ಕೊರೊನಾದಿಂದ ಪತರಗುಟ್ಟುತ್ತಿದೆ 741 ಎಕರೆಯಷ್ಟು ದೊಡ್ಡ ಸ್ಮಶಾನ!

ಕೊರೊನಾ ಅದೆಂತಹ ನಗ್ನ ಜಗತ್ತಿನ ಪರಿಚಯ ಮಾಡುತ್ತೆ ಗೊತ್ತಾ..? ಆ ವಿವರಗಳನ್ನು ಕೊಡೋದಕ್ಕೂ ಮುಂಚೆ ಆ ತಾಣದ ಹೆಸರನ್ನು ಹೇಳ್ತೀವಿ. ಅದೇ ಈಜಿಪ್ಟ್​ನ ಸಿಟಿ ಆಫ್ ದಿ ​ ಡೆಡ್​​…! ಈಜಿಪ್ಟ್​ನ ರಾಜಧಾನಿ ಕೈರೋದಲ್ಲಿರುವ ಇದು ಸತ್ತವರ ನಗರವೆಂದು ಕರೆಯಲ್ಪಡುತ್ತೆ. ಹಾಗೆಂದು ಅದು ಸತ್ತವರ ನಗರವಲ್ಲ. ಅಲ್ಲೂ ಜನರು ಮನೆ ಕಟ್ಟಿ ಬದುಕುತ್ತಿದ್ದಾರೆ.. ಹೇಳಿ ಕೇಳಿ ಅದು ಈಜಿಪ್ಟ್​ನ ಹಳೆಯ ಮುಸ್ಲಿಂ ಸ್ಮಶಾನ. ಅದಕ್ಕೆ 7 ನೇ ಶತಮಾನದ ಇತಿಹಾಸವಿದೆ.

ಈಗ ಈ ಸಮಾಧಿ ಸ್ಥಳಕ್ಕೆ ಸಂಕಟವೊಂದು ಬಂದೊದಗಿದೆ. ಅದು ಬೇರೆನಲ್ಲಾ ಹೆಮ್ಮಾರಿ ಕೊರೊನಾ..! ಹೆಮ್ಮಾರಿ ಕೊರೊನಾ ಬಂದು ಇಲ್ಲಿನ ನಿವಾಸಿಗಳನ್ನು ಅಡಕತ್ತರಿಗೆ ಸಿಲುಕಿಸಿದೆ. ಅಂದ ಹಾಗೆ ಅಲ್ಲಿರುವ ಜನರ ಸಂಖ್ಯೆ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಾ..! 15 ಲಕ್ಷ ಜನ ಇದೇ ಸ್ಮಶಾನದಲ್ಲಿ ಬದುಕುತ್ತಿದ್ದಾರೆ. ಹೆಣಗಳನ್ನು ಹೂಳುವುದು, ಸಮಾಧಿ ನಿರ್ವಹಣೆ ಮಾಡೋದು ಈ ಜನರ ಕಸುಬು. ಅದಕ್ಕಾಗಿ ಜನ ಕೊಡುವ ಹಣವೇ ಅವರ ಜೀವನಾಧಾರ. ಇನ್ನು ಈ ಜನರಿಗೆ ಮೃತದೇಹವೆಂದರೆ ಭಯವಿಲ್ಲ, ಸಮಾಧಿಯೆಂದರೆ ಭಯವಿಲ್ಲ. ಆದ್ರೆ ಕೊರೊನಾ ಅವರನ್ನು ಭಯ ಬೀಳಿಸಿದೆ.

ಕೊರೊನಾದಿಂದ ಮೃತಪಟ್ಟವರ ಪಾರ್ಥಿವ ಶರೀರವನ್ನು ದೂರದ ಮರುಭೂಮಿಯಲ್ಲಿ ದಫನ್ ಮಾಡಲು ಈಜಿಪ್ಟ್​ ಸರ್ಕಾರ ನಿರ್ಧರಿಸಿರುವುದರಿಂದ ಇಲ್ಲಿ ಶವಸಂಸ್ಕಾರಗಳು ನಡೆಯುತ್ತಿಲ್ಲ. ಹಾಗೆಯೇ ಪ್ರೀತಿ ಪಾತ್ರರ ಸಮಾಧಿ ನೋಡಲು ಯಾರೂ ಬರುತ್ತಿಲ್ಲ. ಹಾಗಾಗಿ ಇವರ ಆದಾಯ ನಿಂತು ಹೋಗಿದೆ.

