ಟಾಸ್ಕ್ ಫೋರ್ಸ್ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಫುಲ್ ಡ್ರಿಲ್

ಬೆಂಗಳೂರು: ಇಂದು ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಿಗಳಿಗೆ ತರಾಟೆಗೆ ತೆಗುದುಕೊಂಡ್ರು.

ಜಿಲ್ಲಾಧಿಕಾರಿಗಳ ಸಭೆ ಬಳಿಕ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಬಿಎಸ್​ವೈ ನೇತೃತ್ವದಲ್ಲಿ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ನಡೀತು. ಸಭೆಯಲ್ಲಿ ಕೊರೊನಾ ನಿಯಂತ್ರಣ, ಜಿಲ್ಲಾ ಲಾಕ್​ಡೌನ್ ಬಗ್ಗೆ ಚರ್ಚೆ ಮಾಡಲಾಯ್ತು. ಈ ವೇಳೆ ಸಿಎಂ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ್ರು.

ಬಿಐಇಸಿಗೆ ಕೋವಿಡ್ ಕೇರ್ ಸೆಂಟರ್​ನಲ್ಲಿ ಬೆಡ್​ಗಳನ್ನು ಬಾಡಿಗೆಗೆ ತಂದಿದ್ದು ಯಾಕೆ? ಎರಡು ತಿಂಗಳಲ್ಲಿ ಅದರ ಬಾಡಿಗೆ ಎಷ್ಟಾಗುತ್ತದೆ ಎಂದು ಪ್ರಶ್ನಿಸಿದ್ರು. ನನ್ನ ಗಮನಕ್ಕೆ ತಾರದೆ ಅಷ್ಟು ದೊಡ್ಡ ನಿರ್ಧಾರ ಹೇಗೆ ಕೈಗೊಂಡ್ರಿ? ಬಿಐಇಸಿಯಲ್ಲಿ ಬೆಡ್ ಬಾಡಿಗೆಗೆ ಪಡೆಯದೇ ಖರೀದಿ ಮಾಡಿ. ನಂತರ ಅವುಗಳನ್ನು ಬೇರೆಯದಕ್ಕೆ ಬಳಸಿಕೊಳ್ಳಿ ಎಂದು ಕ್ಲಾಸ್ ತಗೊಂಡ್ರು.

ಜೊತೆಗೆ ಆಂಬುಲೆನ್ಸ್ ಯಾಕೆ ಇನ್ನೂ ಖರೀದಿ ಆಗಿಲ್ಲ. ಇದು ಕೊನೆ ಬಾರಿಯ ಲಾಕ್​ಡೌನ್ ಅಷ್ಟೇ. ಮುಂದಿನ ಸಭೆಯ ವೇಳೆಗೆ ಎಲ್ಲ ಸಮಸ್ಯೆ ಬಗೆಹರಿಸಿರಬೇಕು. ಸಮಸ್ಯೆ ಪರಿಹರಿಸದಿದ್ದರೆ ನಿಮ್ಮ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತೆ ಎಂದು ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

15-20 ದಿನಗಳಿಂದ ಆಂಬುಲೆನ್ಸ್ ಬಗ್ಗೆ ಮಾತಾಡ್ತಾ ಇದ್ದೀರಿ. ಏನು ಕೆಲ್ಸ ಆಗಿದೆ? ಇಂದಿನ ಸಭೆ ಬಳಿಕ ನಾನು ನಿಮ್ಮನ್ನು‌ ಯಾರನ್ನೂ ಕರೆಯಲ್ಲ. ನಾನು ಯಾರ ಜೊತೆಯೂ ಒಂದು ಶಬ್ದ ಮಾತಾಡುವುದಿಲ್ಲ. ನಾನು ಏನು ಸೂಚನೆ ಕೊಡುತ್ತೇನೋ ಅದು ಪಾಲಿಸಬೇಕು. ಬೇರೆ ಪ್ರಶ್ನೆ ಯಾವನೂ ಕೇಳಕೂಡದು ಎಂದು ತರಾಟೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಸಿಎಂ ಯಡಿಯೂರಪ್ಪ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.

Related Tags:

Related Posts :

Category:

error: Content is protected !!