ಮಳೆ ನಿಲ್ಲಲೆಂದು ಶೃಂಗೇರಿ ಶಾರದಾಂಬೆಯ ಮೊರೆ ಹೋದ ಸಿಎಂ ಯಡಿಯೂರಪ್ಪ

ಚಿಕ್ಕಮಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮುಂಜಾನೆಯೇ ಶೃಂಗೇರಿಗೆ ಭೇಟಿನೀಡಿದ್ದಾರೆ. ಶೃಂಗೇರಿ ಶಾರದ ಮಠಕ್ಕೆ ಆಗಮಿಸಿದ ಸಿಎಂ ಗುರು ಭವನಕ್ಕೆ ತೆರಳಿ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿಧುಶೇಖರ ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದಾರೆ. ನಂತರ ಶಾರದಾಂಬೆ ಹಾಗೂ ಗೌರಿಗದ್ದೆಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ.

 ಉತ್ತರ ಕರ್ನಾಟಕದಲ್ಲಿನ ಭಾರಿ ಪ್ರವಾಹ, ರಾಜ್ಯದಲ್ಲಿ ಆಗುತ್ತಿರುವ ಮಳೆಯನ್ನು ನಿಲ್ಲಿಸುವಂತೆ ಶೃಂಗೇರಿ ಶಾರದಾಂಬೆ ಮೊರೆ ಹೋದ ಸಿಎಂಗೆ ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ ಸಾಥ್ ನೀಡಿದ್ದು, ದೇವಿ ಪೂಜೆ ಬಳಿಕ ಗೌರಿಗದ್ದೆ ಆಶ್ರಮಕ್ಕೆ ಭೇಟಿ ನೀಡಿದ್ರು.

ಈ ವೇಳೆ ಮಾತನಾಡಿದ ಸಿಎಂ ಶಾರದಾಂಬೆ ಹಾಗೂ ಗೌರಿಗದ್ದೆಯಲ್ಲಿ ಪೂಜೆಗಾಗಿ ಬಂದಿದ್ದೇನೆ, ಹಿಂದೆ ಮಳೆ ಬರಲೆಂದು ಪೂಜೆ ಮಾಡ್ತಿದ್ವಿ ಆದರೆ ಈಗ ಮಳೆ ನಿಲ್ಲಲ್ಲೆಂದು ಪೂಜೆ ಮಾಡ್ತಿದ್ದೇವೆ ಎಂದು ಹೇಳಿಕೆ  ನೀಡಿದ್ರು. ಅಲ್ಲದೆ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಕುರಿತು ಮಾತನಾಡಿದ ಸಿಎಂ, ವಿರೋಧ ಪಕ್ಷದವರು ತಮ್ಮ ಅಸ್ತಿತ್ವ ತೋರಿಸಬೇಕಾಗಿದೆ, ಹೀಗಾಗಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ರು.Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!