ಇಲ್ಲಿನ ಜನರಿಗೆ ಸಮಾಧಿಗಳೆೆಂದರೆ ತುಂಬಾನೇ ಗೌರವವಿದೆ. ಮನೆಯ ಅಂಗಳದ ಇಕ್ಕೆಲೆಗಳಲ್ಲೂ ಸಮಾಧಿ ಇದೆ. ಇವರ ನಿತ್ಯದ ದಿನಚರಿ ಸಮಾಧಿಗಳ ಸುತ್ತಲೇ ನಡೆಯುತ್ತಿರುತ್ತೆ. ಆದ್ರೆ ಇದನ್ನೇ ನಂಬಿ ಬದುಕು ಕಟ್ಟಕೊಂಡ ಇಲ್ಲಿನ ಜನರಿಗೆ ಹೆಮ್ಮಾರಿ ಕೊರೊನಾ ಮಹಾ ಆಘಾತ ನೀಡಿದೆ. ಒಂದು ವೇಳೆ ಇಲ್ಲಿ ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟರೆ ಇಲ್ಲೂ ಕೊರೊನಾ ಹಬ್ಬುವ ಭಯವಿದೆ. ಅದಕ್ಕೆ ಅವಕಾಶವಿಲ್ಲವೆಂದಾದರೆ ಅವರ ಆದಾಯದ ಮೂಲ ನಿಂತು ಹೋಗುತ್ತೆ. ಇದೇ ಕಾರಣಕ್ಕೆ ಈ ಜನ ಉಭಯ ಸಂಕಟಕ್ಕೆ ಸಿಲುಕಿದ್ದಾರೆ.

ಅಸಲಿಗೆ ಇಲ್ಲಿನ ಜನರು ಮೊದಲಿನಿಂದಲೂ ಸಮಾಧಿಯ ಜೊತೆ ಬದುಕ್ತಾ ಇರ್ಲಿಲ್ಲ. 1992ರಲ್ಲಿ ಕೈರೋದಲ್ಲಿ ಸಂಭವಿಸಿದ ಭೂಕಂಪ ಇವರನ್ನು 300 ಹೆಕ್ಟೇರ್ ಅಂದ್ರೆ 741 ಎಕರೆ ಜಾಗದಲ್ಲಿ ಸ್ಮಶಾನದಲ್ಲಿ ಉಳಿಯುವಂತೆ ಮಾಡಿತ್ತು. ಹಾಗಾಗಿ, ಇದೊಂದು ದೊಡ್ಡ ಕೊಳೆಗೇರಿ ಪ್ರದೇಶವಾಗಿ ಬೆಳೆಯಲಾರಂಭಿಸಿತು .

ಪಾಳು ಬಿದ್ದಂಥಹ ಕಟ್ಟಡಗಳು. ಮುರುಕಲು ಮನೆ ಆದ್ರು ಒಂದು ಹೆಬ್ಬಾಗಿಲು.. ಈ ಸಮಾಧಿ ತಾಣ ಒಳಗೆ ಸಮಾಧಿಗಳಿವೆ ಅನ್ನೋದನ್ನು ಬಿಟ್ರೆ ಬೇರೆ ಜನಜೀವನ ಸರಳವಾಗಿ ಸಾಗ್ತಾ ಇದೆ. ವರ್ಷಾನುವರ್ಷಗಳಿಂದ ಜನ ಒಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿ ಕೊರೊನಾ ಹರಡಲಾರಂಭಿಸಿದ್ರೆ ಮತ್ತೊಂದು ಕೊರೊನಾ ಟೈಂ ಬಾಂಬ್ ಆಗೋದ್ರಲ್ಲಿ ಸಂಶಯವಿಲ್ಲಾ. ಯಾಕಂದ್ರೆ ಇಲ್ಲಿ ಮೂಲಸೌಕರ್ಯ ಕೊರತೆಯೂ ಕಾಡ್ತಾ ಇದೆ.

Related Posts :

Category:

error: Content is protected !!

This website uses cookies to ensure you get the best experience on our website. Learn more