ಆಸ್ಪತ್ರೆಯಲ್ಲಿ ಬೆಡ್​ ಸಿಗದೆ ಶಾಸಕ ಜಮೀರ್ ಆಪ್ತನ ಸಾವು

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆಸ್ಪತ್ರೆಯಲ್ಲಿ ಬೆಡ್​ ಸಿಗದೆ ಸಾಯುವವರ ಸಂಖ್ಯೆ ದಿನೇ ದಿನೇ ಏರುತ್ತಲೆ ಇದೆ. ನಗರದ ರಾಯಪುರ ವಾರ್ಡ್​ನ ಕಾಂಗ್ರೆಸ್ ಮುಖಂಡರಾದ ನಜೀರ್ ಅಹಮದ್ ಅವರು ಸಾವನ್ನಪ್ಪಿದ್ದಾರೆ. ನಜೀರ್ ಅಹಮದ್, ಶಾಸಕ ಜಮೀರ್ ಅಹಮದ್ ಅವರ ಆಪ್ತರಾಗಿದ್ದು ತೀವ್ರ ಉಸಿರಾಟ ಸಮಸ್ಯೆಯಿಂದ ಬೃಂದಾವನ ಆಸ್ಪತ್ರೆಗೆ ತೆರಳಿದ್ದಾರೆ. ಬೃಂದಾವನ ಆಸ್ಪತ್ರೆಯಲ್ಲಿ ಸ್ವಾಬ್ ಪರೀಕ್ಷೆ ಮಾತ್ರ ತೆಗೆದುಕೊಂಡ ಆಸ್ಪತ್ರೆಯ ಸಿಬ್ಬಂದಿ, ನಜೀರ್ ಅಹಮದ್ ಅವರನ್ನು ವಾಪಸ್ ಕಳಿಸಿದ್ದಾರೆ.

ಅಲ್ಲಿಂದ ಲೀಲಾವತಿ ಆಸ್ಪತ್ರೆಗೆ ಹೋದ ನಜೀರ್ ಅಹಮದ್​, ICU ಸಿಗುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ನಿನ್ನೆ ನಜೀರ್ ಅವರ ಸ್ವಾಬ್ ರಿಪೋರ್ಟ್ ಪಾಸಿಟಿವ್ ಬಂದಿದ್ದು, ಉಸಿರಾಟದ ಸಮಸ್ಯೆ ಬಿಟ್ಟು ಬೇರೆ ಯಾವುದೇ ಸಮಸ್ಯೆ ಇರಲಿಲ್ಲ. ಬೃಂದಾವನ ಆಸ್ಪತ್ರೆಯಲ್ಲೇ ಕೂಡಲೇ ಚಿಕಿತ್ಸೆಗೆ ಒಳಪಡಿಸಿದ್ದರೆ ಬದುಕುವ ಸಾಧ್ಯತೆ ಹೆಚ್ಚಿತ್ತೆಂದು ಕುಟುಂಬದವರು ಆರೋಪ ಮಾಡಿದ್ದಾರೆ.

Related Tags:

Related Posts :

Category:

error: Content is protected !!