ಕೋವಿಡ್ ಸೆಂಟರ್​ಗಳಲ್ಲಿ ಭಾರಿ ಅಕ್ರಮದ ಬೆಡ್ ಬಾಡಿಗೆ ವ್ಯವಹಾರಕ್ಕೆ ಬ್ರೇಕ್


ಬೆಂಗಳೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಸಂದರ್ಭದಲ್ಲಿ ಬೆಡ್ ಬಾಡಿಗೆಗೆ ಪಡೆಯುವ ವ್ಯವಹಾರಕ್ಕೆ ಸಿಎಂ ಯಡಿಯೂರಪ್ಪ ಬ್ರೇಕ್ ಹಾಕಿದ್ದಾರೆ. ನಿನ್ನೆ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ಬಾಡಿಗೆಗೆ ಪಡೆಯದೇ ನೇರವಾಗಿ ಖರೀದಿ ಮಾಡಲು ಸೂಚನೆ ನೀಡಿದ್ದರು. ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಬಾಡಿಗೆಗೆ ಪಡೆಯುವ ವಸ್ತುಗಳ ಬಾಡಿಗೆ ಮೂಲ ಬೆಲೆಗಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚು ಹಣ ತೆರಲಾಗಿತ್ತು.

ತಮ್ಮ ಗಮನಕ್ಕೆ ತಾರದೇ ಬಾಡಿಗೆಗೆ ಪಡೆಯುವ ನಿರ್ಧಾರ ತೆಗೆದುಕೊಂಡಿದ್ದಕ್ಕೆ ಸಿಎಂ ತರಾಟೆಗೆತ್ತಿಕೊಂಡಿದ್ದರು. ಈ ಮೂಲಕ ಮತ್ತೊಂದು ಅವ್ಯವಹಾರದ ಆರೋಪಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಂಡು ರಾಜ್ಯ ಸರ್ಕಾರ ಡ್ಯಾಮೇಜ್ ಕಂಟ್ರೋಲ್ ಮಾಡಿತ್ತು. ತಾಜಾ ಬೆಳವಣಿಗೆಗೆ ವೀಕ್ಷಿಸಿ ಟೊವಿ9 ಕನ್ನಡ ಯೂಟ್ಯೂಬ್ ಲೈವ್

Related Tags:

Related Posts :

Category:

error: Content is protected !!