ನೆರೆ ‘ಹೊರೆ’: 3 ದಿನ ತವರಿಗೆ ಹೊರಟುನಿಂತ CM ಯಡಿಯೂರಪ್ಪ!

ಶಿವಮೊಗ್ಗ: ನೆರೆ ಪೀಡಿತ ಪ್ರದೇಶಗಳಿಗೆ ಹೋಗಿ ಅಂದ್ರೆ ಸಿಎಂ ಬಿ.ಎಸ್. ಯಡಿಯೂರಪ್ಪ ತವರಿಗೆ ಹೊರಟಿದ್ದಾರೆ. ನಾಳೆಯಿಂದ 3 ದಿನಗಳ ಕಾಲ ಸಿಎಂ ತವರು ಕ್ಷೇತ್ರ ಶಿಕಾರಿಪುರಕ್ಕೆ ಪ್ರವಾಸ ಬೆಳೆಸಲಿದ್ದಾರೆ.

ನಾಳೆ ಮಧ್ಯಾಹ್ನ ಬೆಂಗಳೂರಿಂದ ಶಿಕಾರಿಪುರದತ್ತ ಪ್ರಯಾಣ ಬೆಳೆಸಲಿದ್ದು ಅಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಲಾಕ್‌ಡೌನ್‌ ನಂತರ ಇದೇ ಮೊದಲ ಬಾರಿಗೆ ಸಿಎಂ‌ ತವರು ಕ್ಷೇತ್ರಕ್ಕೆ ತೆರಳಿದ್ದಾರೆ. ಇನ್ನು ಸಿಎಂ ಪ್ರವಾಸ ಕೈಗೊಂಡಿರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೆರೆಯಿಂದ ಜನ ಪರದಾಡುತ್ತಿರುವಾಗ ಅಭಿವೃದ್ಧಿ ಕಾರ್ಯಕ್ರಮ ಹೆಚ್ಚಾಯ್ತಾ? ಮಳೆ, ಪ್ರವಾಹದಿಂದ ಜನರು ಒದ್ದಾಡ್ತಿರೋದು ಕಣ್ಣಿಗೆ ಕಾಣ್ತಿಲ್ವೆ ಸಿಎಂ ಸಾಹೇಬ್ರೆಗೆ? ಇದೇನಾ ನಿಮ್ಮ ಕಾಳಜಿ, ಇದೇನಾ ರೈತರ ಕಣ್ಣೀರು ಒರೆಸೋ ಪರಿ? ಉತ್ತರ ಕರ್ನಾಟಕದಲ್ಲಿ ಮಳೆಯಿಂದಾದ ನಷ್ಟದ ಲೆಕ್ಕ ಹೇಳಿದ್ರೆ ಸಾಕಾ? ಉತ್ತರ ಕರ್ನಾಟಕದ ಜನರ ಜೊತೆ ರಾಜ್ಯ ಸರ್ಕಾರ ನಿಲ್ಲುತ್ತದೆ ಅನ್ನೋದು ಬಾಯಿ ಮಾತಾ? ಎಂದು ಆಕ್ರೋಶ ಹೊರ ಹಾಕಿದ್ದಾರೆ.

Related Tags:

Related Posts :

Category:

error: Content is protected !!