತು ನನಗೆ ನಿಜಕ್ಕೂ ಸ್ಫೂರ್ತಿಯಾಗಿದ್ವು. ನಂತರ ಅರ್ಜುನ್ ಸಿನಿಮಾ ಶೂಟಿಂಗ್ ನಡೆಯುವಾಗ ಸೆಟ್​ಗೆ ಬಂದು, ಆ ಸೆಟ್ ನೋಡಿ ನಿನ್ನಂಥವರು ಇಂಡಸ್ಟ್ರಿಯಲ್ಲಿ ಇರಬೇಕು, ತೆಲುಗು ಚಿತ್ರರಂಗವನ್ನು ಇನ್ನೂ ಮುಂದಕ್ಕೆ ಕರೆದುಕೊಂಡು ಹೋಗಬೇಕೆಂದು ಹೇಳಿದ್ರು. ಇಂದಿಗೂ ಅದೆಲ್ಲವನ್ನೂ ನಾನು ನೆನಪಿಸಿಕೊಳ್ತೀನಿ.

ಪೋಕಿರಿ ಸಿನಿಮಾ ನೋಡಿದ ಬಳಿಕ ಜಗನ್ನಾಥ್ ಆಫೀಸ್​ನಲ್ಲಿದ್ದು ನನಗೆ ಫೋನ್ ಮಾಡಿದ್ರು. ನಿನ್ನನ್ನು ಭೇಟಿಯಾಗಬೇಕೆಂದು ಹೇಳಿದ್ರು. ನಾನು ಹೋದೆ, ಆ ಸಿನಿಮಾ ನನ್ನ ಅಭಿನಯದ ಕುರಿತು ಹೆಚ್ಚುಕಮ್ಮಿ 2ಗಂಟೆಗಳ ಕಾಲ ಮಾತನಾಡಿದ್ರು. ಆ ಪದಗಳನ್ನು ನಾನು ಪ್ರತಿ ಸಲ ನೆನಪಿಸಿಕೊಳ್ಳುತ್ತೇನೆ. ನೀವು ಸದಾ ನನಗೆ ಸ್ಫೂರ್ತಿ. ಇಂದಿಗೂ ಭರತ್ ಅನೇ ನೇನು, ಮಹರ್ಶಿ ರಿಲೀಸ್ ಆದ ಸಂದರ್ಭದಲ್ಲಿ ಮೊದಲ ಫೋನ್ ಕಾಲ್ ಅವರಿಂದಲೇ ಬಂದಿತ್ತು. ಅದೇ ರೀತಿ ಜನವರಿ 11ರಂದು ಕೂಡ ಮೊದಲ ಫೋನ್ ಕಾಲ್ ನಿಮ್ಮಿಂದಲೇ ಬರಬೇಕೆಂದು ಮನಸ್ಫೂರ್ತಿಯಾಗಿ ಕೋರಿಕೊಳ್ಳುತ್ತಿದ್ದೇನೆ ಎಂದು ಮೆಗಾಸ್ಟಾರ್ ಚಿರಂಜೀವಿ ಬಗ್ಗೆ ಮಹೇಶ್​ ಹೇಳಿದ್ರು.

ಏನಿದು ಚಿರಂಜೀವಿ, ವಿಜಯಶಾಂತಿ ಕೋಪತಾಪದ ರಹಸ್ಯ?
, ಸರಿಲೇರು ನೀಕೆವ್ವರು ಕಾರ್ಯಕ್ರಮದಲ್ಲಿ ಏನದು ಚಿರಂಜೀವಿ-ವಿಜಯಶಾಂತಿ ಕೋಪತಾಪದ ರಹಸ್ಯ!ಚಿರಂಜೀವಿ ಮತ್ತು ವಿಜಯಶಾಂತಿ ಒಂದು ಕಾಲದ ಸೂಪರ್ ಸಕ್ಸಸ್ ಜೋಡಿ. ಇಬ್ಬರೂ ಜೊತೆಯಾಗಿ 30ಕ್ಕೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ, ಈ ಇಬ್ಬರೂ ರಾಜಕೀಯ ಪ್ರವೇಶದ ಬಳಿಕ ಜೊತೆಯಾಗಿ ಕಾಣಿಸಿಕೊಂಡಿದ್ದೇ ಅಪರೂಪ. ಹೆಚ್ಚುಕಮ್ಮಿ 20ವರ್ಷಗಳ ಬಳಿಕ ಚಿರು-ವಿಜಯ್ ಶಾಂತಿ ವೇದಿಕೆ ಹಂಚಿಕೊಂಡಿದ್ರು. ಈ ವೇಳೆ ಚಿರು ಮತ್ತು ವಿಜಯ್​ಶಾಂತಿ ನಡುವಿನ ಕೋಪ ತಾಪ ಸನ್ನಿವೇಶ, ಸಿನಿಮಾ ಸೀನ್ ನೋಡಿದಂತೆ ಇತ್ತು.

