ನೂತನ ಸಚಿವರಿಗೆ ಖಾತೆ ಹಂಚಿಕೆ: ಕೊಟ್ಟ ಮಾತು ಉಳಿಸಿಕೊಂಡ ಬಿಎಸ್​ವೈ

, ನೂತನ ಸಚಿವರಿಗೆ ಖಾತೆ ಹಂಚಿಕೆ: ಕೊಟ್ಟ ಮಾತು ಉಳಿಸಿಕೊಂಡ ಬಿಎಸ್​ವೈ

ಬೆಂಗಳೂರು: ಬಹುದಿನಗಳಿಂದ ಎಲ್ಲರೂ ಎದುರು ನೋಡ್ತಿದ್ದ ನೂತನ ಸಚಿವರಿಗೆ ಕೊನೆಗೂ ಖಾತೆ ಹಂಚಿಕೆ ಮಾಡಲಾಗಿದೆ. ನೂತನ 10 ಸಚಿವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ.

ಜಲಸಂಪನ್ಮೂಲ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದ ರಮೇಶ್ ಜಾರಕಿಹೊಳಿ, ಕೊನೆಗೂ ಆ ಖಾತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸಚಿವ ರಮೇಶ್ ಜಾರಕಿಹೊಳಿ​ಗೆ ಬಿಎಸ್​ವೈ ಭರ್ಜರಿ ಗಿಫ್ಟ್ ನೀಡಿದ್ದಾರೆ. ಉಳಿದ ಸಚಿವರೆಲ್ಲರಿಗೂ ತಮ್ಮ ನಿರ್ಧಾರದಂತೆ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದಾರೆ.

ನೂತನ ಸಚಿವರಿಗೆ ಹಂಚಿಕೆಯಾಗಿರುವ ಖಾತೆ ಹೀಗಿದೆ:
ಎಸ್.ಟಿ.ಸೋಮಶೇಖರ್‌- ಸಹಕಾರ ಖಾತೆ
ಶಿವರಾಮ್ ಹೆಬ್ಬಾರ್- ಕಾರ್ಮಿಕ ಖಾತೆ
ಬಿ.ಸಿ.ಪಾಟೀಲ್- ಅರಣ್ಯ ಖಾತೆ
ರಮೇಶ್ ಜಾರಕಿಹೊಳಿ- ಜಲಸಂಪನ್ಮೂಲ ಖಾತೆ
ಶ್ರೀಮಂತ ಪಾಟೀಲ್- ಜವಳಿ ಖಾತೆ
ಡಾ.ಕೆ.ಸುಧಾಕರ್- ವೈದ್ಯಕೀಯ ಶಿಕ್ಷಣ ಇಲಾಖೆ
ನಾರಾಯಣಗೌಡ- ಪೌರಾಡಳಿತ, ತೋಟಗಾರಿಕೆ ಇಲಾಖೆ
ಭೈರತಿ ಬಸವರಾಜ್- ನಗರಾಭಿವೃದ್ಧಿ ಖಾತೆ
ಗೋಪಾಲಯ್ಯ- ಸಣ್ಣ ಕೈಗಾರಿಕೆ ಖಾತೆ
ಆನಂದ್‌ ಸಿಂಗ್‌- ಆಹಾರ ಮತ್ತು ನಾಗರಿಕ ಪೂರೈಕೆ

, ನೂತನ ಸಚಿವರಿಗೆ ಖಾತೆ ಹಂಚಿಕೆ: ಕೊಟ್ಟ ಮಾತು ಉಳಿಸಿಕೊಂಡ ಬಿಎಸ್​ವೈ

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!