ರಾಜ್ಯದ ಸಿಎಂ ಮನೆಗೂ ವಕ್ಕರಿಸಿದ ಕೊರೊನಾ ಮಾರಿ

ಬೆಂಗಳೂರು: ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಬದಲಿ ವಾಹನ ಚಾಲಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ದುರಾದೃಷ್ಟವೆಂಬಂತೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಿಷಿಯನ್ ಮತ್ತು ಇನ್ನೊಬ್ಬ ಸಿಬ್ಬಂದಿಗೂ ಕೊರೊನಾ‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಮಾಧಾನಕಾರ ವಿಚಾರವೆನೆಂದರೆ ಈ ಮೂವರು ಸೋಂಕಿಂತರಲ್ಲಿ ಯಾರು ಸಹ ಬಿ.ಎಸ್ ಯಡಿಯೂರಪ್ಪರವರ ನೇರ ಸಂಪರ್ಕಕ್ಕೆ ಬಂದಿಲ್ಲ. ಜೊತೆಗೆ ಸಿಎಂ ಖಾಸಗಿ ನಿವಾಸ ಧವಳಗಿರಿಯಲ್ಲಿನ‌ ಸಿಬ್ಬಂದಿಗೆ ಸೋಂಕು ತಗುಲಿರುವ ಬಗ್ಗೆ ಮಾಹಿತಿಯಿದ್ದು, ಸದ್ಯ ಕೆಲವು ದಿನಗಳಿಂದ ಧವಳಗಿರಿಯಲ್ಲಿ ಸಿಎಂ ವಾಸ್ತವ್ಯವಿಲ್ಲ ಎನ್ನಲಾಗಿದೆ.

ಸದ್ಯಕ್ಕೆ ಸಿಎಂ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ವಾಸ್ತವ್ಯವಿದ್ದು, ಎಲ್ಲಾ ರೀತಿಯ ಮುನ್ನೆಚ್ವರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರಂತೆ. ಸಿಎಂ ಭೇಟಿಗೆಂದು ಬರುವ ಶಾಸಕರಿಗೂ ಸಹ ಹತ್ತಿರಕ್ಕೆ ಸೇರಿಸದೆ ಸಾಮಾಜಿಕ ಅಂತರ ಕಾಯ್ದುಕ್ಕೊಳ್ಳುವುದರ ಮೂಲಕ ಭೇಟಿಗೆ ಅವಕಾಶ ನೀಡುತ್ತಿದ್ದಾರೆಂದು ಸಿಎಂ ಆಪ್ತ ವಲಯ ತಿಳಿಸಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪಗೂ ಕಾಡಿದ ಕೊರೊನಾ ಕಂಟಕ:
ಸಿಎಂ ಬೆಂಗಾವಲು ವಾಹನದ ಚಾಲಕನಿಗೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ಹೋಮ್ ಕ್ವಾರಂಟೈನ್ ಆಗಲು ಸಿಎಂ ಯಡಿಯೂರಪ್ಪ ಸ್ವಯಂ ನಿರ್ಧಾರ ತೆಗೆದುಕೊಂಡಿದ್ದಾರೆ. 5 ದಿನ ಸಿಎಂ ಸ್ವಯಂಪ್ರೇರಿತ ಹೋಮ್ ಕ್ವಾರಂಟೈನ್​ನಲ್ಲಿರಲಿದ್ದಾರೆ. ಸದ್ಯ ಅಧಿಕೃತ ನಿವಾಸ ಕಾವೇರಿಯಲ್ಲಿರಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದ್ದಾರೆ. 5 ದಿನ ಸಾರ್ವಜನಿಕರಿಗೆ ಸಿಎಂ ಭೇಟಿಗೆ ಅವಕಾಶ ಇಲ್ಲ. ಬುಧವಾರದ ಬಳಿಕ ಅಧಿಕೃತ ಕಾರ್ಯಕ್ರಮಗಳಲ್ಲಿ ಸಿಎಂ ಭಾಗಿಯಾಗಲಿದ್ದಾರೆ.

Related Tags:

Related Posts :

Category:

error: Content is protected !!