, ಸರಿಲೇರು ನೀಕೆವ್ವರು ಕಾರ್ಯಕ್ರಮದಲ್ಲಿ ಏನದು ಚಿರಂಜೀವಿ-ವಿಜಯಶಾಂತಿ ಕೋಪತಾಪದ ರಹಸ್ಯ!ಚಿರಂಜೀವಿ-ವಿಜಯಶಾಂತಿ ನಿನ್ನ ಮೇಲೆ ನನಗೆ ಸಣ್ಣ ಕೋಪವಿದೆ.
ವಿಜಯಶಾಂತಿ- ಯಾಕೆ
ಚಿರಂಜೀವಿ- ನನಗಿಂತ ಮೊದಲು ನೀನು ರಾಜಕೀಯಕ್ಕೆ ಹೊರಟೆ ಅಲ್ವಾ?
ವಿಜಯಶಾಂತಿ- ಹೌದು, 22ವರ್ಷವಾಗ್ತಿದೆ.
ಚಿರಂಜೀವಿ- ಅಲ್ಲ, 5ವರ್ಷ ಮೊದಲು ಹೋದೆ ಅಂದುಕೊಳ್ತೀನಿ
ವಿಜಯಶಾಂತಿ- ಇಲ್ಲ, 22ವರ್ಷಗಳಾಗ್ತಿವೆ.
ಚಿರಂಜೀವಿ- ಕ್ಷಮಿಸಿ ನಾವು ಸ್ವಲ್ಪ ರಹಸ್ಯವಾಗಿ ಮಾತನಾಡಿಕೊಳ್ತೀವಿ.
ಚಿರಂಜೀವಿ- ಸರಿ, ನನಗಿಂತ ಮುಂದೆ ಹೋದೆ ಅಲ್ವಾ, ಆದ್ರೆ, ನನ್ನನ್ನು ಆ ಮಾತುಗಳು ಹೇಳೋದಕ್ಕೆ ನಿನಗೆ ಮನಸ್ಸು ಹೇಗೆ ಬಂತು?
ವಿಜಯ್ ಶಾಂತಿ- ಪಂಚ್​ ಡೈಲಾಗ್ ಹೊಡೆದ್ರು ಇವರು, ಕೈ ನೋಡಿದ್ಯಾ ಎಷ್ಟು ರಫ್ ಆಗಿದೆ, ರಫ್ ಆಡಿಸಿಬಿಡ್ತೀನಿ, ಎಚ್ಚರಿಕೆ? ರಾಜಕೀಯ ಬೇರೆ, ಸಿನಿಮಾ ಬೇರೆ

ಸಾಕಷ್ಟು ಮನರಂಜನೆ. ಸರಿಸಾಟಿ ಯಾರು ಎನ್ನುವಷ್ಟು ಸಾಹಸಗಳಿಂದ ಸರಿಲೇರು ನೀಕೆವ್ವರು ಸಿನಿಮಾ ಇದೇ ಜನವರಿ 11ರಂದು ತೆರೆಕಾಣ್ತಿದೆ. ಚಿಕ್ಕ ಬ್ರೇಕ್ ನಂತರ ಮಾರಿಹಬ್ಬ ಗ್ಯಾರಂಟಿ. ಟ್ರೈಲರ್​ನಲ್ಲಿ ಬರೋ ಈ ಕೊನೆ ಡೈಲಾಗ್​ನಂತೆ ಸಿನಿಮಾ ಧೂಳೆಬ್ಬಿಸೋ ಸೂಚನೆ ನೀಡಿದೆ.

ನನ್ನ ಮೊದಲ ಹೀರೋ ಕೃಷ್ಣ:
ತೆಲುಗು ಚಿತ್ರರಂಗಕ್ಕೆ ನನ್ನನ್ನು ಪರಿಚಯ ಮಾಡಿಸಿದ್ದು ಹೀರೋ ಕೃಷ್ಣ ಅವರು. ನನ್ನ ಮೊದಲ ಹೀರೋ ಕೃಷ್ಣ ಅವರು. ನನ್ನ ಜೀವನದಲ್ಲಿ ನಾನೆಂದೂ ಮರೆಯುವುದಿಲ್ಲ. ಆ ದಿನಗಳಲ್ಲಿ ಕೃಷ್ಣ ಅವರು, ನನಗೆಷ್ಟು ಬಲ ನೀಡಿ ಇಂಡಸ್ಟ್ರಿಗೆ ಕರೆದು ತಂದು ದಾರಿ ತೋರಿಸಿದ್ರು. ನನ್ನ ಯಶಸ್ಸಿನ ಹೀರೋ ಕೃಷ್ಣ ಅವರು ಅಂತಾ ನಾನು ಗೌರವದಿಂದ ಹೇಳಿಕೊಳ್ಳುತ್ತೇನೆ. ರೀ ಎಂಟ್ರಿ ಮಹೇಶ್ ಬಾಬು ಅವರ ಜೊತೆ ಆಗಿದ್ದು ನನಗೆ ಆಶ್ಚರ್ಯವಾಗಿದೆ. ಮಹೇಶ್ ಬಾಬು ಬಳಿ ಹೇಳಲು ಇಚ್ಛಿಸಿದ್ದೆ, ನಿಮ್ಮ ಮಗ ಬಂದ್ರೂ, ನಿಮ್ಮ ಮಗನೊಂದಿಗೂ ಅಭಿನಯಿಸುತ್ತೇನೆಂದು. ಮೂರು ತಲೆಮಾರು ಆಗುತ್ತೆ ನನಗೆ. ಹೇಳಬೇಕು ಅಂದ್ರೆ ಮಹೇಶ್ ಬಾಬು, ತುಂಬಾ ಸರಳ ವ್ಯಕ್ತಿ. 24ಕ್ಯಾರೆಕ್ಟರ್ ಬಂಗಾರ ಎಂದು ವಿಜಯಶಾಂತಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ರು.

, ಸರಿಲೇರು ನೀಕೆವ್ವರು ಕಾರ್ಯಕ್ರಮದಲ್ಲಿ ಏನದು ಚಿರಂಜೀವಿ-ವಿಜಯಶಾಂತಿ ಕೋಪತಾಪದ ರಹಸ್ಯ!

 

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!