ಶಿವಮೊಗ್ಗ ಕಾಲೇಜಿನಲ್ಲಿ ಕಲರ್​ಫುಲ್ ಲೋಕ! ಸೀರೆಯುಟ್ಟು ಹೆಜ್ಜೆ ಹಾಕಿದ ವಿದ್ಯಾರ್ಥಿನಿಯರು

ಶಿವಮೊಗ್ಗ: ಸೀರೆಯುಟ್ಟು ಹೆಜ್ಜೆ ಹಾಕ್ತಿರೋ ಚೆಂದುಳ್ಳಿಯರು. ಟ್ರೆಂಡಿ ಡ್ರೆಸ್​ನಲ್ಲಿ ವೈಯ್ಯಾರ ತೋರ್ತಿರೋ ಚಕೋರಿಯರು. ಸ್ಟೈಲ್​ನಲ್ಲೇ ಬ್ಯೂಟಿಗಳು ಚಮಕ್. ಪಂಚೆ ತೊಟ್ಟು, ಶಲ್ಯ ಧರಿಸಿ ಹುಡುಗ್ರು ಎಂಟ್ರಿ ಕೊಟ್ರೆ ಕೇಳ್ಬೇಕಾ.

ಟ್ರೆಡಿಶನಲ್​​ ಡೇ ಅಂದ್ರೆ ಕಾಲೇಜ್ ಕುವರಿಯರು ಕನ್ನಡಿ ಬಿಟ್ಟು ಹೊರಗೆ ಬರೋದೆ ಇಲ್ಲ. ಅದ್ರಲ್ಲೂ ಗಂಡೈಕ್ಳಂತೂ ಪಂಚೆ ಉಟ್ಕೊಂಡು ಬ್ಲ್ಯಾಕ್​ ಕಲರ್ ಶರ್ಟ್ ತೊಟ್ಟು ಗಾಗಲ್ ಹಾಕ್ಕೊಂಡು ರೌಂಡ್ಸ್ ಹಾಕಿದ್ರೆ ಮುಗಿದೋಯ್ತು ಕಥೆ. ಅಂದ್ಹಾಗೆ ಶಿವಮೊಗ್ಗ ನಗರದಲ್ಲಿರೋ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ಯಾಂಪಸ್ ಸಿಕ್ಕಾಪಟ್ಟೆ ಕಲರ್​ಫುಲ್ ಆಗಿತ್ತು. ಇಷ್ಟು ದಿನ ಪಾಠ ಅಂತಿದ್ದ ಸ್ಟೂಡೆಂಟ್ಸ್​ ಕ್ಲಾಸ್​​ಗೆ ಮಾರೋ ಗೋಲಿ, ಮಾಡ್ರೋ ಹಾವಳಿ ಅಂದ್ರು.

ಕಲರ್​​ಫುಲ್ ಡ್ರೆಸ್​​ನಲ್ಲಿ ಮಿಂಚಿದ ವಿದ್ಯಾರ್ಥಿಗಳು:
ಇಷ್ಟು ದಿನ ಯೂನಿಫಾರ್ಮ್​ ಹಾಕ್ಕೊಂಡು ಕಾಲೇಜ್​ಗೆ ಎಂಟ್ರಿ ಕೊಡ್ತಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು ಕಲರ್​​ಫುಲ್ ಡ್ರೆಸ್​​ನಲ್ಲಿ ಮಿಂಚಿದ್ದೇ ಮಿಂಚಿದ್ದು. ಕಾಲೇಜ್​​ನಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಟ್ರೆಡಿಶನಲ್ ಡೇಯಲ್ಲಿ ಸ್ಟೂಡೆಂಟ್ಸ್​ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ರು. ಹುಡುಗಿಯರು ಸಾಂಸ್ಕೃತಿಕ ಉಡುಗೆಯಲ್ಲಿ ಮಿಂಚಿದ್ರೆ, ಹುಡುಗರು ಹಳ್ಳಿ ಸ್ಟೈಲ್​ ಡ್ರೆಸ್​ನಲ್ಲಿ ಲುಕ್ ಕೊಟ್ರು.

ಬರೀ ಕ್ಲಾಸ್​​.. ಎಕ್ಸಾಂ ಅಂತಿದ್ದ ವಿದ್ಯಾರ್ಥಿಗಳು ಫುಲ್ ಖುಷಿ ಮೂಡ್​​ನಲ್ಲಿದ್ರು. ಕೆಲವರು ಫ್ರೆಂಡ್ಸ್​ ಜೊತೆ ಸೆಲ್ಫಿಗೆ ಪೋಸ್​​ ಕೊಟ್ರು. ಇತ್ತ ಉಪನ್ಯಾಸಕರು ಕೂಡ ವಿದ್ಯಾರ್ಥಿಗಳ ಜೊತೆ ಹೆಜ್ಜೆ ಹಾಕಿದ್ರು. ಒಟ್ನಲ್ಲಿ ಇಷ್ಟು ದಿನ ಮೊಬೈಲ್ ಫೋನ್, ಕ್ಲಾಸ್​ ರೂಂಗಳಲ್ಲಿ ಪಾಠದ ಟೆನ್ಷನ್​ನಲ್ಲಿ ಬ್ಯುಸಿಯಾಗಿದ್ದ ವಿದ್ಯಾರ್ಥಿಗಳು ಟ್ರೆಡಿಶನ್ ಡೇ ಸ್ಪೆಷಲ್​​ನಲ್ಲಿ ಮಿಂದೆದ್ರು. ಹುಡುಗಿಯರು ಡಿಫರೆಂಟ್ ಡ್ರೆಸ್​ನಲ್ಲಿ ಮಿಂಚಿದ್ರೆ, ಗಂಡೈಕ್ಳು ನಾವ್ಯಾರಿಗೂ ಕಡಿಮೆ ಇಲ್ಲ ಅಂತ ಲುಕ್ ಕೊಟ್ರು.






Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!